
ಶಿವಮೊಗ್ಗ (ಸೆ.5): ಕರ್ನಾಟಕಕ್ಕೆ ಮೂರು ಹೊಸ ವಂದೇ ಭಾರತ್ ರೈಲು ಬರೋದು ಖಚಿತವಾಗಿದೆ. ಇದರಲ್ಲಿ ಒಂದು ರೈಲು ಶಿವಮೊಗ್ಗ ಮಾರ್ಗದಲ್ಲಿ ಓಡಾಡಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿರುವ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಾತನಾಡಿದ್ದು, ಕರ್ನಾಟಕಕ್ಕೆ ಹೊಸದಾಗಿ ಮೂರು ವಂದೇ ಭಾರತ್ ರೈಲು ಬರಲಿದೆ. ಅದರಲ್ಲಿ ಒಂದು ಶಿವಮೊಗ್ಗ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಸ್ತಾಪವವಿದೆ ಎಂದು ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಅಂತರಾಷ್ಟಿಯ ವಿಮಾನ ನಿಲ್ದಾಣವಾಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿದೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು. ಕೋಟೆ ಗಂಗೂರಿನಲ್ಲಿ ರೈಲ್ವೆ ಸರ್ವಿಸ್ ಕೇಂದ್ರವನ್ನ ಶೀಘ್ರದಲ್ಲಿ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರೈಲ್ವೇ ಸರ್ವೀಸ್ ಕೇಂದ್ರ ಆರಂಭದಿಂದ 10ರಿಂದ 12 ರಾಜ್ಯಗಳಿಗೆ ರೈಲ್ವೇ ಸಂಪರ್ಕ ದೊರಕುತ್ತದೆ. 2008ರ ಹಿಂದೆ ಒಂದೇ ಒಂದು ಮೀಟರ್ ರೈಲ್ವೆ ಹಳಿಯನ್ನು ಹಾಕಲು ಆಗಿರಲಿಲ್ಲ. ನಾನು ಎಂಪಿ ಆದ ನಂತರ ಶಿವಮೊಗ್ಗದಿಂದ ತಾಳಗುಪ್ಪದವರೆಗೆ ಮೀಟರ್ ಗೇಜ್ ನಿಂದ ಬದಲಾಯಿಸಿ ಬ್ರಾಡ್‌ಗೇಜ್ ಸೌಲಭ್ಯವನ್ನು ಮಾಡಲಾಯಿತು. ಶಿವಮೊಗ್ಗ ರಾಣೇಬೆನ್ನೂರು ರೈಲು ಮಾರ್ಗ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗಿದೆ. 20,000 ಕೋಟಿ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಶಿವಮೊಗ್ಗ ಕ್ಷೇತ್ರದಲ್ಲಿ ಭರದಿಂದ ನಡೆದಿದೆ ಎಂದು ತಿಳಿಸಿದ್ದಾರೆ.
3 ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ: ಇದರ ವಿಶೇಷತೆಗಳೇನು ಗೊತ್ತಾ?
ಕರ್ನಾಟಕದಲ್ಲಿ ಈವರೆಗೂ ಒಟ್ಟು 7 ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್‌ಗಳು ಓಡಾಟ ನಡೆಸುತ್ತಿವೆ. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವಾಗಿ ಪ್ರಮುಖ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸುತ್ತಿದ್ದರೆ, ಬೆಂಗಳೂರು-ಧಾರವಾಡ, ಮಂಗಳೂರು-ಮಡಗಾಂವ್, ಬೆಂಗಳೂರು-ಕೊಯಮತ್ತೂರು ನಗರಗಳನ್ನು ಸಂಪರ್ಕ ಮಾಡುತ್ತಿವೆ. 800 ಕಿಲೋಮೀಟರ್ ಒಳಗಿನ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಉದ್ದೇಶದಲ್ಲಿ ವಂದೇಭಾರತ್ ರೈಲುಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ 2019ರ ಫೆಬ್ರವರಿ 15ಕ್ಕೆ ಚಾಲನೆ ಸಿಕ್ಕಿತ್ತು. ಪ್ರಸ್ತುತ ದೇಶದಲ್ಲಿ ಒಟ್ಟು 55 ವಂದೇ ಭಾರತ್ ಟ್ರೇನ್‌ಗಳು ಸಂಚಾರ ನಡೆಸುತ್ತಿವೆ.
ಬೆಂಗಳೂರು-ಮದುರೈ ಸೇರಿ 3 ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ಇಲ್ಲಿದೆ ರೈಲು ವೇಳಾಪಟ್ಟಿ!