ಶಿರಸಿ (ಜೂ.07): ಮಲೆನಾಡಿನ ಬೆಟ್ಟಗುಡ್ಡಗಳು, ಕೆರೆ-ಕಟ್ಟೆ, ಹರಿವ ತೊರೆಗಳ ದಡದಲ್ಲಿ ಈಗ ಕಪ್ಪೆಗಳ ಕಲರವ! ಮುಂಗಾರು ಆರಂಭವಾಗುತ್ತಿದ್ದಂತೆ ಕಪ್ಪೆಗಳು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಗಂಡು ಕಪ್ಪೆಗಳು ಕಸರತ್ತು ನಡೆಸುತ್ತವೆ.
ತಮ್ಮ ಮೈಬಣ್ಣವನ್ನೇ ಹಳದಿ ಬಣ್ಣಕ್ಕೆ ಬದಲಾಯಿಸಿ, ಹೆಣ್ಣನ್ನು ಆಕರ್ಷಿಸುತ್ತವೆ. ಈ ವರ್ಷ ಸೈಕ್ಲೋನ್ ಕಾರಣದಿಂದಾಗಿ ಮಳೆ ಕಳೆದ 15 ದಿನಗಳ ಹಿಂದೆಯೇ ಸುರಿದಿತ್ತು.
undefined
ಇವು ಜಿಗಿಯುವ ಕಪ್ಪೆಗಳಲ್ಲ, ತೇಲೋ ಕಪ್ಪೆಗಳು..! ಇಲ್ಲಿವೆ ಫೋಟೋಸ್ ..
ಈ ವೇಳೆ ಸಹ ಕಪ್ಪೆಗಳ ಮಿಲನ ಮಹೋತ್ಸವ ನಡೆದಿತ್ತು. ಆದರೆ, ಮಳೆ ಕಡಿಮೆ ಆದ ಬಳಿಕ ನಾಪತ್ತೆಯಾಗಿದ್ದ ಕಪ್ಪೆಗಳು ಈಗ ಮತ್ತೆ ಕಾಣಿಸಿಕೊಂಡಿವೆ.
ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ವಿನಾಶದ ಅಂಚಿನಲ್ಲಿರುವ ಕಪ್ಪೆ ಪ್ರಭೇದ ಅಂಬೋಲಿ ಬುಶ್ ಫ್ರಾಗ್, ಮಲಬಾರ್ ಬುಶ್ ಫ್ರಾಗ್ ಮತ್ತು ಮಲಬಾರ್ ಗ್ಲೈಡಿಂಗ್ ಫ್ರಾಗ್‌ಗಳು ಅಧಿಕ ಸಂಖ್ಯೆಯಲ್ಲಿ ಕಾಣಿಸುತ್ತವೆ.