ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೆಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್‌ಗೆ ತೆರಳಿದ್ದಾರೆ. ದಿಢೀರ್ ಸೆಂಟರ್‌ಗೆ ಭೇಟಿ ನೀಡಿ ಶಾಸಕರು ಪರಿಶೀಲಿಸಿದ್ದಾರೆ.
ಹೊನ್ನಾಳಿ (ಆ.24): ಕೋವಿಡ್-19 ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ಇದೇ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಮಾದನಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂರು ಬೆಡ್‌ಗಳ ಕೋವಿಡ್-19 ಕೇರ್ ಸೆಂಟರ್ ತೆರೆಯಲಾಗಿದೆ. ಹಾಲಿ 71 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಊಟ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ಸೋಂಕಿತರು ಪರದಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಕೋವಿಡ್-19 ಕೇರ್ ಸೆಂಟರ್‌ಗೆ ಖುದ್ದು ಭೇಟಿ ನೀಡಿ ಶಾಸಕರು ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರು : 3 ಸಾವಿರದತ್ತ ಸೋಂಕಿತರ ಸಂಖ್ಯೆ..
ಆಹಾರದ ಗುಣಮಟ್ಟಪರಿಶೀಲಿಸಿದ ಶಾಸಕರು, ಸೋಂಕಿತರ ಬಳಿಯೇ ಅವರಿಗೆ ನೀಡುವ ಆಹಾರದ ಬಗ್ಗೆ ಮಾಹಿತಿ ಪಡೆದು, ಮಾಸ್ಕ್ ವಿತರಿಸಿ ಆತ್ಮಸ್ರ್ಥೈಯ, ಜಾಗೃತಿ ಮೂಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್-19 ಕೇರ್ ಸೆಂಟರ್‌ನಲ್ಲಿರುವವರೇ ಊಟ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ಅವ್ಯವಸ್ಥೆಗಳು ಇಲ್ಲ, ಆಹಾರ ಚೆನ್ನಾಗಿದೆ ಎಂದು ಸ್ವತಃ ಸೋಂಕಿತರೇ ಒಪ್ಪಿಕೊಂಡಿದ್ದಾರೆ. ಕೆಲವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಇಂತ ಆರೋಪಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.
ಗಂಗಾವತಿ: ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ..
ಕೋವಿಡ್-19 ಕೇರ್ ಸೆಂಟರ್‌ನಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 71 ಜನರಿದ್ದಾರೆ. ಅಧಿಕಾರಿಗಳು ಕೋವಿಡ್-19 ಕೇರ್ ಸೆಂಟರ್‌ಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಸಣ್ಣಪುಟ್ಟಲೋಪಗಳಿದ್ದರೇ ಇದು ತಮ್ಮ ಮನೆ ಎಂದು ತಿಳಿದುಕೊಳ್ಳುವಂತೆ ತಿಳಿಹೇಳಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 832 ಜನ ಸೋಂಕಿತರಿದ್ದಾರೆ. ಅದರಲ್ಲಿ 25 ಜನರು ಸಾವನ್ನಪ್ಪಿದ್ದು ಬೇಸರ ಮೂಡಿಸಿದೆ. ನಮ್ಮ ಅಧಿಕಾರಿಗಳ ಉತ್ತಮ ಕೆಲಸದಿಂದಾಗಿ 433 ಜನರು ಗುಣಮುಖರಾಗಿದ್ದಾರೆ. ಹಣ ಬರುತ್ತದೆ, ಹಾಗಾಗಿ ಕೊರೋನಾ ಬಾರದಿದ್ದರೂ ಕರೆದುಕೊಂಡು ಹೋಗುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಇದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಾದ್ಯಂತ ಮೂರು ಬಾರಿ ಸಂಚರಿಸಿ ಜನರಲ್ಲಿ ಕೊರೋನಾ ಜಾಗೃತಿ ಮೂಡಿಸಲಾಗಿದೆ. ಹತ್ತಾರು ಸಾವಿರ ಆಹಾರದ ಕಿಟ್‌ಗಳನ್ನು ನೀಡಿದ್ದು, 3 ಲಕ್ಷ ಮಾಸ್ಕ್ ಸೇರಿದಂತೆ ಬಡರೋಗಿಗಳಿಗೆ ಆರೋಗ್ಯ ಸಂಜೀನಿ ವೈಯಕ್ತಿಕ ಸೇವೆಯಡಿ .5 ಲಕ್ಷ ಮೌಲ್ಯದ ಔಷಧಿಗಳನ್ನು ನೀಡಿದ್ದೇನೆ. ಇನ್ನು ಸಾಕಷ್ಟುಕಂಟೈನ್ಮೆಂಟ್ ಝೋನ್‌ಗಳಿಗೆ ಆಹಾರದ ಕಿಟ್‌ಗಳನ್ನು ನೀಡುವುದು ಬಾಕಿಯಿದೆ ಎಂದರು.
ತಾಲೂಕು ಪಂಚಾಯಿತಿ ಜನಪ್ರತಿನಿಧಿಗಳು, ತಹಸೀಲ್ದಾರ್ ತುಷಾರ್ ಬಿ. ಹೊಸೂರ್, ಉಪ ತಹಸೀಲ್ದಾರ್ ನಾಗರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಬಂತಿ, ಮತ್ತಿತರರು ಇದ್ದರು.