ಮಳೆ ಸಂಕಷ್ಟ: ಸಂಸದರಿಂದ 1 ಕೋಟಿ ನೆರವು

Published : Aug 11, 2019, 12:40 PM IST
ಮಳೆ ಸಂಕಷ್ಟ: ಸಂಸದರಿಂದ 1 ಕೋಟಿ ನೆರವು

ಸಾರಾಂಶ

ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗಾಗಿ ಪ್ರೇರಣಾ ಎಜುಕೇಷನ್‌ ಟ್ರಸ್ಟ್‌ ವತಿಯಿಂದ 50 ಲಕ್ಷ ರು. ಹಾಗೂ ತಮ್ಮ ಸಂಸದರ ನಿಧಿಯಿಂದ 50 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂಸದ ಬಿ. ವೈ. ರಾಘವೇಂದ್ರ ಶನಿವಾರ ನೀಡಿದರು.

ಶಿವಮೊಗ್ಗ(ಆ.11): ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗಾಗಿ ಪ್ರೇರಣಾ ಎಜುಕೇಷನ್‌ ಟ್ರಸ್ಟ್‌ ವತಿಯಿಂದ 50 ಲಕ್ಷ ರು. ಹಾಗೂ ತಮ್ಮ ಸಂಸದರ ನಿಧಿಯಿಂದ 50 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂಸದ ಬಿ. ವೈ. ರಾಘವೇಂದ್ರ ಶನಿವಾರ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಚೆಕ್‌ನ್ನು ಸಂಸದ ಬಿ.ವೈ. ರಾಘವೇಂದ್ರ ಜಿಲ್ಲಾಧಿಕಾರಿಗಳಿಗೆ ನೀಡಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟುಹಾನಿಯಾಗಿದೆ. ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಹಾನಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಣ, ವಸ್ತು ನೀಡಲು ಮನವಿ:

ತಾವು ಮತ್ತು ಸ್ಥಳೀಯ ಜನಪ್ರತಿನಿಧಿಗಳು, ವಿಧಾನಪರಿಷತ್‌ ಸದಸ್ಯರು ಜಿಲ್ಲೆಯಲ್ಲಿ ಪ್ರವಾಸ ನಡೆಸಿ ಮಳೆಯಿಂದ ಉಂಟಾಗಿರುವ ಹಾನಿ ಪ್ರಮಾಣದ ಬಗ್ಗೆ ಮಾಹಿತಿ ಪಡೆದು, ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತೇವೆ. ಜಿಲ್ಲೆಗೆ ಮತ್ತಷ್ಟುಪರಿಹಾರ ನೀಡಲು ಮನವಿ ಮಾಡುತ್ತೇವೆ. ಇದರ ಜೊತೆಗೆ ಸಾರ್ವಜನಿಕರು ಕೂಡ ನೆರವಿಗೆ ಧಾವಿಸಬೇಕು. ದಾನಿಗಳು ವಸ್ತುಗಳು, ಹಣವನ್ನು ಪರಿಹಾರಕ್ಕಾಗಿ ನೀಡಬೇಕು ಎಂದು ಮನವಿ ಮಾಡಿದರು.

ತಾತ್ಕಾಲಿಕ ಪುನರ್ವಸತಿ ಕೇಂದ್ರ

ಈಗಾಗಲೇ ಸಾಕಷ್ಟು ತಾತ್ಕಾಲಿಕ ಪುನರ್ವಸತಿ ಕೇಂದ್ರಗಳ ಮೂಲಕ ಜನರ ರಕ್ಷಣೆ ಮಾಡುವ ಮೂಲಕ ಸಮರ್ಥವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರು ಸುಳ್ಳು ಸುದ್ದಿ ಹಬ್ಬಿಸದೆ, ಸಹಕಾರ ನೀಡಬೇಕು ಎಂದರು. ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಎಸ್‌. ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಎಸ್ಪಿ ಶಾಂತರಾಜ್‌ ಮೊದಲಾದವರು ಇದ್ದರು.

ಶಿವಮೊಗ್ಗ: ತ್ಯಾಗರ್ತಿ ಗ್ರಾಮ ಸಂಪೂರ್ಣ ಜಲಾವೃತ

PREV
click me!

Recommended Stories

ದಾವಣಗೆರೆ ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು, ಸಾರ್ವಜನಿಕರಿಗೆ ಪ್ರವೇಶ ನಿಷೇಧ, ವೈದ್ಯರ ತೀವ್ರ ನಿಗಾ
ಬೆಂಗಳೂರಿಗೆ ಟಕ್ಕರ್ ಕೊಡೋಕೆ ಹೋಗಿ ಕೇಂದ್ರದಿಂದ ಮತ್ತೆ ಛೀಮಾರಿ ಹಾಕಿಸಿಕೊಂಡ ತಮಿಳುನಾಡು