ಶಿವಮೊಗ್ಗದ ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ವಸತಿಗೃಹಗಳ ಭೂಸ್ವಾಧೀನಕ್ಕಾಗಿ ರೈಲ್ವೆ ಇಲಾಖೆಗೆ ಈಗಾಗಲೇ 2.36 ಕೋಟಿ ರು. ಪಾವತಿಸಲಾಗಿದ್ದು, ಸದರಿ ಕಟ್ಟಡಗಳನ್ನು ರೈಲ್ವೆ ಇಲಾಖೆ ಲೋಕೋಪಯೋಗಿ ಇಲಾಖೆ ಸ್ವಾಧೀನಕ್ಕೆ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.16): ನಗರ ರೈಲ್ವೆ ಕಾಂಪೌಂಡ್‌ನಿಂದ ಹೊಸಪೇಟೆ-ಶಿವಮೊಗ್ಗ ರಸ್ತೆ ಸಂಪರ್ಕಿಸುವ 100 ಅಡಿ ವರ್ತುಲ ರಸ್ತೆ ಕಾಮಗಾರಿ ಸ್ಥಳ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಶುಕ್ರವಾರ ಸ್ಥಳ ಪರಿಶೀಲಿಸಿದರು.
ಸದರಿ ರಸ್ತೆಯ ಎರಡು ಬದಿಯಲ್ಲಿ 750 ಮೀ. ಉದ್ದಕ್ಕೆ ಸಿಮೆಂಟ್ ಕಾಂಕ್ರೀಟ್ ಚತುಷ್ಪಥ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ, ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ 100 ಮೀಟರ್ ಸಿಸಿ ರಸ್ತೆ ನಿರ್ಮಾಣ ಮತ್ತು ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲು 400 ಮೀಟರ್ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಇದರಲ್ಲಿ ಸೇರಿದೆ.
ಮೆಗ್ಗಾನ್‌ನಲ್ಲಿ ಹೃದ್ರೋಗ ಹೊರ ರೋಗಿ ವಿಭಾಗ; ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ
ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ವಸತಿಗೃಹಗಳ ಭೂಸ್ವಾಧೀನಕ್ಕಾಗಿ ರೈಲ್ವೆ ಇಲಾಖೆಗೆ ಈಗಾಗಲೇ 2.36 ಕೋಟಿ ರು. ಪಾವತಿಸಲಾಗಿದ್ದು, ಸದರಿ ಕಟ್ಟಡಗಳನ್ನು ರೈಲ್ವೆ ಇಲಾಖೆ ಲೋಕೋಪಯೋಗಿ ಇಲಾಖೆ ಸ್ವಾಧೀನಕ್ಕೆ ನೀಡಿದೆ. ಖಾಸಗಿ ಒಡೆತನದ ಒಟ್ಟು 14 ವಸತಿಗೃಹಗಳ ಭೂಸ್ವಾಧೀನ ಪ್ರಕ್ರಿಯೆಗಾಗಿ 3.78 ಕೋಟಿ ರು. ಪಾವತಿಸಲು ಉಪವಿಭಾಗಧಿಕಾರಿ ಅವರು ಸೂಚಿಸಿದ್ದು, ಈಗಾಗಲೇ 2.40 ಕೋಟಿ ರು. ಪಾವತಿಸಲಾಗಿದೆ. ಇನ್ನುಳಿದ ಮೆಸ್ಕಾಂನ ಜಾಗದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದನ್ನು ಆದಷ್ಟುಬೇಗನೆ ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು.
ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ವಿದ್ಯುತ್ ಕಂಬಗಳ ತೆರವು ಪ್ರಕ್ರಿಯೆ ಆರಂಭಿಸಬೇಕು. ಅದರಂತೆ ಯುಜಿಡಿ ಪೈಪ್‌ಲೈನ್ ಸ್ಥಳಾಂತರಿಸುವ ಕಾಮಗಾರಿಗೆ ಅಂದಾಜುಪಟ್ಟಿಯಲ್ಲಿ 28 ಲಕ್ಷ ರು. ಒದಗಿಸಲಾಗಿದೆ. ನೀರು ಸರಬರಾಜು ಕೊಳವೆಗಳ ಸ್ಥಳಾಂತರಕ್ಕಾಗಿ 18.50 ಲಕ್ಷ ರು. ಪಾವತಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭೂಸ್ವಾಧೀನಗೊಂಡಿರುವ ರೈಲ್ವೆ ಇಲಾಖೆಯ ವಸತಿಗೃಹಗಳು ಮತ್ತು ಖಾಸಗಿ ವಸತಿಗೃಹ ಕಟ್ಟಡದ ನೆಲಸಮ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಅವಧಿಯ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ವರ್ತುಲ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು - ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಇತರರು ಇದ್ದರು.