Chikkamagaluru: 75ನೇ ಸ್ವಾತಂತ್ರ್ಯೋತ್ಸವದ ವೇಳೆ ಕುಗ್ರಾಮಕ್ಕೆ ಬಂತು ಬಸ್: ಗ್ರಾಮಸ್ಥರಲ್ಲಿ ಹರ್ಷ

By Govindaraj SFirst Published Aug 1, 2022, 11:59 PM IST
Highlights

ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಮಲೆನಾಡಿನ ಗ್ರಾಮಗಳಿಗೆ ಸಂಚಾರಿಸಿದ  ಬಸ್ಸನ್ನು ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸ್ವಾಗತ ಮಾಡಿದ್ದಾರೆ. 75ನೇ ಸ್ವಾಂತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಇರುವಾಗ ತಮ್ಮ ಗ್ರಾಮಕ್ಕೆ ಬಸ್ಸು ಬಂದಿರೋದನ್ನು ಕಂಡು ಹಬ್ಬವನ್ನೇ ಮಾಡಿದ್ದಾರೆ ಮಲೆನಾಡಿನ ಜನರು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.01): ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಮಲೆನಾಡಿನ ಗ್ರಾಮಗಳಿಗೆ ಸಂಚಾರಿಸಿದ  ಬಸ್ಸನ್ನು ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸ್ವಾಗತ ಮಾಡಿದ್ದಾರೆ. 75ನೇ ಸ್ವಾಂತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಇರುವಾಗ ತಮ್ಮ ಗ್ರಾಮಕ್ಕೆ ಬಸ್ಸು ಬಂದಿರೋದನ್ನು ಕಂಡು ಹಬ್ಬವನ್ನೇ ಮಾಡಿದ್ದಾರೆ ಮಲೆನಾಡಿನ ಜನರು.

ಕುಗ್ರಾಮಕ್ಕೆ ಬಂತು ಬಸ್, ಗ್ರಾಮಸ್ಥರಲ್ಲಿ ಹರ್ಷ: ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಸ್ ಮುಖವನ್ನೇ ನೋಡಿರದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ  ಗ್ರಾಮಗಳಿಗೀಗ ಬಸ್ ಸೌಲಭ್ಯ ಸಿಕ್ಕಿದ್ದು, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅದೇ ಬಸ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಯಾಣ ಮಾಡಿರೋದು ಮತ್ತೊಂದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಗ್ಗುಡ್ಲು, ಮತ್ತಿಕಟ್ಟೆ, ದೊಡ್ಡನಂದಿ ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯವೇ ಇರಲಿಲ್ಲ. 

ಚಿಕ್ಕಮಗಳೂರಿನಲ್ಲಿ ಎಬಿವಿಪಿ ಪ್ರತಿಭಟನೆ: ಗೃಹ ಇಲಾಖೆ ವಿರುದ್ದ ವಿದ್ಯಾರ್ಥಿ ಸಂಘಟನೆ ಆಕ್ರೋಶ

ತಮ್ಮ ಗ್ರಾಮಗಳಿಗೆ ಬಸ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ ಬಸ್ಸಿನ ಸೌಲಭ್ಯವನ್ನೇ ನೀಡಿದೇ ಕೆಎಸ್‌ಆರ್‌ಟಿಸಿ ಸಂಸ್ಥೆ ನಿರ್ಲಕ್ಷ್ಯ ಧೋರಣೆಯನ್ನು ತಾಳಿತು. ಈ  ಭಾಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇವರ ಗೋಳು ಹೇಳತೀರದಾಗಿತ್ತು. ಹೋಬಳಿ ಕೇಂದ್ರವಾದ ಬಣಕಲ್‌ಗೆ ಬರಲು ಈ ಗ್ರಾಮಗಳ ಜನ ಸುಮಾರು 3 ಕಿ.ಮೀ. ಕಾಲ್ನಡಿಗೆಯಲ್ಲೇ ಬರಬೇಕಿತ್ತು. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಕೂಡ 3 ಕಿ.ಮೀ. ನಡೆದೇ ಬರಬೇಕಿತ್ತು. 

