ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರ ಸ್ಥಾಪನೆಗೆ ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೇ ವಿಲಾಸ ಅರಮನೆ ಹಸ್ತಾಂತರಕ್ಕೂ ಮುನ್ನ ಕಾನೂನು ಅಭಿಪ್ರಾಯ ಪಡೆಯಬೇಕಿದೆ ಎಂದು ಹೇಳಿದ ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಹರಿಹಾಯ್ದ ಪ್ರಸಂಗ ಮಂಗಳವಾರ ನಡೆಯಿತು.
ಮೈಸೂರು : ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರ ಸ್ಥಾಪನೆಗೆ ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೇ ವಿಲಾಸ ಅರಮನೆ ಹಸ್ತಾಂತರಕ್ಕೂ ಮುನ್ನ ಕಾನೂನು ಅಭಿಪ್ರಾಯ ಪಡೆಯಬೇಕಿದೆ ಎಂದು ಹೇಳಿದ ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಹರಿಹಾಯ್ದ ಪ್ರಸಂಗ ಮಂಗಳವಾರ ನಡೆಯಿತು.
ಮೈಸೂರು ವಿವಿ ಕ್ರಾಫರ್ಡ್ ಭವನದ ಶಿಕ್ಷಣ ಮಂಡಲಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಲಸಚಿವರ ಹೇಳಿಕೆಯಿಂದ ಕುಪಿತರಾದ ಸಂಸದ ಪ್ರತಾಪ್ ಸಿಂಹ ಅವರು, ಸರ್ಕಾರ ಅನುಮತಿ ಕೊಟ್ಟಿರುವಾಗ ಇನ್ನೂ ಯಾರು ಅನುಮತಿ ಕೊಡಬೇಕು ಎಂದು ಆಕ್ರೋಶ ಹೊರಹಾಕಿದರು.
undefined
ಜಯಲಕ್ಷ್ಮೇ ವಿಲಾಸ ಅರಮನೆ ಮಹಾರಾಜರು ಮೈಸೂರು ವಿವಿಗೆ ಕೊಟ್ಟಿರುವ ಭಿಕ್ಷೆ. ಯಾರ ಮನೆಯ ಆಸ್ತಿಯನ್ನು ಕೇಳುತ್ತಿಲ್ಲ. ಕನ್ನಡದ ಕೆಲಸ ಆಗಬೇಕು. ಕೆಎಎಸ್ ಅಧಿಕಾರಿ ನಮಗೆ ಡಿಕ್ಟೇಟ್ ಮಾಡುತ್ತಾರೆ. ಅಡ್ವೋಕೇಟ್ ಜನರಲ್ ರೀತಿ ಮಾತಾಡುತ್ತಾರೆ. ಕಾನೂನು ಅಭಿಪ್ರಾಯ ಪಡೆಯಬೇಕಾದ್ದು ಯಾರ ಜವಾಬ್ದಾರಿ? ಅದನ್ನು ನಾನೇ ಹೇಳಿಕೊಡಬೇಕೆ? ಐಎಎಸ್ ಅಧಿಕಾರಿಗಳ ಬಳಿ ಸಹಿ ಮಾಡಿಸುವುದು ಎಷ್ಟುಕಷ್ಟನನಗೆ ಗೊತ್ತಿದೆ. ಪ್ರತಿಸಲ ಗುಮಾಸ್ತನ ಕೆಲಸ ಮಾಡಲಾಗುವುದಿಲ್ಲ ಎಂದು ಸಂಸದರು ಸಿಡಿಮಿಡಿಗೊಂಡರು.
ಜಯಲಕ್ಷ್ಮೇ ವಿಲಾಸ ಅರಮನೆ ಕಟ್ಟಡ ಹಸ್ತಾಂತರಿಸುವಂತೆ 8 ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಸಿಂಡಿಕೇಟ್ ಸಭೆಯಲ್ಲೂ ಅನುಮೋದನೆ ದೊರೆತಿರುವಾಗ ಕುಲಸಚಿವರಾದ ವಿ.ಆರ್. ಶೈಲಜಾ ಅವರು ಇಲ್ಲದ ತರಲೇ ಮಾಡುತ್ತಿದ್ದಾರೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ವಿವರಿಸಿದರು.
