ಗದ್ದೆಗಿಳಿದು ನಾಟಿ ಮಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್

By Govindaraj S  |  First Published Aug 1, 2022, 10:24 PM IST

ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಬೆಳೆಗಾರರ ಸಮಿತಿಯಿಂದ ಹಮ್ಮಿಕೊಳ್ಳಲಾದ ಕೃಷಿ ಉತ್ತೇಜನ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಾವೇ ಸ್ವತಃ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮೂಲಕ ಸಮಾಜಕ್ಕೆ ಮಾದರಿ‌ಯಾಗಿದ್ದಾರೆ. 


ಉತ್ತರ ಕನ್ನಡ (ಆ.01): ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಬೆಳೆಗಾರರ ಸಮಿತಿಯಿಂದ ಹಮ್ಮಿಕೊಳ್ಳಲಾದ ಕೃಷಿ ಉತ್ತೇಜನ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಾವೇ ಸ್ವತಃ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮೂಲಕ ಸಮಾಜಕ್ಕೆ ಮಾದರಿ‌ಯಾಗಿದ್ದಾರೆ. ಕೃಷಿ ಅಂದ್ರೆ ಇಂದಿನ ಕಾಲದಲ್ಲಿ ಯುವಕರು ಮೂಗು ಮುರಿಯುವುದರಿಂದ ಅದೆಷ್ಟೋ ಕೃಷಿ ಭೂಮಿಗಳು ಬಂಜರು ಬೀಳುವಂತಾಗಿದೆ. 

ಕೃಷಿಯತ್ತ ಜನರನ್ನು ಮತ್ತೆ ಸೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಬೆಳೆಗಾರರ ಸಮಿತಿಯಿಂದ ಒಂದು ಗದ್ದೆಯನ್ನು ಗೇಣಿ ಪಡೆದು ಕೃಷಿ ಉತ್ತೇಜನ ಕಾರ್ಯಕ್ರಮ ಆಯೋಜನೆಯ ಮೂಲಕ ಭತ್ತದ ಸಸಿ ನಾಟಿ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಕೂಡಾ ತಾವು ಯಾವ ರೈತರಿಗೂ ಕಮ್ಮಿ‌ ಇಲ್ಲವೆಂಬಂತೆ ಭತ್ತದ ಗದ್ದೆಯಲ್ಲಿ ಕಾಲು ಕೈ ಕೆಸರು ಮಾಡಿಕೊಂಡು ಸಸಿ ನಾಟಿ ಮಾಡಿದರು. ಅಲ್ಲದೇ, ಗದ್ದೆಯಲ್ಲಿ ಒಂದೈದು ನಿಮಿಷಗಳ ಕಾಲ ಎತ್ತಿನ ಜೋಡಿಯಲ್ಲಿ ನೇಗಿಲು ಹಿಡಿದು ಭೂಮಿಯನ್ನು ಉಳುಮೆ ಮಾಡೋ ಮೂಲಕ ಗಮನ ಸೆಳೆದರು. 

Latest Videos

undefined

ಅತ್ತ ಕಾರವಾರದಲ್ಲಿ ಆಸ್ಪತ್ರೆಗಾಗಿ ಮೋದಿಗೆ ರಕ್ತ ಪತ್ರ, ಇತ್ತ ಆಸ್ಪತ್ರೆಯ ಸುಳಿವು ಕೊಟ್ಟ ಸಚಿವ

ಜಿಲ್ಲೆಯಲ್ಲಿ ಇತ್ತೀಚಿಗಿನ‌ ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ನದಿ ಪ್ರವಾಹಕ್ಕೆ ಬೆದರಿ ನದಿ ತಟದ ಒಂದಿಷ್ಟು ರೈತರು ಕೃಷಿಯನ್ನೇ ಬಿಟ್ಟಿದ್ದಾರೆ.‌ ಇನ್ನು ಆಧುನಿಕತೆಯ ಆರ್ಭಟದಿಂದಲೂ ರೈತರಿಗೆ ಕೃಷಿ ಮಾಡಲು ಕೊಂಚ ಹಿನ್ನಡೆಯಾಗುತ್ತಿದೆ. ಆದರೆ, ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಹೇಗೆ ಕೃಷಿ ಮಾಡಬಹುದು ಎಂಬುದನ್ನು ಸಮಾಜಕ್ಕೆ ತೋರಿಸುವ ಮೂಲಕ ಉತ್ತಮ ಸಂದೇಶ ಹೊರಡಿಸುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ಜತೆಗೆ ಅಡ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದದ್ದು ಕೂಡಾ ವಿಶೇಷವಾಗಿತ್ತು.

