* ಚಂದ್ರವಳ್ಳಿ ತೋಟದಲ್ಲಿ ಕೋತಿಗಳ ಕಲರವ
* ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ ಹೊಸ ಮನರಂಜನೆ
* ಬಿಸಿಲ ಝಳ ಹೆಚ್ಚಾಗಿದ್ದೂ, ಪ್ರವಾಸಿಗರ ಸಂಖ್ಯೆ ವಿರಳ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಏ.29): ಚಿತ್ರದುರ್ಗ(Chitradurga) ಜಿಲ್ಲೆ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನ ಕೋಟೆ. ಆ ಕೋಟೆಯ ಹೆಬ್ಬಂಡೆಗಳು ಬೇಸಿಗೆಯ(Summer) ಬಿಸಿಲಿಗೆ ಹೇಗಿರಬಹುದು ಅಂತಾ ಸಣ್ಣ ಊಹೆ ಮಾಡಿಕೊಂಡ್ರೂ ಮೈ ಬೆಚ್ಚಗಾಗುತ್ತೆ. ಹೀಗಿರುವಾಗ ಇಂಥ ಜಾಗದಲ್ಲಿ ವಾಸ ಮಾಡುವ ಪ್ರಾಣಿ ಪಕ್ಷಿಗಳು ಹೇಗಿರುತ್ತವೆ. ವಿಶೇಷವಾಗಿ ಕೋತಿಗಳು ಏನು ಮಾಡುತ್ತವೆ ಅನ್ನೋದೇ ಇಂಟರೆಸ್ಟಿಂಗ್.! ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
undefined
ನೋಡಿ ಹೀಗೆ ಕಲ್ಲ ಮೇಲಿಂದ ನೀರಿಗೆ ಡೈವ್ ಹೊಡೆಯುವ ಕೋತಿ(Monkey). ನೀರೊಳಗೆ ಕೀಟಲೆ ಮಾಡುತ್ತಾ ಒಂದು ಕಡೆ ಮುಳುಗಿ ಮತ್ತೊಂದು ಕಡೆ ಎದ್ದು ತಪ್ಪಿಸಿಕೊಂಡು ಹೋಗುವ ಮಂಗಣ್ಣಗಳು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು, ಐತಿಹಾಸಿಕ ನಗರಿ ಚಿತ್ರದುರ್ಗಕ್ಕೆ ಹೊಂದಿಕೊಂಡಿರುವ ಚಂದ್ರವಳ್ಳಿ ಕೆರೆಯಲ್ಲಿ.
ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮತ್ತೆ ವಿಘ್ನ: ಕಾಮಗಾರಿಗೆ ವಿರೋಧ
ಚಂದ್ರವಳ್ಳಿ ತೋಟ ಎಂದೇ ಹೆಸರಾಗಿರುವ ಈ ರಮಣೀಯ ಪ್ರವಾಸಿ ತಾಣದಲ್ಲಿ ಈಗ ಕೋತಿಗಳ ಕಲರವ ಶುರುವಾಗಿದೆ. ಬಿಸಿಲಿನ ಬೇಗೆ ತಾಳಲಾರದೇ ಹಿಂಡು ಹಿಂಡು ಕೋತಿಗಳು ಚಂದ್ರವಳ್ಳಿ ಕೆರೆಯಲ್ಲಿ, ಈಜುತ್ತಾ, ನೀರಾಟ ಆಡುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿವೆ. ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ(Tourists)ಹೊಸ ಮನರಂಜನೆಯಾಗಿದೆ. ಥೇಟ್ ಮನುಷ್ಯರಂತೆಯೇ ನೀರಲ್ಲಿ ಆಟವಾಡುವ ಕೋತಿಗಳ ಈ ದೃಶ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅವುಗಳ ಕುಚೇಷ್ಟೇ ಹಾಗೂ ಥೇಟ್ ಮನುಷ್ಯರಂತೆ ನೀರಿಗೆ ಹಾರುವ ಸಾಹಸ ಅಚ್ಚರಿ ಮೂಡಿಸ್ತಿದೆ.
ಇನ್ನು ಚಿತ್ರದುರ್ಗದಿಂದ ಕೂಗಳತೆ ದೂರದಲ್ಲಿರುವ ಚಂದ್ರವಳ್ಳಿಗೆ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ನೂರಾರು ಜನ ವಾಕಿಂಗ್ ಬರ್ತಾರೆ. ವೀಕೆಂಡ್‌ನಲ್ಲಿ ಸಾವಿರಾರು ಜನ ಪ್ರವಾಸಿಗರು ಕೂಡ ಬರ್ತಾರೆ. ಆದರೆ ಕಳೆದ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿದ್ದೂ, ಪ್ರವಾಸಿಗರ ಸಂಖ್ಯೆ ಸಹ ವಿರಳವಾಗಿದೆ. ಹೀಗಾಗಿ ಈ ಮೂಕ ಜೀವಿಗಳು ಆಹಾರವಿಲ್ಲದೇ ಪರದಾಡ್ತಿದ್ದೂ, ನೀರಾಟದಲ್ಲೇ ಕಾಲ ಕಳೆಯಿತ್ತಿವೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ(Department of Tourism) ಅಧಿಕಾರಿಗಳು ಈ ಕೋತಿಗಳಿಗೆ ಆಹಾರ(Food) ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಾಣಿಪ್ರಿಯ ಒತ್ತಾಯಿಸಿದ್ದಾರೆ.
ಒಟ್ಟಾರೆ ನೋಡುವವರ ಕಣ್ಣಿಗೆ ಕೋತಿಗಳ ನೀರಾಟ ಮನರಂಜನೆಯಾಗಿದೆ. ನೀರಿನಿಂದ ಸಾಮಾನ್ಯವಾಗಿ ದೂರವಿರುವ ಕೋತಿಗಳು ಕೆರೆ ನೀರಲ್ಲಿ ಕಾಲ ಕಳೆಯುತ್ತಿವೆ ಅಂದ್ರೆ ಬಿಸಿಲಿನ ತಾಪ ಎಷ್ಟರ ಮಟ್ಟಿಗೆ ಜೋರಾಗಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮರ, ಗಿಡಗಳನ್ನು ಬೆಳೆಸಿ, ನೀರನ್ನು ಮಿತವಾಗಿ ಬಳಸೋದನ್ನು ರೂಢಿಸಿಕೊಳ್ಳದಿದ್ರೆ ಮುಂದಿನ ದಿನಗಳು ಇನ್ನೂ ಭೀಕರವಾಗಿರಬಹುದು ಅನ್ನೋದು ನಮ್ಮ ಆತಂಕ.