'ಇನ್ನಷ್ಟು ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರ್ಪಡೆ'

By Kannadaprabha News  |  First Published Sep 10, 2021, 3:29 PM IST

*  ಬಿಜೆಪಿ ಮುಕ್ತ ಬಬಲೇಶ್ವರಗೆ ನಾಂದಿ
*  ಚನ್ನಪ್ಪ ಕೊಪ್ಪದ ಸಹೋದರರನ್ನು ಪಕ್ಷಕ್ಕೆ ಬರಮಾಡಿಕೊಂಡ ಎಂಬಿ ಪಾಟೀಲ
*  ನಮಗೆ ಜ್ಞಾನೋದಯವಾಗಲು 40 ವರ್ಷಗಳು ಬೇಕಾದವು 
 


ವಿಜಯಪುರ(ಸೆ.10): ಯಕ್ಕುಂಡಿ ಗ್ರಾಮದ ಬಿಜೆಪಿ ಮುಖಂಡರಾದ ಚನ್ನಪ್ಪ ಕೊಪ್ಪದ ಹಾಗೂ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಯಾಗುವ ಮೂಲಕ ಬಿಜೆಪಿ ಮುಕ್ತ ಬಬಲೇಶ್ವರ ಮತಕ್ಷೇತ್ರಕ್ಕೆ ನಾಂದಿ ಹಾಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್‌ ಹೇಳಿದರು.

ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ಗುರುವಾರ ಚನ್ನಪ್ಪ ಕೊಪ್ಪದ ಸಹೋದರರು ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ನಾನು ಜಲಸಂಪನ್ಮೂಲ ಸಚಿವನಾಗಿ 5 ವರ್ಷಗಳ ಕಾಲ ಬಿ.ಎಲ್‌.ಡಿ.ಇ ಸಂಸ್ಥೆ ಮತ್ತು ಕೌಟುಂಬಿಕ ಕೆಲಸಗಳು, ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಬದಿಗೊತ್ತಿ, ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

Latest Videos

undefined

ನವರ ಸಂಪುಟದಲ್ಲಿ ಸಚಿವನಾದ ನಂತರ ನಾನು ಕೇವಲ ಅಧಿಕಾರ ಅನುಭವಿಸದೆ ಜಿಲ್ಲೆಯ ನೀರಾವರಿಗಾಗಿ ಸ್ವಂತ ಬುತ್ತಿ ಕಟ್ಟಿಕೊಂಡು ಓಡಾಡಿದೆ, ರು. 56 ಸಾವಿರ ಕೋಟಿಗಳ ಬೃಹತ್‌ ಅನುದಾನ ತಂದು ನೀರಾವರಿ ಮಾಡಿದ್ದೇನೆ ಎಂದರು.

ಕೊರೋನಾಗೆ 2 ವರ್ಷದ ಮಗು ಸಾವು: 3ನೇ ಅಲೆಯ ಮುನ್ಸೂಚನೆಯೇ?

ಆ ಸಮಯದಲ್ಲಿ ನಾನು ಕಾಲುವೆಗಳ ಕೆಲಸ ಆರಂಭಿಸಿದಾಗ ಕೆಲವರು ಕಮಿಷನ್‌ ಆಸೆಗಾಗಿ ಕೆಲಸ ಮಾಡುತ್ತಿದ್ದೇನೆ. ಈ ಭಾಗಕ್ಕೆ ನೀರು ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ ಇಂದು ಅದೇ ಜನ ನಮ್ಮ ಕೆಲಸಗಳನ್ನು ಮೆಚ್ಚಿ ಆಶೀರ್ವದಿಸುತ್ತಿದ್ದಾರೆ ಎಂದರು.

ರೈತರ ಕೈಯಲ್ಲಿ ದುಡ್ಡು ಬಂದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಜಾತಿ, ಉಪಜಾತಿ ಹೊಟ್ಟೆ ತುಂಬಿಸುವುದಿಲ್ಲ. ನೀರಿದ್ದರೆ ಉತ್ತಮ ಬದುಕು ಸಾಧ್ಯವಿದೆ. ಅಂದು ಮಾಡಿದ ನೀರಾವರಿ ಕೆಲಸದಿಂದಾಗಿ ಇಂದು ರೈತರು ತೋಟಗಾರಿಕೆ ಬೆಳೆಗಳಿಗೆ ನೀರುಣಿಸಲು ಪ್ರತಿ ವರ್ಷ ಮಾಡುತ್ತಿದ್ದ . 5 ಸಾವಿರ ಕೋಟಿ ಉಳಿತಾಯವಾಗಿದೆ ಎಂದರು.

ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಡಿಜಿಟಲ್‌ ಕ್ಲಾಸ ರೂಂ ವ್ಯವಸ್ಥೆ ಮಾಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಎರಡು ಸಾವಿರ ಸಮುದಾಯ ಭವನಗಳು, ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವು ಕಷ್ಟ ಸಾಧ್ಯವಾಗಿದ್ದ ನೀರಾವರಿ ಕೆಲಸಗಳನ್ನು ಜೀರ್ಣಿಸಿಕೊಳ್ಳಲಾರದ ಕೆಲವರು ಈ ಯೋಜನೆಗಳನ್ನು ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಒಪ್ಪಿಗೆ ನೀಡಲಾಗಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಅಂದು ಕೇವಲ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಯೋಜನೆ ಜಾರಿ ಮತ್ತು ಅದಕ್ಕಾಗಿ ಹಣ ಬಿಡುಗಡೆಯಾಗಿ ಕಾಮಗಾರಿಗಳು ಪೂರ್ಣಗೊಂಡು, ರೈತರ ಜಮೀನುಗಳಿಗೆ ನೀರು ಬರಲು ತಾವು ಮಾಡಿದ ಸತತ ಪ್ರಯತ್ನವೇ ಕಾರಣ ಎಂದರು.

