ಮನೆಯ ಗೋಡೆ ಕುಸಿದು ತಾಯಿ, ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೆಳಗ್ಗಿನ ಜಾವ ಮಗು ತಾಯಿ ಇಬ್ಬರೂ ನಿದ್ರಿಸುತ್ತಿದ್ದ ಸಂದರ್ಭ ಮನೆಯ ಗೋಡೆ ಕುಸಿದು ಬಿದ್ದಿದೆ. ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಶಿವಮೊಗ್ಗ(ಆ.14): ಮನೆಯ ಗೋಡೆ ಕುಸಿದು ತಾಯಿ, ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೆಳಗ್ಗಿನ ಜಾವ ಮಗು ತಾಯಿ ಇಬ್ಬರೂ ನಿದ್ರಿಸುತ್ತಿದ್ದ ಸಂದರ್ಭ ಮನೆಯ ಗೋಡೆ ಕುಸಿದು ಬಿದ್ದಿದೆ.
ಉಮಾ (30)ಧನುಷ್(01) ಮೃತ ದುರ್ದೈವಿಗಳು. ಮಲಗಿದ್ದ ತಾಯಿ, ಮಗುವಿನ ಮೇಲೆ ಗೋಡೆ ಕುಸಿದು ಬಿದ್ದಿದೆ. ಇಬ್ಬರೂ ಬೆಳಗಿನ ಜಾವ ನಿದ್ರಿಸುತ್ತಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಬ್ಬರನ್ನೂ ಶಿವಮೊಗ್ಗ ದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮಗು ಸಾವನ್ನಪ್ಪಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’!