ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಪ್ರತಿಧ್ವನಿಸಿದ ಹೌದು ಹುಲಿಯಾ| ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಸಭಿಕರು ‘ಮೋದಿ, ಮೋದಿ’ ಎಂದು ಘೋಷಣೆ|
ಕಲಬುರಗಿ[ಫೆ.08]: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಬಾದಾಮಿ ಜಾತ್ರೆಗೆ ತೆರಳಿದ್ದಾಗ ನೆರೆದಿದ್ದ ಜನ ‘ಮೋದಿ’ಪರ ಘೋಷಣೆಗಳನ್ನು ಕೂಗಿದ್ದರು. ಇದೀಗ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಸಭಿಕರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.
ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾ ಮಾಫಿಯಾ: ರಾಜೇಂದ್ರ ಸಿಂಗ್ ಬಾಬು
ಸಿದ್ದರಾಮಯ್ಯ ಭಾಷಣ ಆರಂಭ ಮಾಡುತ್ತಿದ್ದಂತೆಯೇ ಯುವಕರ ಗುಂಪು ಮೋದಿ ಮೋದಿ ಎಂದು ಕೂಗಲು ಆರಂಭಿಸಿತು. ನಂತರ ಭಾಷಣದುದ್ದಕ್ಕೂ ಈ ಘೋಷಣೆ ಪುನರಾವರ್ತನೆ ಆಗುತ್ತಲೇ ಇತ್ತು. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ವೇದಿಕೆ ಮೇಲೆ ಕುಳಿತವರ ಮುಖವನ್ನು ನೋಡಿ ಮಾತನಾಡಿದರು. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪಕ್ಷ ಹಾಗೂ ನಾಯಕರ ಹೆಸರು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಯಾವುದೇ ಪಕ್ಷ, ಪ್ರಧಾನಿ, ಸಿಎಂ ಎಂದು ಉಚ್ಚರಿಸುವಾಗಲೂ ಸಹ ಸಭಿಕರು ಮೋದಿ, ಬಿಜೆಪಿ ಹಾಗೂ ಸಿಎಂ ಯಡಿಯೂರಪ್ಪ ಎಂದು ತಿಳಿದು ‘ಮೋದಿ’ ಘೊಷಣೆ ಕೂಗಿದರು. ಇದ್ಯಾವುದನ್ನೂ ಸಿದ್ದರಾಮಯ್ಯ ಲೆಕ್ಕಿಸಲೇ ಇಲ್ಲ. ಸುಮಾರು 40 ನಿಮಿಷಗಳ ಕಾಲ ಸಿದ್ದರಾಮಯ್ಯರ ಮಾತನಾಡಿದ ವೇಳೆ ಆರೇಳು ಭಾರಿ ಮೋದಿ ಎಂದು ಯುವಕರ ಗುಂಪು ಕೂಗಿತ್ತು. ಇದೇ ವೇಳೆ ಇದಕ್ಕೆ ವಿರುದ್ಧವಾಗಿ ಕೆಲವರು ಹೌದು ಹುಲಿಯಾ ಎನ್ನುವ ಘೊಷಣೆಗಳನ್ನು ಕೂಗಿದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಸಲ, ಕೇಸ್ ಹಿಂಪಡೆಯಿರಿ:
ಅಭಿವ್ಯಕ್ತಿ ಸ್ವಾತಂತ್ರ್ಯ ಸಾಹಿತ್ಯದ ಉಸಿರಾಗಿದ್ದು ಅದನ್ನು ಮೊಟಕುಗೊಳಿಸುವ ಕೆಲಸವನ್ನು ಯಾವ ಪಕ್ಷ ಇಲ್ಲವೇ ಸರ್ಕಾರ ಮಾಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಹಾಕಲಾಗುತ್ತಿರುವ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್, ಬಳಿಗಾರ್ ಜುಗಲ್ಬಂದಿ
ಕಲಬುರಗಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯಿಂದ ನೋವಾಗುತ್ತಿದೆ. ಮೂಲಸಂವಿಧಾನ ಬದಲಿಸುವ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಇದೇ ವೇಳೆ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಮಾತೃಭಾಷೆಯ ಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ನೀಡುವ ವಿಚಾರವಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು ಎಂದು ಪ್ರಧಾನಿಗೆ ಮನವಿ ಮಾಡಲಾಗಿತ್ತು. ಆದರೆ ಅದು ಕಾರ್ಯಸಾಧುಕೊಂಡಿಲ್ಲ. ಇದೀಗ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿ ಮೇಲೆ ಒತ್ತಡ ಹೇರಿ ಆ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಮ್ಮೇಳನದಲ್ಲಿ ತೆಗೆದುಕೊಂಡಿರುವ ಆರು ನಿರ್ಣಯಗಳನ್ನು ಸರ್ಕಾರ ಕ್ರಮ ಜರುಗಿಸ ಬೇಕು,ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ತೊಲಗಬೇಕಾಗಿದೆ. ಅದಕ್ಕಾಗಿ ಜಾರಿಯಾಗಿರುವ 371 (ಜೆ) ಗೆ 2 ಸಾವಿರ ಕೋಟಿ ರು. ಒದಗಿಸ ಬೇಕು. ಈ ಭಾಗವು ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಾದಾಗ ಮಾತ್ರ ಭಾಷೆಯ ಏಳ್ಗೆಯೂ ಸಾಧ್ಯವಾಗಲಿದೆ ಎಂದರು.