ಕಲಬುರಗಿ: ಅಳಿಯ ಮೃತಪಟಿದ್ದಕ್ಕೆ ಮನನೊಂದು ಅತ್ತೆಯೂ ಸಾವು..!

By Kannadaprabha News  |  First Published Sep 8, 2023, 10:00 PM IST

ಸಿದ್ದಮ್ಮ ಅವರ ಮಗಳಾದ ಸುಚಿತ್ರಾ ಪತಿ ಕಾಶಿನಾಥ್ ಕೋರಿ ಕ್ಯಾನ್ಸರ್ ನಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಈ ಸುದ್ದಿ ತಿಳಿದು ಮನನೊಂದು ಸಿದ್ದಮ್ಮ ಇಲ್ಲಿನ ನದಿಗೆ ಹಾರಿದ್ದಾರೆ. 
 


ಕಮಲಾಪುರ(ಸೆ.08):  ಅಳಿಯ ಮೃತಪಟ್ಟಿದ್ದಕ್ಕೆ ಮನನೊಂದು ಅತ್ತೆ ನದಿಗೆ ಹಾರಿ ಸಾವನ್ನಪ್ಪಿರುವ ಘಟನೆ ಕಮಲಾಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರನ್ನು ಸಿದ್ದಮ್ಮ ಕೊಂಡಿ (85) ಎಂದು ಗುರುತಿಸಲಾಗಿದೆ. ಇವರು ತಾಲೂಕಿನ ಕುರಿಕೋಟಾ ಸೇತುವೆ ಬಳಿ ಬೆಣ್ಣೆತೊರಾ ಜಲಾಶಯ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿದ್ದಮ್ಮ ಅವರ ಮಗಳಾದ ಸುಚಿತ್ರಾ ಪತಿ ಕಾಶಿನಾಥ್ ಕೋರಿ (55) ಕ್ಯಾನ್ಸರ್ ನಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಈ ಸುದ್ದಿ ತಿಳಿದು ಮನನೊಂದು ಸಿದ್ದಮ್ಮ ಇಲ್ಲಿನ ನದಿಗೆ ಹಾರಿದ್ದಾರೆ. ಸಿದ್ದಮ್ಮ ಬೀದರ್ ಕುಂಬಾರವಾಡ ಗ್ರಾಮದ ನಿವಾಸಿ. ಇವರ ಪುತ್ರಿ ಸುಚಿತ್ರ ಕಲಬುರಗಿ ಘಾಟಗೆ ಲೇಔಟಿನ ನಿವಾಸಿಯಾಗಿದ್ದಾರೆ.

Tap to resize

Latest Videos

undefined

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ನನ್ನ ಹೇಳಿಕೆಗೆ ನಾನು ಬದ್ಧ: ಪ್ರಿಯಾಂಕ್ ಖರ್ಗೆ

ಅಳಿಯನ ಸಾವಿಗೆ ಮನನೊಂದ ಸಿದ್ದಮ್ಮ ಬುಧವಾರ ಬೆಳಗ್ಗೆ ಕೋರಿಕೋಟಾ ಸೇತುವೆ ಬಳಿಯ ಬೆಣ್ಣೆತೊರೆ ಹಿನ್ನಿರಿಗೆ ಜಿಗಿದಿದ್ದಾರೆ. ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಶವ ಹೊರ ತೆಗೆದು ಪೊಲೀಸರು ಗುರುತು ಪತ್ತೆ ಹಚ್ಚಿದ್ದು, ನಂತರ ಸಾವಿಗೆ ಕಾರಣ ತಿಳಿದು ಬಂದಿದೆ. ಪಿಎಸ್ಐ ಆಶಾ ರಾಠೊಡ್, ರಾಮಲಿಂಗ, ಶಿದಲಿಂಗ, ಅಶೊಕ, ಅಮರನಾಥ, ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!