Hubballi-Dharwad: BRTS ನಿಲ್ದಾಣಗಳಲ್ಲಿ ಲಿಫ್ಟ್‌ ಇವೆಯಂತೆ ಗೊತ್ತಾ?

By Kannadaprabha News  |  First Published Feb 16, 2022, 11:34 AM IST

*  ಲಕ್ಷಾಂತರ ವೆಚ್ಚದಲ್ಲಿ ಅಳವಡಿಸಿರುವ ಲಿಪ್ಟ್‌ಗಳು ನಿರುಪಯುಕ್ತ
*  ರಸ್ತೆ ದಾಟಲು ವೃದ್ಧರು, ಅಂಗವಿಕಲರ ಪರದಾಟ
*  ಇದ್ದೂ ಇಲ್ಲದಂತಾದ ಲಿಫ್ಟ್‌ಗಳು 
 


ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ(ಫೆ.16):  ಮಹಾನಗರದ ಬಿಆರ್‌ಟಿಎಸ್‌(BRTS) ನಿಲ್ದಾಣಗಳಲ್ಲಿ ವೃದ್ಧರಿಗೆ, ಅಂಗವಿಕಲರಿಗೆ, ಅಶಕ್ತರಿಗೆ ಅನುಕೂಲವಾಗಲೆಂದು ಅಳವಡಿಸಲಾದ ಬಹುತೇಕ ಲಿಫ್ಟ್‌ಗಳು(Lifts) ಕಾರ್ಯನಿರ್ವಹಿಸುತ್ತಿಲ್ಲ. ಅಸಲಿಗೆ ಇಂಥ ಲಿಪ್ಟ್‌ಗಳು ಇಲ್ಲಿವೆ ಎನ್ನುವುದೇ ಪ್ರಯಾಣಿಕರಿಗೆ(Passengers) ಗೊತ್ತಿಲ್ಲ!

Tap to resize

Latest Videos

ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳಲ್ಲಿ ರಸ್ತೆ ದಾಟಲು ಜನರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಲಿಫ್ಟ್‌ ಅಳವಡಿಸಲಾಗಿದೆ. ಜತೆಗೆ ಅಂಗವಿಕಲರು, ವೃದ್ಧರಿಗೆ ರಸ್ತೆ ದಾಟಲು ಅವರಿಗಾಗಿಯೇ ಕೆಲವೆಡೆ ಲಿಫ್ಟ್‌ ಅಳವಡಿಸಲಾಗಿದೆ.
ಹೊಸೂರು ಪ್ರಾದೇಶಿಕ ಬಸ್‌ನಿಲ್ದಾಣದಲ್ಲಿ -3, ಉಣಕಲ್‌ ಕ್ರಾಸ್‌(ಪ್ರೇರಣಾ ಕಾಲೇಜು)- 2, ಉಣಕಲ್‌ಕೆರೆ -2, ನವನಗರ -3, ಇಸ್ಕಾನ್‌-2, ಎಸ್‌ಡಿಎಂ ಬಸ್‌ನಿಲ್ದಾಣಗಳಲ್ಲಿ -2 ಲಿಫ್ಟ್‌ ಅಳವಡಿಸಲಾಗಿದೆ. ಇವುಗಳಲ್ಲಿ ಉಣಕಲ್‌ಕ್ರಾಸ್‌, ಉಣಕಲ್‌ ಕೆರೆಯ ಲಿಫ್ಟ್‌ಗಳು ಬಂದ್‌ ಆಗಿವೆ. ಇನ್ನು ಕೆಲವು ಲಿಫ್ಟ್‌ಗಳು ಸಮರ್ಪಕವಾಗಿ ಬಳಕೆಯಾಗದೆ ಇದ್ದೂ ಇಲ್ಲದಂತಾಗಿವೆ.

Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್‌..!

ಗ್ರಾಮೀಣ ಭಾಗದಿಂದ ಬರುವ ಜನರಿಗೆ ಲಿಫ್ಟ್‌ ಬಳಸುವ ಬಗ್ಗೆ ಮಾಹಿತಿ ಇರದೆ ಅದರ ಸಹವಾಸವೇ ಬೇಡವೆಂದು ದೂರ ಸರಿಯುತ್ತಿದ್ದಾರೆ. ಸುತ್ತುವರಿದು ಮೇಲ್ಸೇತುವೆ ದಾಟುವುದು ವೃದ್ಧರು, ಮಹಿಳೆಯರಿಗೆ ಕಷ್ಟವಾಗಿ ಪರಿಣಮಿಸಿದ್ದು ನೇರವಾಗಿ ರಸ್ತೆ ದಾಟಲು ಮುಂದಾಗುತ್ತಾರೆ. ಆ ವೇಳೆ ವೃದ್ಧರು, ಅಂಗವಿಕಲರು, ಮಹಿಳೆಯರು ಅಪಘಾತಕ್ಕೀಡಾಗಿ(Accident) ಬಲಿಯಾದ, ಕೈಕಾಲು ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ.

