ಒಂದೆಡೆ ನಿರಂತರ ಮಳೆ, ಮತ್ತೊಂದೆಡೆ ಬಸವನ ಹುಳುವಿನ ಕಾಟ.. ಈಗಾಗಲೇ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿರುವ ರೈತರು ಬಸವನ ಹುಳುವಿನ ಕಾಟದಿಂದ ಕಂಗಾಲಾಗಿ ಹೋಗಿದ್ದಾರೆ.
ವರದಿ: ಶರಣಯ್ಯ ಹಿರೇಮಠ ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ (ಜು.09): ಒಂದೆಡೆ ನಿರಂತರ ಮಳೆ, ಮತ್ತೊಂದೆಡೆ ಬಸವನ ಹುಳುವಿನ ಕಾಟ.. ಈಗಾಗಲೇ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿರುವ ರೈತರು ಬಸವನ ಹುಳುವಿನ ಕಾಟದಿಂದ ಕಂಗಾಲಾಗಿ ಹೋಗಿದ್ದಾರೆ. ಬಸವನ ಹುಳು. ಶಂಕದ ಹುಳು.. ಈ ರೀತಿ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಈ ಒಂದು ಪುಟ್ಟ ಹುಳು ಕಲಬುರಗಿ, ಬೀದರ, ಯಾದಗಿರಿ, ಭಾಗದ ರೈತರ ನಿದ್ದೆಗೆಡಿಸಿದೆ.
ದ್ವಿದಳ ಧಾನ್ಯದ ಬೆಳೆಗೆ ಕಾಟ: ಈ ಬಸವನ ಹುಳು ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ. ಅಂಟು ಅಂಟಾದ ಸಲೈವಾ ಸುರಿಸುತ್ತಾ ಅದೇ ದಾರಿಯಲ್ಲಿ ಸಾಗುವ ಈ ಬಸವನ ಹುಳು, ಅತ್ಯಂತ ತಂಪಾದ ಪ್ರದೇಶದಲ್ಲಿ ಕಂಡು ಬರುವುದು ಸಾಮಾನ್ಯ. ಆದರೆ ಈ ಪುಟ್ಟ ಹುಳ ಈಗ ಅಕ್ಷರಶಃ ರೈತರ ನಿದ್ದೆಗೆಡಿಸಿದೆ.
ಅತಿ ಬೇಗ ಸಂತತಿ.. ಬೆಳೆ ನಾಶದಲ್ಲಿ ಎಕ್ಸ್‌ಪರ್ಟ್: ಈ ಬಸವನ ಹುಳು ಸಾಗುವ ವೇಗ ಅತ್ಯಂತ ನಿಧಾನ. ಇದಕ್ಕೆ ದ್ವಿದಳ ಧಾನ್ಯಗಳ ಬೆಳೆಗಳು ಅಂದ್ರೆ ಪಂಚಪ್ರಾಣ. ಬೀಜ ಮೊಳಕೆಯೊಡೆದು ಎರಡು ಮೂರು ಎಲೆ ಇರುವ ಹಂತದಲ್ಲಿಯೇ ಆ ಬೆಳೆಯನ್ನು ಸಂಪೂರ್ಣ ನುಂಗಿ ಹಾಕುವ ಅತ್ಯಂತ ಅಪಾಯಕಾರಿ ಹುಳ ಇದು.
ಹೆಸರು, ಉದ್ದು, ಸೋಯಾದಲ್ಲಿ ವ್ಯಾಪಕ: ದ್ವಿದಳ ಧಾನ್ಯದ ಬೆಳೆಗಳಾದ ಹೆಸರು, ಸೋಯಾಬೀನ್, ಉದ್ದು ಇತರ ಬೆಳೆಗಳಲ್ಲಿ ಈ ಹುಳುಗಳ ಕಾಟ ವಿಪರೀತವಾಗಿ ಕಂಡು ಬರುತ್ತಿದೆ. ಅತಿ ಬೇಗ ತನ್ನ ಸಂತತಿಯನ್ನು ಹೆಚ್ಚಿಸುವ ಸಾಮರ್ಥ್ಯದ ಬೆಳೆ ವಿನಾಶಕಾರಿ ಹುಳು ಇದು.
