ಹಾಸನ ಮೂಲದ ಮೂವರು ಬಾಲಕರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮಂಡ್ಯ(ಫೆ.14): ಹಾಸನ ಮೂಲದ ಮೂವರು ಬಾಲಕರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮೂವರು ವಿದ್ಯಾರ್ಥಿಗಳು ಜಲಸಮಾಧಿಯಾಗಿದ್ದು, ಕಾವೇರಿ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ. ಮುದಾಸಮ್ (18), ಇಫ್ತೀಕಾರ್ (18), ತೌಸಿಫ್ (19) ಮೃತ ವಿದ್ಯಾರ್ಥಿಗಳು.
ಕಾರು ಆಟೋ ಮುಖಾಮುಖಿ: ಧರ್ಮಸ್ಥಳ ಪಾದಯಾತ್ರೆ ಹೊರಟಿದ್ದ ಭಕ್ತ ಸಾವು
ಶ್ರೀರಂಗಪಟ್ಟಣದ ಶಂಭುಲಿಂಗಯ್ಯನ ಕಟ್ಟೆ ಬಳಿ ದುರಂತ ನಡೆದಿದ್ದು, ಸ್ನಾನಕ್ಕೆಂದು ಕಾವೇರಿ ನದಿಯಗಿಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎನ್ನಲಾಗಿದೆ. ವಿದ್ಯಾರ್ಥಿಗಳು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಓರ್ವ ವಿದ್ಯಾರ್ಥಿ ಮೃತದೇಹ ದೊರೆತಿದ್ದು, ಮತ್ತಿಬ್ಬರ ಶವಕ್ಕಾಗಿ ಶೋಧ ಮುಂದುವರಿದಿದೆ.