ಕರಡಿ ಮುಂದಿನ ಎಂಎಲ್‌ಎ? -ಬಿಜೆಪಿ ರಾಜ್ಯಾಧ್ಯಕ್ಷರ ಎದುರು ಬೆಂಬಲಿಗರ ಘೋಷಣೆ

By Kannadaprabha News  |  First Published Feb 15, 2023, 6:08 AM IST

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಅವರ ಸಮ್ಮುಖದಲ್ಲಿಯೇ ‘ಸಂಗಣ್ಣ ಕರಡಿ ಅವರೇ ಮುಂದಿನ ಎಂಎಲ್‌ಎ’ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.


 ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಅವರ ಸಮ್ಮುಖದಲ್ಲಿಯೇ ‘ಸಂಗಣ್ಣ ಕರಡಿ ಅವರೇ ಮುಂದಿನ ಎಂಎಲ್‌ಎ’ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.

ಮಂಗಳವಾರ ತಾಲೂಕಿನ ಹಲಿಗೇರಿ ಗ್ರಾಮದಲ್ಲಿ ಚಂದ್ರಶೇಖರ ಪಾಟೀಲ್‌ ಅವರ ನಿವಾಸಕ್ಕೆ ಭೇಟಿ ನೀಡಿ, ವಾಪಸ್ಸಾಗುವ ವೇಳೆ ಸಂಗಣ್ಣ ಕರಡಿ ಅವರ ಅಭಿಮಾನಿಗಳು ಈ ರೀತಿಯ ಘೋಷಣೆ ಕೂಗಿದರು. ಸಂಸದರಿಗೆ ಎಂಎಲ್‌ಎ ಟಿಕೆಟ್‌ ಕೊಡಬೇಕು ಎನ್ನುವ ಕೂಗು ಕೇಳಿ ಬಂದಿತು. ಆದರೆ, ಇದ್ಯಾವುದಕ್ಕೂ ನಳೀನಕುಮಾರ ಕಟೀಲ್‌ ಅವರು ಕಿವಿಗೊಡದೆ ಮುಂದೆ ಸಾಗಿದರು.

Tap to resize

Latest Videos

undefined

ಸಂಗಣ್ಣ ಮುಂದಿನ ದಾರಿ ಯಾವುದು ?

ಕೊಪ್ಪಳ (ಫೆ.11) : ಸಂಸದ ಸಂಗಣ್ಣ ಕರಡಿ ಅವರಿಗೆ ಕೇಂದ್ರ ಸಚಿವರಾಗುವ ಯೋಗ ಇದೆಯೋ ಅಥವಾ ಕೊಪ್ಪಳ ವಿಧಾನಸಭಾ ಟಿಕೆಟ್ಟೋ ಎನ್ನುವ ವಿಷಯ ಕೇಂದ್ರ ಸಂಸದೀಯ ವ್ಯವಹಾರಗಳ ಸಮಿತಿಯ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಚರ್ಚೆಯಾಗಿದೆ ಎನ್ನಲಾಗಿದ್ದು, ಇದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ರಾಯಚೂರು(Raichur) ಜಿಲ್ಲೆಯ ಸಿಂಧನೂರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿ.ಎಸ್‌. ಯಡಿಯೂರಪ್ಪ(BS Yadiyurappa) ಅವರ ಸಮ್ಮುಖದಲ್ಲಿ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ನಾಯಕರ ಸಮ್ಮುಖದಲ್ಲಿ ಚರ್ಚೆಯಾಗಿದೆ. ಈ ವೇಳೆ ಸಂಸದ ಸಂಗಣ್ಣ ಕರಡಿ(MP Karadi sanganna) ಅವರು ಅಲ್ಲಿಯೇ ಇದ್ದರೂ ತಮ್ಮ ಕುರಿತು ಚರ್ಚೆಯಾಗುತ್ತಿದ್ದ ವೇಳೆ ಆಚೆ ಇರುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ.

ಸಂಗಣ್ಣ ಕರಡಿಗೆ ಮರುಜೀವ ತುಂಬಿದ್ದೇ ಜೆಡಿಎಸ್‌: ಎಚ್‌ಡಿಕೆ

ಚರ್ಚೆಯಾಗಿದ್ದಾದರೂ ಏನು?:

ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಹಜವಾಗಿಯೇ ಚರ್ಚೆಯಾಗುತ್ತಿದ್ದ ವೇಳೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಮುಖಂಡರು ಸಂಸದ ಸಂಗಣ್ಣ ಕರಡಿ ಅವರ ಕುರಿತು ಪ್ರಸ್ತಾಪಿಸಿದ್ದಾರೆ. ಸಂಗಣ್ಣ ಅವರು ಹಿರಿಯರಿದ್ದಾರೆ, ಸುಮಾರು ವರ್ಷಗಳಿಂದ ರಾಜಕೀಯಲ್ಲಿ ಸತತವಾಗಿ ಗೆಲ್ಲುತ್ತಿದ್ದಾರೆ. ಈ ಬಾರಿ ಕೇಂದ್ರ ಸಚಿವ ಸಂಪುಟವನ್ನು ಪುನರ್‌ ರಚನೆ ಅಥವಾ ವಿಸ್ತರಣೆಯ ವೇಳೆ ಪರಿಗಣಿಸಿ ಎಂದಿದ್ದಾರೆ.