ಜಯಲಕ್ಷ್ಮೇ ವಿಲಾಸ ಅರಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿಗಳು . 27.5 ಕೋಟಿ ಅನುದಾನ ಕೊಟ್ಟಿದ್ದಾರೆ. ನವೀಕರಣ ಮಾಡಿ 4 ಕೊಠಡಿಗಳನ್ನು ಬಳಸುತ್ತೇವೆ. ಉಳಿದದ್ದನ್ನು ಮೈಸೂರು ವಿವಿ ಬಳಸಬಹುದು. ಚುನಾವಣೆ ಬಂದರೆ ಪ್ರಾಜೆಕ್ಟ್ ಮುಂದಕ್ಕೆ ಹೋಗಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇನೆ. ಸಚಿವ ಸಂಪುಟ ಸಭೆ ಅನುಮೋದನೆಗೆ ಕಳುಹಿಸಬೇಕು. ನವೀಕರಣ ಮಾಡದಿದ್ದರೆ ಇಡೀ ಕಟ್ಟಡ ಬಿದ್ದು ಹೋಗುತ್ತದೆ. ಮೈಸೂರು ವಿವಿ ಸಹಕಾರ ಕೊಡಬೇಕು. ಕೇಂದ್ರ ಸ್ಥಾಪನೆಯಿಂದ ವಿವಿಗೆ ಗೌರವ ಬರಲಿದೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಎಚ್. ರಾಜಶೇಖರ ಅವರು, ಜಯಲಕ್ಷ್ಮೇ ವಿಲಾಸ ಅರಮನೆ ಹಸ್ತಾಂತರ ಸಂಬಂಧ ಚರ್ಚಿಸಿ ಎರಡು ದಿನಗಳ ಒಳಗೆ ತೀರ್ಮಾನ ತಿಳಿಸುತ್ತೇವೆ ಎಂದರು.
ಕುಲಸಚಿವೆ ವಿ.ಆರ್. ಶೈಲಜಾ, ಸಿಂಡಿಕೇಟ್ ಸದಸ್ಯರು ಇದ್ದರು.
ಈ ಬಾರಿಯೂ ಸಿಂಹ ಫಸ್ಟ್
ಮೈಸೂರು (ಫೆ.01): ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಎರಡು ವರ್ಷ ಈ ನಿಧಿಗೆ ಹಣ ನೀಡಿರಲಿಲ್ಲ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರತಾಪ್‌ಸಿಂಹ ಅವರು ಕೋವಿಡ್ ಪೂರ್ವದಲ್ಲೂ ಅನುದಾನ ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಸಂಸದರ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಸಂಸದರು ವಿವಿಧ ಕಾಮಗಾರಿಗಳಿಗೆ ಈ ಅನುದಾನ ಶಿಫಾರಸು ಮಾಡಬಹುದು. ಅದರ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳುತ್ತಾರೆಕೇಂದ್ರ ಸರ್ಕಾರ ಕೆಲ ಸಂಸದರಿಗೆ 9.50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ರೀತಿ .9.50 ಕೋಟಿ (ಬಡ್ಡಿ ಸೇರಿಸಿ 12.14 ಕೋ ಬಿಡುಗಡೆಯಾಗಿರುವವರ ಪೈಕಿ ಅನುದಾನ ಬಳಕೆಯಲ್ಲಿ ಪ್ರತಾಪ್ ಸಿಂಹ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಾಪ್‌ಸಿಂಹ ಅವರ ಕ್ಷೇತ್ರಕ್ಕೆ ನಿಗದಿಯಾದ 9.50 ಕೋಟಿ (ಬಡ್ಡಿ ಸೇರಿಸಿ 12.14 ಕೋಟಿ) ಬಿಡುಗಡೆ ಮಾಡಿದ್ದು, ಈ ಪೈಕಿ ಅವರು 11.87 ಕೋಟಿ ವೆಚ್ಚದ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದಾರೆ. ಅಷ್ಟೂಹಣ ಮಂಜೂರಾಗಿದೆ. ಈ ಪೈಕಿ 11.74 ಕೋಟಿ ವೆಚ್ಚವಾಗಿದ್ದು, ಉಳಿಕೆ .0 ಲಕ್ಷ ಮಾತ್ರ. ಅವರ ಹಣ ಬಳಕೆ ಪ್ರಮಾಣ ಶೇ.121.60 ರಷ್ಟಿದೆ.
ಬಡವರು ಸೈಟ್ ಖರೀದಿಗೆ ಸರಳ ಕಾನೂನು: ಸಿಎಂ ಬೊಮ್ಮಾಯಿ ಭರವಸೆ
ಇನ್ನು ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರು 9.80 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 9.79 ಕೋಟಿ ಮಂಜೂರಾಗಿದೆ. 9.50 ಕೋಟಿ ವೆಚ್ಚವಾಗಿದೆ. ಹಣ ಬಳಕೆಯ ಪ್ರಮಾಣ ಶೇ.99.11ರಷ್ಟಿದೆ. ಅದೇ ರೀತಿ ದಾವಣಗೆರೆಯ ಜಿ.ಎಸ್.ಸಿದ್ದೇಶ್ವರ 9.63 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, 8.71 ಕೋಟಿ ವೆಚ್ಚವಾಗಿದೆ. ಬಳಕೆ ಪ್ರಮಾಣ ಶೇ.89.76 ರಷ್ಟಿದೆ. ಬೀದರ್‌ನ ಭಗವಂತ್ ಖೂಬಾ .11.82 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, .7.31 ಕೋಟಿ ವೆಚ್ಚವಾಗಿದೆ. ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ .7.44 ಕೋಟಿ ಕಾಮಗಾರಿ ಶಿಫಾರಸು ಮಾಡಿದ್ದು, .7.13 ಕೋಟಿ ಬಳಕೆಯಾಗಿದೆ. ಪಿ.ಸಿ.ಗದ್ದಿಗೌಡರ್ ಅವರು .7.48 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, .6.62 ಕೋಟಿ ವೆಚ್ಚವಾಗಿದೆ.