ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘಿಸುವುದರಿಂದ ಹೆಚ್ಚು ಅಪಘಾತ

By Ravi Nayak  |  First Published Sep 15, 2022, 10:34 PM IST

ಅಪಘಾತಗಳು ಅನಿರೀಕ್ಷಿತವಾದರೂ ಸಹ, ಮುಂಜಾಗೃತೆಯಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ಅಪಘಾತ ರಹಿತ ಚಾಲನೆ ಅನೇಕ ಸಾವು -ನೋವು ಹಾಗೂ ಆರ್ಥಿಕ ಹಾನಿಯನ್ನು ತಪ್ಪಿಸುತ್ತದೆ. ನಮ್ಮ ಕರ್ತವ್ಯವನ್ನು ನಾವು ಇಷ್ಟಪಟ್ಟು ಪ್ರೀತಿಯಿಂದ ಮಾಡಿದಾಗ ಮಾತ್ರ ಅದರಲ್ಲಿ ಸಫಲತೆ ಕಾಣಬಹುದು


ಹಾವೇರಿ(ಸೆ.15): ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಹಾಗೂ ಜಾಗರೂತೆಯಿಂದ ವಾಹನ ಚಲಾಯಿಸಬೇಕು ಎಂದು ಡಿವೈಎಸ್‍ಪಿ  ಶಿವನಾಂದ ಚಲವಾದಿ ಅವರು ಹೇಳಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಚಾಲನಾ ಸಿಬ್ಬಂದಿಗಳಿಗೆ ಅಪಘಾತ ರಹಿತ ಚಾಲನೆ ಬಗ್ಗೆ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸರೂ ಸಹ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು: ಬಂತು ಖಡಕ್ ಸೂಚನೆ

Latest Videos

undefined

  ಅಪಘಾತಗಳು ಅನಿರೀಕ್ಷಿತವಾದರೂ ಸಹ, ಮುಂಜಾಗೃತೆಯಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ಅಪಘಾತ ರಹಿತ ಚಾಲನೆ ಅನೇಕ ಸಾವು -ನೋವು ಹಾಗೂ ಆರ್ಥಿಕ ಹಾನಿಯನ್ನು ತಪ್ಪಿಸುತ್ತದೆ. ನಮ್ಮ ಕರ್ತವ್ಯವನ್ನು ನಾವು ಇಷ್ಟಪಟ್ಟು ಪ್ರೀತಿಯಿಂದ ಮಾಡಿದಾಗ ಮಾತ್ರ ಅದರಲ್ಲಿ ಸಫಲತೆ ಕಾಣಬಹುದು ಎಂದು ಹೇಳಿದರು.

  ವಿಭಾಗೀಯ ಸಂಚಾರ ಅಧಿಕಾರಿ ಶ್ರೀ ಅಶೋಕ ಪಾಟೀಲ್  ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಪಿ.ಆಯ್ ಸುರೇಶ ಸಗರಿ ಅವರು ಅಪಘಾತ ರಹಿತ ಚಾಲನೆ  ಮತ್ತು ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಮಾರ್ಗದರ್ಶನ ನೀಡಿ ನೀಡಿದರು ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್ ಜಗದೀಶ ಅವರು ಮಾತನಾಡಿ, ಚಾಲರುಗಳು ಅಪಘಾತ ರಹಿತ ಸೇವೆ ಮೂಲಕ ಇನ್ನೂ ಹೆಚ್ಚು ಜನಸ್ನೇಹಿ ಸಾರಿಗೆ ಸೇವೆ ನೀಡಬೇಕು ಎಂದು ಕರೆ ನೀಡಿದರು.

  ಜಿಲ್ಲಾ ಮನೋರೋಗ ತಜ್ಞರಾದ ಡಾ.ವಿಜಯಕುಮಾರ ಬಳೆಗಾರ ಮಾತನಾಡಿ, ಮಾನಸಿಕ ಒತ್ತಡಗಳ ನಿವಾರಣೆಗೆ ನಮ್ಮ ಮಾನಸಿಕ ಸ್ಥಿತಿಯ ಎಷ್ಟು ಉತ್ತಮವಾಗಿರುತ್ತದೆಯೋ ಅಷ್ಟು ಉತ್ತಮ ಜೀವನ ನಮ್ಮದಾಗುತ್ತದೆ. ಉತ್ತಮ ಹವ್ಯಾಸ ಮತ್ತು ಉತ್ತಮ ಜೀವನಶೈಲಿ ನಮ್ಮದಾಗಬೇಕು ಎಂದರು. 
  ವಕೀಲರಾದ ದೇವರಾಜ ನಾಯ್ಡು, ಪಿ.ಎಸ್.ಆಯ್ ಆರ್.ವಿ ಸೊಪ್ಪಿನ, ವಿಭಾಗೀಯ ತಾಂತ್ರಿಕ ವಿಭಾಗದ ಅಶ್ರಫ್ ಅಲಿ ಮಾತನಾಡಿದರು.

ಟ್ರಾಫಿಕ್ ರೂಲ್ ಉಲ್ಲಂಘಿಸಿದ್ರೆ ಸಿಗುತ್ತೆ ವಿಚಿತ್ರ ಶಿಕ್ಷೆ, ಮದ್ಯ ಕುಡಿದು ವಾಹನ ಚಲಾಯಿಸಿದ್ರೆ ಆಸ್ಪತ್ರೆಗೆ ರವಾನೆ!

  ಆಡಳಿತಾಧಿಕಾರಿ ಜೆ.ಬಿ ದಿವಾಕರ, ಪ್ರಭಾರಿ ಲೆಕ್ಕಾಧಿಕಾರಿ ಕೃಷ್ಣ ರಾವುತನಕಟ್ಟಿ, ಚಂದ್ರು ಲಿಂಗಮ್ಮನವರ, ವಿಜಯ, ಕೃಷ್ಣಾ ರಾಮಣ್ಣನವರ, ಗಣೇಶ ಹಳ್ಳಿ, ಹರೀಶ, ಮಂಜುನಾಥ ಗೊಂದಳಿ, ಗೀತಾ ಸರ್ವದೆ ಇತರರು ಉಪಸ್ಥಿತರಿದ್ದರು. ಸಹಾಯಕ ಸಂಚಾರ ಅಧೀಕ್ಷಕ ಜಿ.ಬಿ ಅಡರಕಟ್ಟಿ ಸ್ವಾಗತಿಸಿದರು, ಸಿಬ್ಬಂದಿ ಮೇಲ್ವಿಚಾರಕ ಮಲ್ಲಿಕಾರ್ಜುನ  ಹಿಂಚಿಗೇರಿ ನಿರೂಪಿಸಿದರು. ಜೆ.ಎಂ ವಿವೇಕಾನಂದ ವಂದಿಸಿದರು.

click me!