ಆ್ಯಂಬುಲೆನ್ಸ್‌ನಲ್ಲೇ ಮುದ್ದಾದ ಮಗು​ವಿಗೆ ಜನ್ಮ ನೀಡಿದ ತಾಯಿ

Kannadaprabha News   | Asianet News
Published : Apr 24, 2020, 03:31 PM IST
ಆ್ಯಂಬುಲೆನ್ಸ್‌ನಲ್ಲೇ ಮುದ್ದಾದ ಮಗು​ವಿಗೆ ಜನ್ಮ ನೀಡಿದ ತಾಯಿ

ಸಾರಾಂಶ

ಆ್ಯಂಬುಲೆನ್ಸ್‌ನಲ್ಲೇ ಗಂಡು ಮಗು​ವಿಗೆ ಜನ್ಮ ನೀಡಿದ ತಾಯಿ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೋಮಾರನ ಹಳ್ಳಿ ತಾಂಡಾದಲ್ಲಿ ನಡೆದ ಘಟನೆ| ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ|

ಹೂವಿನಹಡಗಲಿ(ಏ.24): ಮಹಿಳೆಯೊಬ್ಬರು ಆ್ಯಂಬುಲೆನ್ಸ್‌ನಲ್ಲೇ ಗಂಡು ಮಗು​ವಿಗೆ ಜನ್ಮ ನೀಡಿದ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೋಮಾರನ ಹಳ್ಳಿ ತಾಂಡಾದಲ್ಲಿ ಗುರುವಾರ ನಡೆದಿದೆ.

ಕನಕಬಾಯಿ ಎಂಬ ಗರ್ಭಿಣಿಯನ್ನು ತಾಂಡಾದಿಂದ ಹೆರಿಗೆ ಮಾಡಿಸಲು ಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗುತ್ತಿತ್ತು.  ಮಾರ್ಗ ಮಧ್ಯದ ನಾಗತಿ ಬಸಾಪುರ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್‌​ನ​ಲ್ಲೇ ಮಗು​ವಿಗೆ ಜನ್ಮ ನೀಡಿ​ದ್ದಾ​ಳೆ. 

ಕೊರೋನಾ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತಾಂಡವ: ಆತಂಕದಲ್ಲಿ ಜನತೆ..!

ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು 108 ಆ್ಯಂಬುಲೆನ್ಸ್‌ ತುರ್ತು ಸೇವಾ ತಜ್ಞ ಧನ್ಯ ನಾಯ್ಕ ತಿಳಿಸಿದ್ದಾರೆ. 
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