ಭತ್ತ ನಾಟಿ ಮಾಡಿದ ಶಾಲಾ ಮಕ್ಕಳು: ಗದ್ದೆಯಲ್ಲಿ ರೈತರು ಭತ್ತದ ಬೆಳೆ ಹೇಗೆ ಬೆಳೆಯುತ್ತಾರೆ ಎನ್ನುವುದರ ಕುರಿತು ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬೆಳಗಾಮ್‌ ವತಿಯಿಂದ ಬುಧವಾರ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿತೆ ಮೂಲಕ ಅರಿವು ಮೂಡಿಸಲಾಯಿತು. ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಭರತೇಶ ಸೆಂಟ್ರಲ್‌ ಸ್ಕೂಲ್‌ನ 35 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕರೆದುಕೊಂಡು ಗದ್ದೆಗೆ ಹೋಗಲಾಗಿತ್ತು. ಭತ್ತದ ಗದ್ದೆಯಲ್ಲಿ ನೀರು ಬಿಡಲಾಗಿತ್ತು. ಆ ನೀರಿನಲ್ಲಿಳಿದ ಮಕ್ಕಳು ಸಂತಸದಿಂದಲೇ ಭತ್ತದ ಸಸಿ ನಾಟಿ ಮಾಡಿದರು. ಶಾಲಾ ಸಮವಸ್ತ್ರದಲ್ಲೇ ಗದ್ದೆಯಲ್ಲಿ ನಿಂತಿದ್ದ ನೀರಿಗಳಿದು ರೈತರ ಜೊತೆಗೆ ಬೆರೆತು ಶಾಲಾ ಮಕ್ಕಳು ಭತ್ತದ ಸಸಿ ನಾಟಿ ಮಾಡಿದರು.

Uttara Kannada: ಶಾಲೆಯಲ್ಲಿ ‘ದಂಡಿ’ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಅನುಮತಿ

ಭತ್ತದ ಗದ್ದೆಯಲ್ಲಿ ರೈತರು ಹೇಗೆ ಕಷ್ಟಪಟ್ಟು ಭತ್ತವನ್ನು ಬೆಳೆಯುತ್ತಾರೆ ಎನ್ನುವುದರ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ, ಅನ್ನದ ಮಹತ್ವ ಅರಿಯದ ಮಕ್ಕಳು ಊಟ ಮಾಡುವ ವೇಳೆ ತಟ್ಟೆಯಲ್ಲಿ ವ್ಯರ್ಥವಾಗಿ ಆಹಾರವನ್ನು ಬಿಡುತ್ತಾರೆ. ಆದರೆ, ಈ ಅನ್ನದ ಮಹತ್ವ, ರೈತರು ಹೇಗೆ ಕಷ್ಟಪಟ್ಟು ಆಹಾರಧಾನ್ಯ ಬೆಳೆಯುತ್ತಾರೆ ಎನ್ನುವುದನ್ನು ಮಕ್ಕಳಿಗೆ ಪ್ರಾತ್ಯಕ್ಷಿತೆಯ ಮೂಲಕ ಅರಿವು ಮೂಡಿಸಲಾಯಿತು. ಅಲ್ಲದೇ, ಈ ಕುರಿತು ಎಲ್ಲ ಮಕ್ಕಳಿಗೂ ಪಾಠ ಕಲಿಸುವ ಅಗತ್ಯವಿದೆ ಎಂದು ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬೆಳಗಾಮ್‌ ಅಧ್ಯಕ್ಷೆ ಶಾಲಿನಿ ಚೌಗಲೆ ಹೇಳಿದರು. ದೇಶದ ಬೆನ್ನೆಲುಬು ರೈತ, ರೈತ ಕಷ್ಟಪಟ್ಟು ಬೆಳೆ ಬೆಳೆಯುತ್ತಾನೆ. ಆದರೆ, ಅನ್ನದ ಮಹತ್ವ ಅರಿಯದೇ ವ್ಯರ್ಥವಾಗಿ ತಟ್ಟೆಯಲ್ಲಿ ಬಿಡುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲ ಮಕ್ಕಳು ಅನ್ನದ ಮಹತ್ವವನ್ನು ಅರಿಯಬೇಕು ಎಂದು ಮನವಿ ಮಾಡಿದರು.

click me!