ಮಳೆಗಾಲದಲ್ಲಂತೂ ಈ ಮಕ್ಕಳಿಗೆ ವಿದ್ಯಾಭ್ಯಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ತೊಂದರೆಯಾಗಿತ್ತು. ವಯಸ್ಸಾದವರು, ರೋಗಿಗಳು, ಆಸ್ಪತ್ರೆಗೆ ಬರಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಖಾಸಗಿ ವಾಹನಗಳನ್ನೇ ಅವಲಂಭಿಸಬೇಕಾಗಿತ್ತು. ಖಾಸಗಿ ವಾಹನವಾದ ಆಟೋ, ಕ್ಯಾಬ್ ನವರು ಕೇಳಿದಷ್ಟು ಬಾಡಿಗೆ ತೆತ್ತು ಸಾಕಪ್ಪ ನಮ್ಮ ಈ ವನವಾಸ ಎನ್ನುವಂತಾಗಿತ್ತು. ಇದೀಗ ಸ್ಥಳಿಯರ ದಶಕಗಳ ಮನವಿಯ ಮೇರೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಸಾಧಿಸಿ ಬಸ್ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ವಿದ್ಯಾರ್ಥಿಗಳ ಜೊತೆ ಬಸ್‌ನಲ್ಲೇ  ಪ್ರಯಾಣ ಮಾಡಿದ ಶಾಸಕ: ಈ ಗ್ರಾಮಗಳಿಗೆ ಬಸ್ಸನ್ನು ಬಿಡುವಲ್ಲಿ ಶಾಸಕರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಎನ್ನುವುದು ಈ ಗ್ರಾಮಗಳ ಜನರಿಗೆ ಒಂದು ಸಂತೋಷವಾದರೆ, ಬಸ್ ಉದ್ಘಾಟನೆ ಮಾಡಿದ ನಂತರ ತಮ್ಮ ಮಕ್ಕಳ ಜೊತೆ ಅದೇ ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ದಿನಕ್ಕೆ ಎರಡು ಬಾರಿ ಓಡಾಡುವ ಬಸ್ಸು ಬೆಳಗ್ಗೆ-ಸಂಜೆ ಈ ಹಳ್ಳಿಗಳಿಗೆ ಹೋಗಿ ಬರಲಿದೆ. ಈ ಬಸ್ ಸ್ಥಳಿಯರ ಜೊತೆ ಹೆಚ್ಚಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. 

Chikkamagaluru: ಸಾಮೂಹಿಕ ಭತ್ತದ ಗದ್ದೆಯ ನಾಟಿ: ಶಾಸಕ ಕುಮಾರಸ್ವಾಮಿ ಭಾಗಿ

ಈ ಹಳ್ಳಿಗಳಿಗೆ ರಸ್ತೆ ಕೂಡ ಸರಿ ಇರಲಿಲ್ಲ. ಇದೀಗ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಕೂಡ ನಿರ್ಮಾಣವಾಗಿದ್ದು, ಈ ಭಾಗದ ಜನರಿಗೆ ಉತ್ತಮ ರಸ್ತೆ ಹಾಗೂ ಬಸ್ ವ್ಯವಸ್ಥೆ ಎರಡು ಒಟ್ಟೊಟ್ಟಿಗೆ ಸಿಕ್ಕಿರುವುದು ಸಂತೋಷದಲ್ಲಿ ತೇಲಿದಂತಾಗಿದೆ. ಹಳ್ಳಿಗಳಿಗೆ ಬಸ್ ಸೌಲಭ್ಯ ಸಿಕ್ಕಿರೋದ್ರಿಂದ ಹಳ್ಳಿಗರು ಖುಷಿಪಟ್ಟಿದ್ದಾರೆ. ಇಂದು ಬಸ್ಸನ್ನ ಉದ್ಘಾಟಿಸಿದ ಶಾಸಕ ಕುಮಾರಸ್ವಾಮಿ ಅದೇ ಬಸ್ಸಿನಲ್ಲಿ ಮತ್ತಿಕಟ್ಟೆ ಗ್ರಾಮದಿಂದ ಬಣಕಲ್‌ವರೆಗೂ ಸ್ಥಳೀಯರ ಜೊತೆಯೇ ಸಂಚರಿಸಿ ಮಕ್ಕಳ ಜೊತೆ ತಾವೂ ಆ ಸಂಭ್ರಮವನ್ನು ಸವಿದಿದ್ದಾರೆ.

click me!