ಕ್ಷೇತ್ರದ ಜನರಿಗೆ ಧೈರ್ಯ ತುಂಬಿದ ಸಂಸದ ಪ್ರಜ್ವಲ್

Published : Aug 11, 2019, 12:26 PM ISTUpdated : Aug 11, 2019, 01:10 PM IST
ಕ್ಷೇತ್ರದ ಜನರಿಗೆ ಧೈರ್ಯ ತುಂಬಿದ ಸಂಸದ ಪ್ರಜ್ವಲ್

ಸಾರಾಂಶ

ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.  ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಪ್ರವಾಹ ಪೀಡಿತಪ್ರದೇಶಗಳಿಗೆ ತೆರಳಿ ನೆರವಿನ ಭರವಸೆ ನೀಡಿದ್ದಾರೆ. 

ಹಾಸನ [ಆ.11]: ರಾಜ್ಯದ 17 ಜಿಲ್ಲೆಗಳು ನೆರೆಯಿಂದ ತತ್ತರಿಸಿವೆ. ಭಾರೀ ಮಳೆ ಜನಜೀವನ ಅಸ್ತವ್ಯಸ್ತ ಮಾಡಿದೆ. ಹಲವು ನಾಯಕರು ಪ್ರವಾಹ ಪೀಡಿತವಾದ ತಮ್ಮ ಕ್ಷೇತ್ರದ ಜನರಿಗೆ ನೆರವಾಗುತ್ತಿದ್ದಾರೆ. 

ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಕೂಡ ತಡರಾತ್ರಿವರೆಗೂ ಕೂಡ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಜನರಿಗೆ ಧೈರ್ಯ ತುಂಬಿದ್ದಾರೆ. 

ಹೇಮಾವತಿ ನದಿಯಲ್ಲಿ ನೀರುಕ್ಕಿದ ಪರಿಣಾಮ ಹಲವು ರಸ್ತೆಗಳಲ್ಲಿ ಸಂಚಾರ ಸ್ಥಗಿತವಾಗಿದ್ದರ ಬಗ್ಗೆಯೂ ಕೂಡ ಜನರಿಗೆ ಮಾಹಿತಿ ನೀಡುತ್ತಿದ್ದರು. ಚನ್ನರಾಯಪಟ್ಟಣಕ್ಕೆ ತೆರಳಿದ್ದ ಪ್ರಜ್ವಲ್ ಇಲ್ಲಿ ರಸ್ತೆಯಲ್ಲಿ ಹಲವು ಸಮಯದವರೆಗೂ ಕೂಡ ವಾಹನ ಸವಾರರನ್ನು ವಾಪಸ್ ಕಳುಹಿಸುವ ಕೆಲಸ ಮಾಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಲ್ಲಿನ ಗೋರೂರು ಜಲಾಶಯದಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವ ಪರಿಣಾಮ ಇಲ್ಲಿನ ಅನೇಕ ಸ್ಥಳಗಳು ಜಲಾವೃತವಾಗಿದ್ದು, ಸಂಸದರು ಇಲ್ಲಿನ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ನೆರವಿನ ಭರವಸೆ ನೀಡಿದರು.

PREV
click me!

Recommended Stories

ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌
ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