
ಬಾಗಲಕೋಟೆ(ಸೆ.10): ಕೇಕ್ ಕತ್ತರಿಸಿ ಗಣೇಶನ ಹುಟ್ಟುಹಬ್ಬವನ್ನ ಭಕ್ತರು ವಿಶಿಷ್ಟವಾಗಿ ಆಚರಿಸಿದ ಘಟನೆ ನಗರದ ವಲ್ಲಭಾಯ್ ವೃತ್ತದ ಬಳಿ ಇಂದು(ಶುಕ್ರವಾರ) ನಡೆದಿದೆ.
ಕೇಕ್ ಕತ್ತರಿಸಿ ಹ್ಯಾಪಿ ಬರ್ತಡೇ ಟು ಯೂ ಗಣೇಶ ಅಂತ ಘೋಷಣೆ ಕೂಗಿ ಯುವಕರು ಸಂಭ್ರಮಪಟ್ಟಿದ್ದಾರೆ. ಮುಚಖಂಡಿ ತಾಂಡಾದ ಯುವಕರು ಹಿರಿಯರ ಸಮ್ಮುಖದಲ್ಲಿ ಗಣೇಶನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಬ್ಯಾಡಗಿ: ಇತರರಿಗೆ ಮಾದರಿಯಾಗಬೇಕಾದ ಶಾಸಕರು ಹೀಗಾ ಮಾಡೋದು?
ಬಾಗಲಕೋಟೆಯಿಂದ ಮುಚಖಂಡಿ ಗ್ರಾಮಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುವ ಮುನ್ನ ಕೇಕ್ ಕತ್ತಿರಿಸಿ ಗಣೇಶನ ಹುಟ್ಟುಹಬ್ಬ ಮಾಡಿದ್ದಾರೆ. ಕೇಕ್ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಶ್ರೀ ಗಣೇಶ ಅಂತ ಬರೆಯಲಾಗಿದೆ.