ಒಟ್ಟಿನಲ್ಲಿ ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳ ಅನುಕೂಲಕ್ಕಾಗಿ ಲಕ್ಷಾಂತರ ವೆಚ್ಚದಲ್ಲಿ ಅಳವಡಿಸಲಾದ ಲಿಫ್ಟ್‌ಗಳು ಜನಸಾಮ್ಯಾನರ ಬಳಕೆಗೆ ಮುಕ್ತವಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಉಣಕಲ್‌ ಕ್ರಾಸ್‌, ಉಣಕಲ್‌ ಕೆರೆಯ ಲಿಫ್ಟ್‌ಗಳನ್ನು ದುರಸ್ತಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಸಣ್ಣ ಪುಟ್ಟ ತಾಂತ್ರಿಕ ದೋಷಗಳಿದ್ದು, ಶೀಘ್ರದಲ್ಲಿ ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಉಳಿದೆಡೆ ಇರುವ ಎಲ್ಲ ಲಿಫ್ಟ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಅಂತ ಬಿಆರ್‌ಟಿಎಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಜಡೇನವರ ತಿಳಿಸಿದ್ದಾರೆ.  

ಅಂಗವಿಕಲರಿಗೆ, ವೃದ್ಧರಿಗೆ ಬಳಸಲು ಲಿಫ್ಟ್‌ ವ್ಯವಸ್ಥೆ ಮಾಡಲಾಗಿದೆ. ನಿರ್ವಹಣೆ ಮಾಡುವವರ ಮಾತು ಕೇಳದೆ ಯುವಕರು, ಯುವತಿಯರು ಹೆಚ್ಚಾಗಿ ಲಿಫ್ಟ್‌ ಬಳಸುತ್ತಾರೆ. ಕೆಲವೊಮ್ಮೆ ಕಸ ಎಸೆಯುವುದು, ಗಲೀಜು ಮಾಡುತ್ತಾರೆ ಅಂತ ಹೊಸೂರು ಬಸ್‌ ನಿಲ್ದಾಣದ ಲಿಫ್ಟ್‌ ಆಪರೇಟರ್‌ ಮಂಜುಳಾ ಗೊಲ್ಲರ ತಿಳಿಸಿದ್ದಾರೆ. 

ದಶಕ ಕಳೆದರೂ BRTS ಪೂರ್ಣವಾಗಿಲ್ಲ..!

ಪ್ರತ್ಯೇಕ ನಿಗಮ ಕೂಡ ಆಗಲಿಲ್ಲ. ಅತಿಕ್ರಮಣ ತೆರವುಗೊಳಿಸಲಿಲ್ಲ. ಬಿಆರ್‌ಟಿಎಸ್‌(BRTS) ಕಾರಿಡಾರ್‌ ಕೂಡ ಪೂರ್ಣವಾಗಲೇ ಇಲ್ಲ. ಅರೆಬರೆ ಕಾರಿಡಾರ್‌ನಲ್ಲೇ ‘ಮಾಯಾಚಿಗರಿ’ಗಳ ಎರ್ರಾಬಿರ್ರಿ ಓಟ!. ಇದು ದಕ್ಷಿಣ ಭಾರತದಲ್ಲೇ(South India) ಮೊಟ್ಟ ಮೊದಲು ಪರಿಚಯಿಸಿದ್ದ, ಹುಬ್ಬಳ್ಳಿ- ಧಾರವಾಡ(Hubballi-Dharwad) ಮಧ್ಯೆ ಸಂಚರಿಸುತ್ತಿರುವ ‘ತ್ವರಿತ, ಸುಖಾಸೀನ ಸಾರಿಗೆ’ ಕನಸಿನ ಬಿಆರ್‌ಟಿಎಸ್‌ ಕಥೆ ವ್ಯಥೆ!