ಪಕ್ಷಕ್ಕೆ ಸೇರ್ಪಡೆಗೊಂಡ ಚನ್ನಪ್ಪ ಕೊಪ್ಪದ ಮಾತನಾಡಿ, 2013ರ ಚುನಾವಣೆಯಲ್ಲಿ ಬಬಲೇಶ್ವರ ಮತದಾರರು ಎಂ.ಬಿ.ಪಾಟೀಲರನ್ನು ಆಯ್ಕೆ ಮಾಡಿರದಿದ್ದರೆ ದೊಡ್ಡ ತಪ್ಪು ಮಾಡಿದಂತಾಗುತ್ತಿತ್ತು. ವಿಜಯಪುರ ಜಿಲ್ಲೆ ಶಾಶ್ವತವಾಗಿ ಬರಪೀಡಿತ ಜಿಲ್ಲೆಯಾಗಿರುತ್ತಿತ್ತು. ನಾವು ವಿರೋಧಿಸಿದರೂ ಬಬಲೇಶ್ವರ ಮತದಾರರು ಕೈಹಿಡಿದಿದ್ದರಿಂದ ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಯಿತು ಎಂದರು.
ಕಳೆದ 40 ವರ್ಷಗಳಿಂದ ನಮ್ಮ ಕುಟುಂಬ ಜನತಾ ಪರಿವಾರದ ಪರವಿತ್ತು. ನಮ್ಮ ಮಲ್ಲಪ್ಪ ಕಾಕಾ ಎಂ.ಬಿ.ಪಾಟೀಲರ ತಂದೆಯವರೊಡನೆ ಕಾರ್ಯ ನಿರ್ವಹಿಸಿದ್ದಾರೆ. 2018ರ ಚುನಾವಣೆಯಲ್ಲಿಯೂ ಎಂ.ಬಿ.ಪಾಟೀಲರ ವಿರುದ್ಧವೆ ಕೆಲಸ ಮಾಡಿದ್ದೇವೆ. ಆದರೆ ನಾವು ಯಾರ ಪರ ಕೆಲಸ ಮಾಡಿದ್ದೇವೂ ಅವರೇ ನಮ್ಮ ಮನೆತನದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಮಗೆ ಜ್ಞಾನೋದಯವಾಗಲು 40 ವರ್ಷಗಳು ಬೇಕಾದವು ಎಂದರು.

ಮುಂಬರುವ ದಿನಗಳಲ್ಲಿ ಇನ್ನಷ್ಟು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ. ಇನ್ನು ಮುಂದೆ ಗ್ರಾಮ ಪಂಚಾಯತಿಯಿಂದ ಹಿಡಿದು ಶಾಸಕರವರೆಗೂ ಎಲ್ಲರೂ ಕಾಂಗ್ರೆಸ್‌ನವರೆ ಗೆಲ್ಲಲು ತನು, ಮನದಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.

ಕೋರ್ಟ್ ವಿಚಾರಣೆಗೆ ಹಾಜರಾದ ಯತ್ನಾಳ್.. ಯಾವ ಪ್ರಕರಣ?

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಆಸ್ತಿಪಾಸ್ತಿ ಮಾಡುತ್ತಾರೆ. ಅವರನ್ನು ನಂಬಿದವರು ಅಧೋಗತಿಗೆ ತಳ್ಳಲ್ಪಡುತ್ತಾರೆ. ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಎಂದರು. ಕಷ್ಟಕಾಲದಲ್ಲಿ ನೆರವಾದವರಿಗೆ ಸಹಾಯ ಕೂಡ ಮಾಡದೇ ಅವರ ಬದುಕನ್ನು ಹಾಳು ಮಾಡುತ್ತಾರೆ. ನಮ್ಮನ್ನು ಬೆಂಬಲಿಸಿದವರು ಉದ್ಧಾರವಾಗಿದ್ದಾರೆ. ಅವರನ್ನು ಬೆಂಬಲಿಸಿದವರು ಹಾಳಾಗಿದ್ದಾರೆ. ನಾವು ಗ್ರಾಮ ಪಂಚಾಯತಿ ಮಟ್ಟದ ರಾಜಕೀಯದಲ್ಲಿ ಕೈ ಹಾಕುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಮುಖಂಡರಾದ ಸಂಗಮೇಶ ಬಬಲೇಶ್ವರ, ಡಾ. ಕಂಠೀರವ ಕುಲ್ಲೊಳಿ, ಸೋಮನಾಥ ಬಾಗಲಕೋಟ, ವಿ.ಎಸ್‌. ಪಾಟೀಲ, ಟಿ.ಕೆ.ಹಂಗರಗಿ, ಈರಗೊಂಡ ಬಿರಾದಾರ, ಸಿದ್ದು ಗೌಡನ್ನವರ, ವಿದ್ಯಾರಾಣಿ ತುಂಗಳ, ಸಿದ್ದಣ್ಣ ಸಕ್ರಿ, ವಿ.ಎನ್‌. ಬಿರಾದಾರ, ಮುತ್ತಪ್ಪ ಶಿವಣ್ಣನವರ, ಸೋಮನಾಥ ಕಳ್ಳಿಮನಿ, ಉಮೇಶ ಮಲ್ಲಣ್ಣವರ, ಬಾಬುಗೌಡ ಪಾಟೀಲ ಯಕ್ಕುಂಡಿ, ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಲ್‌.ಚವ್ಹಾಣ, ಎಸ್‌.ಎಚ್‌.ಮುಂಬಾರೆಡ್ಡಿ ಉಪಸ್ಥಿತರಿದ್ದರು.
 

click me!