ಆಡುತ್ತಿದ್ದ ಮಗುವಿನ ಮೇಲೆ ಮಂಗಗಳ ದಾಳಿ

By Kannadaprabha NewsFirst Published Feb 14, 2020, 3:37 PM IST
Highlights

ಮಕ್ಕಳ ಮೇಲೆ ಮಂಗಗಳು ಪದೇ ಪದೇ ದಾಳಿ ಮಾಡುತ್ತಿರುವ ಘಟನೆ ಗದಗದಲ್ಲಿ ನಡೆಯುತ್ತಿದೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಮಂಗ ದಾಳಿ ಮಾಡಿದೆ.

ಗದಗ(ಫೆ.14): ಮಕ್ಕಳ ಮೇಲೆ ಮಂಗಗಳು ಪದೇ ಪದೇ ದಾಳಿ ಮಾಡುತ್ತಿರುವ ಘಟನೆ ಗದಗದಲ್ಲಿ ನಡೆಯುತ್ತಿದೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಮಂಗ ದಾಳಿ ಮಾಡಿದೆ.

ಗದಗ ನಗರದಲ್ಲಿ ಮಂಗಗಳು ಪದೇ ಪದೇ ಪುಟಾಣಿ ಮಕ್ಕಳ‌‌ ಮೇಲೆ ದಾಳಿ ಮಾಡುತ್ತಿರುವ ಘಟನೆ ನಡೆಯುತ್ತಿದೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಮಂಗ ದಾಳಿ ಮಾಡಿದ್ದು, ಹೆರಿಗೆ ಆಸ್ಪತ್ರೆಗೆ ತಾಯಿಯೊಂದಿಗೆ ಬಂದಾಗ ಮಂಗ ದಾಳಿ ನಡೆಸಿದೆ.

ಕಾವೇರಿ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಜಲಸಮಾಧಿ

ಆಸ್ಪತ್ರೆಯ ಆವರಣದಲ್ಲಿ ಆಟವಾಡುವ ಮಗುವಿನ ಮೇಲೆ ಮಂಗ ದಾಳಿ ನಡೆಸಿದ್ದು, ಮಗುವಿನ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಮಗುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಫೆಬ್ರವರಿ 9 ರಂದು ಎರಡು ವರ್ಷದ ಆದ್ಯಾ ಎನ್ನುವ ಮಗುವಿನ ಮೇಲೆ ಮಂಗ ದಾಳಿ ಮಾಡಿತ್ತು.

ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕ, ಶಿಕ್ಷಕಿ ಆತ್ಮಹತ್ಯೆ

ಮನೆ‌ಮುಂದೆ ಆಟವಾಡುವ ಮಗುವಿನ ಮೇಲೆ ಮಂಗ ದಾಳಿ ಮಾಡಿ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಾಯಗೊಳಿಸಿದ್ದವು. ಕಳೆದ 20  ದಿನಗಳಲ್ಲಿ ಐದು ಮಕ್ಕಳ  ಮೇಲೆ ಮಂಗಗಳ ದಾಳಿ ನಡೆದಿದ್ದು, ಮಂಗನ ಹಾವಳಿಯಿಂದ ಸ್ಥಳೀಯರು ಬೇಸತ್ತಿದ್ದಾರೆ. ಗದಗ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!