ಉಡುಪಿ: ಗಾಳಿ ಸಹಿತ ಮಳೆಗೆ 10 ಮನೆಗಳಿಗೆ ಹಾನಿ

By Kannadaprabha NewsFirst Published Aug 14, 2019, 10:03 AM IST
Highlights

ಉಡುಪಿಯಲ್ಲಿ ಗಾಳಿ ಮಳೆಯ ಅಬ್ಬರ ಹೆಚ್ಚಾಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬ್ರಹ್ಮಾವರದಲ್ಲಿ ಒಟ್ಟು 2ಲಕ್ಷಕ್ಕೂ ಹೆಚ್ಚು ನಾಶ ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೃಷಿಯೂ ಹಾನಿಗೊಳಗಾಗಿದೆ.

ಉಡುಪಿ(ಆ.14): ಈ ಬಾರಿಯ ಮಳೆಗಾಲದಲ್ಲಿ ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳಿಗೆ ಮತ್ತು ಕೃಷಿಗೆ ಹಾನಿಯಾಗಿದ್ದು, ಮಂಗಳವಾರವೂ ಹಾನಿ ಮುಂದುವರಿದಿದೆ.

ಸೋಮವಾರ ರಾತ್ರಿ ಇಲ್ಲಿನ ಯಡ್ತರೆ ಗ್ರಾಮದ ಮರ್ಲಿ ಅಣ್ಣಪ್ಪ ಪೂಜಾರಿ ಅವರ ಹಂಚಿನ ಗೋಡೆ ಮತ್ತು ಮಾಡು ಸಂಪೂರ್ಣ ಕುಸಿದಿದ್ದು ಸುಮಾರು 1 ಲಕ್ಷ ರು. ಹಾನಿ ಅಂದಾಜು ಮಾಡಲಾಗಿದೆ. ಇದೇ ಗ್ರಾಮದ ಸುಬ್ಬಿ ಗೋವಿಂದ ಅವರ ಮನೆಗೂ ಸುಮಾರು 50 ಸಾವಿರ ರು. ಹಾನಿಯಾಗಿದೆ.

ಇಲ್ಲಿನ ಕೆರ್ಗಾಲು ಗ್ರಾಮದಲ್ಲಿ ಮತ್ತೆ ಗಾಳಿ ಮಳೆಯ ಅವಾಂತರ ಹೆಚ್ಚಾಗಿದ್ದು, ಮುಕಾಂಬು ಅವರ ಮನೆಗೆ 15,000 ರು., ಸೀತು ಗೋವಿಂದ ಅವರ ದನದ ಕೊಟ್ಟಿಗೆಗೆ 12,000 ರು., ಸುಬ್ಬಿ ಮಾಚಿ ಅವರ ದನದ ಕೊಟ್ಟಿಗೆಗೆ 12,000 ರು., ಯಶೋಧ ಮೀನಾಕ್ಷಿ ಅಮ್ಮ ನವರ ದನದ ಕೊಟ್ಟಿಗೆಗೆ 12,000 ಸಾವಿರ ರು., ಚಿಕ್ಕು ವೆಂಕಮ್ಮ ಅವರ ಮನೆಗೆ 13,000 ರು., ಅನುಸೂಯ ಶ್ರೀನಿವಾಸ ಗಾಣಿಗ ಅವರ ಮನೆಗೆ 12,000 ರು. ಹಾನಿಯಾಗಿದ್ದರೇ, ಬಿಜೂರು ಗ್ರಾಮದ ವೆಂಕಮ್ಮ ಪೂಜಾರಿ ಅವರ ದನದ ಕೊಟ್ಟಿಗೆಗೆ 50,000 ರು. ಮತ್ತು ನಾರಾಯಣ ಶೆಟ್ಟಿಅವರ ದನದ ಕೊಟ್ಟಿಗೆಗೆ 35,000 ರು. ಹಾನಿಯಾಗಿದೆ.

ದೇವಳದ ಆನೆ ಇಂದಿರಾ ಇನ್ನಿಲ್ಲ, ಕೊಲ್ಲೂರು ಪೇಟೆ ಬಂದ್

ಬ್ರಹ್ಮಾವರ 2.10 ಲಕ್ಷ ರು.ಹಾನಿ

ಇಲ್ಲಿನ ಉಪ್ಪೂರು ಗ್ರಾಮದ ಮಹಾಬಲ ಮರಕಾಲ ಅವರ ಮನೆಗೆ 65, 700 ರು., ವನಜ ಪೂಜಾರಿ ಅವರ ಮನೆಗೆ 20, 300 ರು., ನಾಗಿ ಸಂಜೀವ ಪುಜಾರಿ ಮನೆಗೆ 10, 750 ರು., ಶಶಿಕಲಾ ಪೂಜಾರಿ ಅವರ ಮನೆಗೆ 11,200 ರು., ಶಾಂತ ಮಾಧವ ಪೂಜಾರಿ ಮನೆಗೆ 24,000 ರು., ಅಣ್ಣಯ್ಯ ಪೂಜಾರಿ ಮನೆಗೆ 6,000 ರು. ಹಾನಿಯಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾವಂಜೆ ಗ್ರಾಮದ ಪಾರ್ವತಿ ಅವರ ಮನೆಗೆ 21,100 ರು. ಮತ್ತು ನೀಲಾವರ ಗ್ರಾಮದ ಗಿರಿಜಾ ಆಚಾರಿ ಅವರ ಮನೆಗೆ 50,000 ರು. ನಷ್ಟವಾಗಿದೆ.

click me!