Digital Pay Facility in BRTS: ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ನಲ್ಲಿ ಇನ್ಮುಂದೆ ಡಿಜಿಟಲ್‌ ಪೇ

ಈ ಯೋಜನೆಗೆ ಬರೋಬ್ಬರಿ 970.87 ಕೋಟಿ ಖರ್ಚಾಗಿದೆ. ಆದರೂ ಪೂರ್ಣ ಈ ಯೋಜನೆ ಪೂರ್ಣವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಳಿಯಾನೆಯಂತಾದ ಯೋಜನೆ ಸರ್ಕಾರಕ್ಕೂ ಭಾರವಾಗಿದೆ.
ಬಿಆರ್‌ಟಿಎಸ್‌ ಕಾರಿಡಾರ್‌ಗೆ(BRTS Corridor) ಚಾಲನೆ ನೀಡಿ ಇದೀಗ ಬರೋಬ್ಬರಿ 10 ವರ್ಷಗಳೇ ಗತಿಸಿವೆ. ಕಾರಿಡಾರ್‌ನಲ್ಲೇ ಚಿಗರಿ ಬಸ್‌ಗಳೇನೋ(Chigari Bus) ಓಡಾಡುತ್ತಿವೆ. ಆದರೆ, ಆರಂಭಕ್ಕೂ ಮುನ್ನ ಜನತೆಗೇನೋ ನೀಡಲಾದ ಭರವಸೆ ಮಾತ್ರ ಈಡೇರಿಲ್ಲ. ಕಾಮಗಾರಿಯೂ ಈವರೆಗೂ ಪೂರ್ಣವಾಗಲಿಲ್ಲ. ಆಗಿರುವ ಕೆಲಸಗಳು ಪೂರ್ಣ ಬಳಕೆಯಾಗುತ್ತಿಲ್ಲ.

ಯಾವಾಗ ಪ್ರಾರಂಭ:

ಹುಬ್ಬಳ್ಳಿ ವಾಣಿಜ್ಯನಗರಿ. ಧಾರವಾಡ ವಿದ್ಯಾಕಾಶಿ ಎಂದು ಹೆಸರು ಪಡೆದ ನಗರ. ಈ ಎರಡು ನಗರಗಳ ನಡುವೆ ಪ್ರತಿನಿತ್ಯ ಕನಿಷ್ಠವೆಂದರೂ 1.75 ಲಕ್ಷ ಜನರು ಓಡಾಡುತ್ತಾರೆ ಎಂಬುದು ಸಮೀಕ್ಷೆಯೊಂದರ ಫಲಿತಾಂಶ. ಈ ಎರಡು ನಗರಗಳ ನಡುವಿನ ಅಂತರ 22 ಕಿಮೀ. ಇಷ್ಟು ದೂರ ಕ್ರಮಿಸಬೇಕೆಂದರೆ ಕನಿಷ್ಠವೆಂದರೂ 40-50 ನಿಮಿಷ ಬೇಕಾಗುತ್ತದೆ ಎಂಬುದು ಅಂದಾಜು. ಈ ಹಿನ್ನೆಲೆಯಲ್ಲಿ ಇದನ್ನು ಕಡಿಮೆಗೊಳಿಸಬೇಕು ಎಂಬ ಉದ್ದೇಶದಿಂದ 2002ರಲ್ಲಿ ಈ ನಗರಗಳ ನಡುವೆ ಚತುಷ್ಪಥ ಮಾಡಬೇಕೆಂಬ ಬೇಡಿಕೆ ಇತ್ತು. ಆಗ ಅದಕ್ಕೆ ಆಗಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಸಿರು ನಿಶಾನೆ ತೋರಿಸಿದ್ದರು. ಅದು ನಿಧಾನವಾಗಿ ಸಾಗಿ ಬಳಿಕ ಚತುಷ್ಪಥ ಮಾಡುವ ಬದಲು ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ(Government of Karnataka) ನಿರ್ಧರಿಸಿತು. 2012ರಲ್ಲಿ ಬಿಆರ್‌ಟಿಎಸ್‌ಗೆ ಯೋಜನೆಗೆ ಶಂಕು ನೆರವೇರಿಸಲಾಯಿತು. ಅಲ್ಲಿಂದ ನಿರಂತರವಾಗಿ ಕುಂಟುತ್ತಾ ತೆವಳುತ್ತಾ 2018 ಆದರೂ ಕಾಮಗಾರಿ ಪೂರ್ಣವಾಗಲೇ ಇಲ್ಲ.
 

click me!