* ಸಂಕಷ್ಟ ಅನುಭವಿಸುತ್ತಿರುವ ಜನರು
* ಯಲಬುರ್ಗಾ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ
* ಸೂಕ್ತ ಪರಿಹಾರ ನೀಡಲು ಆಗ್ರಹ
ಯಲಬುರ್ಗಾ(ಜು.23): ತಾಲೂಕಿನಾದ್ಯಂತ ಸತತ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಮಣ್ಣಿನ ಮಳೆಗಳು ಕುಸಿಯುತ್ತಿವೆ. ಇದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ತಾಲೂಕಿನ ಯಡ್ಡೋಣಿ-1, ಮಾಟಲದಿನ್ನಿ-1, ಬೀರಲದಿನ್ನಿ-1, ಚೌಡಾಪುರ -2, ತೊಂಡಿಹಾಳ-1, ಕಲ್ಲೂರ 2, ನರಸಾಪುರ -1, ಕಟಗಿಹಳ್ಳಿ-1, ತಾಳಕೇರಿ-1, ಉಚ್ಚಲಕುಂಟಾ -20 ಕ್ಕೂ ಹೆಚ್ಚು ಮನೆಗಳು ಹಾಗೂ ಉಪ್ಪಲದಿನ್ನಿ -1 ಚಿಕ್ಕಬನ್ನಿಗೋಳ -1, ಕಲಕಬಂಡಿ-1, ಹಿರೇಅರಳಿಹಳ್ಳಿ -2, ಮಾಟ್ರಂಗಿ -2, ಚಿಕ್ಕವಂಕಲಕುಂಟಾ -6 ಮನೆಗಳು ಕುಸಿದಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಗಳು ಹಾನಿಯಾಗಿವೆ.
ಕುಷ್ಟಗಿ: ಏಣಿ ಏರಿ ಕಾಲೇಜು ಛಾವಣಿ ವೀಕ್ಷಿಸಿದ ಶಾಸಕ ಭಯ್ಯಾಪುರ
ಈ ಹಾನಿಗೊಳಗಾದ ಸ್ಥಳಕ್ಕೆ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು ಮಾತನಾಡಿ, ಈಗಾಗಲೇ ಕೊರೋನಾದಿಂದ ಜನರು ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದಾರೆ, ಇಂತಹ ಕಷ್ಟದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವುದು ಕಷ್ಟ ಸಾಧ್ಯ. ಅತಿಯಾದ ಮಳೆಯಿಂದ ಬೆಳೆ ನಷ್ಟ ಕೂಡ ಸಂಭವಿಸಿದೆ. ಇಂತಹ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಸರ್ವೇ ಮಾಡಿಸಿ ಸೂಕ್ತ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕು.
ಸಂಭವಿಸಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವ ಕೆಲಸವನ್ನು ಅಧಿಕಾರಿಗಳು ತುರ್ತಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ತಾಲೂಕು ಉಪಾಧ್ಯಕ್ಷ ಕರಿಯಪ್ಪ ಎಚ್. ತಳವಾರ, ಪ್ರಧಾನ ಕಾರ್ಯದರ್ಶಿ ರಾಚಪ್ಪ ಈಳಿಗೇರ, ಹುಸೇನ್‌ಸಾಬ್ ಮೇಲ್ಗಡೆ, ಕಾರ್ಯದರ್ಶಿ ಮಾರುತಿ ಸೂಳಕೇರಿ, ಮುಖಂಡರಾದ ಹನುಮಗೌಡ ಮಾಲಿ ಪಾಟೀಲ್, ಕಳಕನಗೌಡ, ಪ್ರಕಾಶ ಮೇಟಿ, ಬಸವರಾಜ ತಳವಾರ ಕಳಕಪ್ಪ ಬೋಮ್ಮನಾಳ, ಗವಿ ಹಳ್ಳಿ, ಗ್ರಾಪಂ ಸದಸ್ಯ ಕುಂಟೆಪ್ಪ ಚಿಣಗಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.