ಶಿವಮೊಗ್ಗದ ಗೌರಿಗದ್ದೆಗೆ ವಿನಯ್ ಗುರೂಜಿ ಮಠಕ್ಕೆ ಚಂದ್ರು ಹೋಗಿದ್ದು ಕ್ರೆಟಾ ಕಾರಿನಲ್ಲಿ ಅಲ್ಲವೇ ಅಲ್ಲ: ಎಂ.ಪಿ.ರಮೇಶ್
ದಾವಣಗೆರೆ(ನ.06): ‘ನನ್ನ ಮಗ ಚಂದ್ರುನದ್ದು ಉದ್ದೇಶಪೂರ್ವಕ ಕೊಲೆಯಾಗಿದ್ದು, ಆತನ ಬಳಿ ಪತ್ತೆಯಾದ ಮೊಬೈಲ್, ತುಂಗಾ ನಾಲೆಯ ಬಳಿಯೇ ಸ್ವಿಚ್ ಆಫ್ ಆಗಿದೆ’ ಎಂದು ಚಂದ್ರುವಿನ ತಂದೆ ಎಂ.ಪಿ.ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಮೊದಲೆರಡು ದಿನ ಹೊನ್ನಾಳಿಯಲ್ಲಿ ಚಂದ್ರು ಮೊಬೈಲ್ ಲೊಕೇಷನ್ ತೋರಿಸಿದ್ದು ಏಕೆ? ಕಳೆದ ಭಾನುವಾರ ಸಂಜೆ 7.30ರ ವೇಳೆ ಶಿವಮೊಗ್ಗದ ಗೌರಿಗದ್ದೆಗೆ ವಿನಯ್ ಗುರೂಜಿ ಮಠಕ್ಕೆ ಚಂದ್ರು ಹೋಗಿದ್ದು ಕ್ರೆಟಾ ಕಾರಿನಲ್ಲಿ ಅಲ್ಲವೇ ಅಲ್ಲ. ಗೌರಿಗದ್ದೆಗೆ ಹೋಗಿದ್ದ ಪೊಲೀಸರು, ನಮ್ಮ ಕಾರ್ಯಕರ್ತರಿಗೆ ಅಲ್ಲಿ ಸಿಕ್ಕ ಮಾಹಿತಿಯೇ ಬೇರೆ, ಬೇರೆ. ಪೊಲೀಸರು ಹೇಳುವ ಕಿ.ಮೀ.ಗಳಷ್ಟುವೇಗದಲ್ಲಿ ಕಾರು ಚಲಿಸಿದ್ದರೆ ಎರಡು ಏರ್‌ಬ್ಯಾಗ್ ಏಕೆ ತೆರೆದುಕೊಂಡಿವೆ?. ಏರ್‌ಬ್ಯಾಗ್ ತೆರೆದ ನಂತರ ಅಷ್ಟುದೊಡ್ಡ ದೇಹ ಕಾರ್‌ನ ಹಿಂಭಾಗದ ಸೀಟಿಗೆ ಹೋಗಲು ಹೇಗೆ ಸಾಧ್ಯ? ಎರಡೂ ಏರ್‌ಬ್ಯಾಗ್ ಒಮ್ಮೇಲೆ ತೆರೆದುಕೊಳ್ಳಲು ಏನು ಕಾರಣ ಹೀಗೆ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ಇಡೀ ಪ್ರಕರಣವನ್ನು ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರೆಟಾ ಕಾರು ಸಂಸ್ಥೆಯಿಂದ ತಾಂತ್ರಿಕ ಮಾಹಿತಿ ಕೋರಿದ ಪೊಲೀಸರು:
ಇತ್ತ ಕಾರು ಪತ್ತೆಯಾದ ಸ್ಥಳದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರೆ, ಅತ್ತ, ಹುಬ್ಬಳ್ಳಿ-ಧಾರವಾಡದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕಾರಿನ ಅವಶೇಷಗಳು, ಕಾರಿನಲ್ಲಿ ಸಿಗಬಹುದಾದ ಸಾಕ್ಷ್ಯಗಳನ್ನು ಕಲೆ ಹಾಕಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಚಂದ್ರು ಸಾವಿನ ಪ್ರಕರಣ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಕಿಡಿ
ನಾಲೆಗೆ ಬಿದ್ದಿದ್ದ ಕಾರ್‌ನ ಏರ್‌ಬ್ಯಾಗ್ ತೆರೆದುಕೊಂಡಿರುವ ಬಗ್ಗೆ ಕ್ರೆಟಾ ಕಾರು ಸಂಸ್ಥೆಯಿಂದ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಕೇಳಿದ್ದಾರೆ. ಕಾರು ವೇಗದಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ್ದಾ ಅಥವಾ ಯಾರಾದರೂ ತಳ್ಳಿದ್ದಾ? ಕಾರಿನ ಹಿಂಭಾಗದಲ್ಲಿ ಚಂದ್ರುವಿನ ಶವವಿದ್ದು, ಚಾಲಕನ ಮುಂಭಾಗದ ಗಾಜು ಹೇಗೆ ಒಡೆಯಿತು? ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಚಂದ್ರುವಿನ ಕಾರು ವೇಗವಾಗಿ ಸಾಗಿದ್ದು ಕಂಡು ಬಂದಿದೆ. ಹಾಗಾದರೆ, ಕಾರಿನಲ್ಲಿ ಚಂದ್ರು ಒಬ್ಬರೇ ಇದ್ದರಾ ಅಥವಾ ಇತರರು ಇದ್ದರೆ?. ಇದ್ದರೆ, ಅವರು ಯಾರು? ಚಂದ್ರುವಿನ ಕಾರಿನ ವೇಗದಲ್ಲೇ ಸಾಗಿದ ಮತ್ತೊಂದು ಕಾರು ಯಾರದ್ದು? ಆ ಕಾರು ಎಲ್ಲಿಗೆ ಹೋಯಿತು, ಎಲ್ಲಿಂದ ಬಂದಿತ್ತು ಹೀಗೆ ಎಲ್ಲಾ ವಿಧದಲ್ಲೂ ಪೊಲೀಸ್ ತನಿಖೆ ಮುಂದುವರಿದಿದೆ.
ರೇಣುಕಾಚಾರ್ಯ ಅಣ್ಣನ ಮಗ ಚಂದ್ರು ದೇಹ ಕೊಳೆತ ಸ್ಥಿತಿಯಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆ
ಚಂದ್ರುಗೆ ಒಂದೇ ನಂಬರಿಂದ 10 ಕಾಲ್, ಮೆಸೇಜ್
ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರ ಎಂ.ಆರ್.ಚಂದ್ರಶೇಖರ್(ಚಂದ್ರು) ಮೊಬೈಲ್‌ಗೆ ಆತ ಕಾಣೆಯಾಗುವ ಮುನ್ನ ಒಂದೇ ನಂಬರ್‌ನಿಂದ 10ಕ್ಕೂ ಹೆಚ್ಚು ಕರೆಗಳು ಮತ್ತು ಮೆಸೇಜ್‌ಗಳು ಬಂದಿರುವುದು ತನಿಖೆಗೆ ಮತ್ತಷ್ಟುತೀವ್ರತೆ ನೀಡಿದೆ. ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ಬರುವುದಾಗಿ ಕ್ರೆಸ್ಟಾಕಾರಿನಲ್ಲಿ ಕಳೆದ ಭಾನುವಾರ ರಾತ್ರಿ ಚಂದ್ರು ಒಬ್ಬನೇ ತೆರಳಿದ್ದರು. ಅದೇ ರಾತ್ರಿ ಚಂದ್ರು ಮೊಬೈಲ್‌ಗೆ ಮೇಲಿಂದ ಮೇಲೆ ರಾತ್ರಿ 10ರ ನಂತರ ಕರೆ ಬಂದಿರುವುದು, ಮೆಸೇಜ್‌ಗಳು ಬಂದಿರುವ ಬಗ್ಗೆ ಕಾಲ್ ಡೀಟೇಲ್ಸ್ ರೆಕಾರ್ಡ್‌ನಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ವ್ಯಕ್ತಿಯೊಬ್ಬರ ಒಂದೇ ನಂಬರ್‌ನಿಂದ ಕರೆ ಬಂದಿದೆ ಎನ್ನಲಾಗಿದೆ.
ಕ್ರೆಟಾ ಕಾರು ಸಂಸ್ಥೆಯಿಂದ ಮಾಹಿತಿ ಕೋರಿಕೆ:
ಇತ್ತ ಕಾರು ಪತ್ತೆಯಾದ ಸ್ಥಳದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರೆ, ಅತ್ತ, ಹುಬ್ಬಳ್ಳಿ-ಧಾರವಾಡದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕಾರಿನ ಅವಶೇಷಗಳು, ಕಾರಿನಲ್ಲಿ ಸಿಗಬಹುದಾದ ಸಾಕ್ಷ್ಯಗಳನ್ನು ಕಲೆ ಹಾಕಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನಾಲೆಗೆ ಬಿದ್ದಿದ್ದ ಕಾರ್‌ನ ಏರ್‌ಬ್ಯಾಗ್ ತೆರೆದುಕೊಂಡಿರುವ ಬಗ್ಗೆ ಕ್ರೆಟಾ ಕಾರು ಸಂಸ್ಥೆಯಿಂದ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಕೇಳಿದ್ದಾರೆ.