ತಾನು ಅನೈತಿಕ ಸಂಬಂಧ ಹೊಂದಿದ್ದಾತ ತಮ್ಮ ಮಗಳನ್ನೇ ಬಯಸಿದನೆಂದು ಪುತ್ರಿಯನ್ನೇ ಕತ್ತು ಹಿಸುಕಿ ಕೊಂದು ತಾಯಿಯೊಬ್ಬರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ಶಿವಮೊಗ್ಗ [ಮಾ.12]: ತನ್ನ ಪ್ರಿಯಕರ ಮಗಳನ್ನೇ ಬಯಸಿದ ಕಾರಣಕ್ಕಾಗಿ ಹೆತ್ತ ಮಗಳನ್ನೇ ತಾಯಿಯೋರ್ವಳು ಕೊಲೆಗೈದು ತಾನು ಆತ್ಮಹತ್ಯೆಗೆ ಮುಂದಾಗಿ ಕೊನೆಗೆ ಪೋಲಿಸರಿಗೆ ಶರಣಾದ ವಿಚಿತ್ರ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದ ಮಹಿಳೆ ಲತಾ ಎಂಬಾಕೆಯೇ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗಳನ್ನು ಕೊಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.
ಶಿವಮೊಗ್ಗ ತಾಲ್ಲೂಕಿನ ಮತ್ತೋಡು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶಿಕಾರಿಪುರ ಮೂಲದ ಲತಾ (45) ಎಂಬ ಮಹಿಳೆ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗಳನ್ನು ಪ್ರಿಯತಮ ಬಸಯಿದ್ದರಿಂದ ಆಕೆಯನ್ನು ಕೊಂದು ಹಾಕಿದ್ದಾಳೆ.
ದಾವಣಗೆರೆ ಜಿಲ್ಲೆಯ ನ್ಯಾಮತಿಯ ಲತಾ ಕಳೆದ 6 ವರ್ಷಗಳ ಹಿಂದೆ ಪತಿ ಪ್ರಭಾಕರ ನಿಧನದ ನಂತರ ತನ್ನ ತವರಾದ ಶಿಕಾರಿಪುರ ಸೇರಿದ್ದಳು. ತನ್ನ ಒಬ್ಬಳೆ ಮಗಳನ್ನು ಹಾಸ್ಟೆಲ್ ನಲ್ಲಿ ಇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಳು.
'ನನ್ನ ಮೇಲೆ ಷಡ್ಯಂತ್ರ ಮಾಡಿದವರಿಗೂ ಕರೋನಾ ಬಂದಿದೆ'...
ಈ ಮಧ್ಯೆ ನ್ಯಾಮತಿಯ ಶಾಲೆಯೊಂದರ ವಾಹನ ಚಾಲಕನಾಗಿದ್ದ ಸುನೀಲ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಆತನೇ ಅಕೆಯನ್ನು ಶಿವಮೊಗ್ಗದ ಮತ್ತೋಡು ಗ್ರಾಮದಲ್ಲಿ ಮನೆ ಮಾಡಿ ಇರಿಸಿದ್ದ. ಇಲ್ಲಿಯೇ ಲತಾ ಅಡಿಕೆ ಹಾಳೆ ತಟ್ಟೆಯ ತಯಾರಕ ಘಟಕದಲ್ಲಿ ಕೆಲಸ ಮಾಡಿಕೊಂಡಿದ್ದಳು.
ಆಗಾಗ ಮನೆಗೆ ಬರುವ ಮಗಳನ್ನು ಕಂಡ ಪ್ರಿಯಕರ ಅಕೆಯನ್ನು ಮದುವೆ ಮಾಡಿ ಕೊಡುವಂತೆ ಲತಾಳಿಗೆ ದುಂಬಾಲು ಬಿದ್ದಿದ್ದ. ಇದರಿಂದ ತಲೆ ಕೆಡಿಸಿಕೊಂಡ ಲತಾ ಮಗಳನ್ನು ಕತ್ತು ಹಿಸುಕಿ ಕೊಂದು ಬಳಿಕ ನೇಣು ಬಿಗಿದುಕೊಂಡು, ತಾನೇ ನೇಣು ಹಗ್ಗ ಬಿಚ್ಚಿಕೊಂಡು ಪೊಲೀಸ್ ಠಾಣೆಗೆ ಓಡಿ ಪೊಲೀಸರ ಮುಂದೆ ಶರಣಾಗಿದ್ದಾಳೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರು ಶಿವಮೊಗ್ಗ ಗ್ರಾಮಾಂತರ ಠಾಣೆ ಪೋಲಿಸರು ಲತಾಳನ್ನು ಅಸ್ಪತ್ರೆಗೆ ದಾಖಲಿಸಿ, ಪ್ರಿಯಕರನ ಪತ್ತೆಗಾಗಿ ಬಲೆ ಬೀಸಿದ್ದ್ದಾರೆ.