ಕಲಬುರಗಿಯಲ್ಲೂ ಭಾರೀ ಮಳೆ: ರೆಡ್ ಅಲರ್ಟ್, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಸಂಜೆಯಾಗುತ್ತಲೇ ಆಕ್ರಮಣ: ಹೊಲದ ಬದುಗಳಲ್ಲಿನ ಹುಲ್ಲು, ಕಸಕಡ್ಡಿ, ಪೊದೆಗಳಲ್ಲಿ ಅಡಗಿರುವ ಈ ಹುಳುಗಳು, ಸಂಜೆಯಾಗುತ್ತಲೇ ಬೇಟೆಗಿಳಿಯುತ್ತವೆ. ಸೂರ್ಯನ ಬಿಸಿಲಿಂದ ತಪ್ಪಿಸಿಕೊಳ್ಳಲು ರಾತ್ರಿ ಕಾರ್ಯಾಚರಣೆ ನಡೆಸುವ ಜೀವಿ ಇದು. ಒಂದು ವೇಳೆ ಬಿಸಿಲು ಇಲ್ಲದೇ ಮಳೆ, ಮೋಡ ಕವಿದ ವಾತಾವರಣ ಇದ್ದಲ್ಲಿ ಹಗಲು ಹೊತ್ತಲ್ಲೂ ಬೇಟೆಗಿಳಿಯುತ್ತವೆ.
ರಾತ್ರೋ ರಾತ್ರಿ ಬೆಳೆ ನುಂಗಿ ಹಾಕ್ತಾವೆ: ರೈತರು ಮೈ ಮರೆತು ಬಿಟ್ರೆ ರಾತ್ರೋ ರಾತ್ರಿ ಎಲ್ಲಾ ಬೆಳೆ ನುಂಗಿ ಹಾಕುವ ಸಾಮರ್ಥ್ಯ ಈ ಬಸವನ ಹುಳಕ್ಕಿದೆ. ಈ ಹುಳುಗಳು ಈ ಕೆಲಸ ಮಾಡುತ್ತಿದ್ದು, ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ.
ಬೆಳದಿಂಗಳ ಬಾಲೆಗೆ ಮನಸೋತು ಕೊಲೆಯಾದ ಯುವಕ: ಸುಪಾರಿ ಪಡೆದು ಕೊಲೆ ಮಾಡಿಸಿದ ಲೇಡಿ ಡಾನ್
ಪರಿಹಾರ ಕ್ರಮ: ಬಸವನ ಹುಳುಗಳನ್ನು ಪತ್ತೆ ಹಚ್ಚಿ ಆಯ್ದು ನಾಶಪಡಿಸುವ ಮೂಲಕ ಬೆಳೆ ಉಳಿಸಿಕೊಳ್ಳುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಕೊತ್ತಂಬರಿ ಸೊಪ್ಪಿಗೆ ಬಸವನ ಹುಳು ಅತಿ ಹೆಚ್ಚು ಆಕರ್ಷಣೆಯಾಗಲಿದ್ದು, ಹೊಲದ ಕೆಲವು ಕಡೆ ಕೊತ್ತಂಬರಿ ಸೊಪ್ಪು ಗುಂಪಾಗಿ ಇಡಿ. ಅಲ್ಲಿ ಬಸವನಹುಳು ಸಂಗ್ರಹವಾದ ನಂತರ ಆ ಸ್ಥಳದಲ್ಲಿ ಒಂದಿಷ್ಟು ಹರಳುಪ್ಪು ಸುರಿದರೂ ಸಾಕು ಬಸವನ ಹುಳು ನಾಶವಾಗುತ್ತವೆ. ಈ ಸರಳ ಖರ್ಚಿಲ್ಲದ ವಿಧಾನದ ಮೂಲಕ ನಿಯಂತ್ರಣ ಮಾಡಬಹುದು ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ವಿಜ್ಞಾನಿ ಡಾ. ಝಹಿರ್ ಸಲಹೆ ನೀಡಿದ್ದಾರೆ.