ಕೇಂದ್ರ ಸಚಿವರನ್ನಾಗಿ ಸಂಸದ ಸಂಸದ ಸಂಗಣ್ಣ ಕರಡಿ ಅವರನ್ನು ಮಾಡುವುದರಿಂದ ಮೂರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟುಬಲ ಬರಲಿದೆ ಎನ್ನುವ ಅಭಿಪ್ರಾಯವನ್ನು ಕೆಲವರು ಹೇಳಿದ್ದಾರೆ. ಇದೆಲ್ಲವನ್ನು ಯಡಿಯೂರಪ್ಪ ಅವರು ಶಾಂತಚಿತ್ತದಿಂದಲೇ ಆಲಿಸಿದ್ದಾರೆ. ಅಂಥ ಅವಕಾಶ ಇದ್ದರೆ ಪಕ್ಷ ಪರಿಗಣಿಸುತ್ತದೆ ಎಂದಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಸ್ಥಳೀಯ ನಾಯಕರು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿ, ಆಗದಿದ್ದರೆ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ನೀಡಿ ಎನ್ನುವುದನ್ನು ಹೇಳಿದ್ದಾರೆ.

ಬಿಎಸ್‌ವೈಯವರು, ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಎನ್ನುವುದನ್ನು ಕಾದು ನೋಡೋಣ. ಸಂಸದ ಸಂಗಣ್ಣ ಕರಡಿ ಅವರ ಕುರಿತು ಎರಡು ಮಾತಿಲ್ಲ, ಅವರ ಸಂಘಟನೆ ಮತ್ತು ಜನಪರ ಸೇವೆ ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ. ಇದಾದ ಮೇಲೆ ಸಂಸದ ಸಂಗಣ್ಣ ಕರಡಿ ಅವರು ಆಗಮಿಸಿದ್ದರೂ ಈ ಚರ್ಚೆಯಿಂದ ಅವರು ದೂರವೇ ಉಳಿದಿದ್ದರು.

ಕ್ಷೇತ್ರಾದ್ಯಂತ ಭಾರಿ ಸದ್ದು:

ಸಂಸದ ಸಂಗಣ್ಣ ಕರಡಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಪ್ರಸ್ತಾವನೆಯನ್ನು ಹೈಕಮಾಂಡ್‌ ನೀಡಿದೆಯಾದರೂ ಅದನ್ನು ಸಂಗಣ್ಣ ಅವರು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಕೇಂದ್ರ ಸಚಿವ ಸ್ಥಾನಕ್ಕಿಂತಲೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡಿ ಎಂದಿದ್ದಾರೆ ಎನ್ನುವ ವದಂತಿ ಜೋರಾಗಿ ಸಾಗಿದೆ. ಆದರೆ ಇದನ್ನೂ ಸಂಸದ ಸಂಗಣ್ಣ ಕರಡಿ ಅವರು ತಳ್ಳಿ ಹಾಕಿದ್ದಾರೆ.

ಐಎಎಸ್‌ ಮಕ್ಕಳು ಐಎಎಸ್ ಆಗ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗ್ಬಾರ್ದೆ: ಎಚ್‌ಡಿಕೆ

ನಮ್ಮ ಪಕ್ಷದಲ್ಲಿ ಏನು ಬೆಳವಣಿಗೆಯಾಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ನನ್ನ ಪರವಾಗಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಪಕ್ಷದ ಮುಖಂಡರು, ಹಿರಿಯ ನಾಯಕ ಯಡಿಯೂರಪ್ಪ ಅವರ ಎದುರು ಸಿಂಧನೂರಿನಲ್ಲಿ ಚರ್ಚಿಸಿದ್ದಾರೆ. ಆಗ ನಾನಿರಲಿಲ್ಲ. ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ. ಹೈಕಮಾಂಡ್‌ ಕೊಪ್ಪಳದಿಂದ ಸ್ಪರ್ಧಿಸಿ ಎಂದರೆ ಮಾಡುತ್ತೇನೆ, ಇಲ್ಲದಿದ್ದರೆ ಸಂಸದನಾಗಿರುತ್ತೇನೆ.

ಸಂಗಣ್ಣ ಕರಡಿ, ಸಂಸದ

click me!