ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳ ಸಿಇಒ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ವ್ಯಂಗ್ಯ ಮಾಡಿದ್ದಾರೆ. ಕಾರ್ಪೊರೇಟ್ ಪರವಾದ ನೀತಿ ಅನುಸರಿಸಿ ಅರ್ಥ ವ್ಯವಸ್ಥೆಯನ್ನು ಮೋದಿ ಹಾಳು ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
ಮೈಸೂರು(ಜ.09): ಕಾರ್ಪೊರೇಟ್ ಪರವಾದ ನೀತಿ ಅನುಸರಿಸಿ ಅರ್ಥ ವ್ಯವಸ್ಥೆ ಹಾಳು ಮಾಡಿರುವ ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳ ಸಿಇಒ ಎಂದು ಕರೆಯಬಹುದು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ವ್ಯಂಗ್ಯ ಮಾಡಿದ್ದಾರೆ.
ನಗರದ ಪುರಭವನ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ಕಾರ್ಪೊರೇಟ್ ಪರವಾಗಿದೆ. ದುಡಿಯುವ ವರ್ಗ ಮಾತ್ರವಲ್ಲದೆ ಅನ್ಯಾಯ, ತುಳಿತಕ್ಕೆ ಒಳಗಾದವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ನಮ್ಮನ್ನು ಆಳುವ ಸರ್ಕಾರಕ್ಕೆ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ. ದೇಶದ ಎಲ್ಲೆಡೆ ಮುಷ್ಕರ ನಡೆಯುತ್ತಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಈ ಮುಷ್ಕರಕ್ಕೆ ಸ್ವಯಂ ಪ್ರೇರಣೆಯಿಂದ ಬೆಂಬಲ ವ್ಯಕ್ತವಾಗಿದೆ ಎಂದಿದ್ದಾರೆ.
undefined
ವಿವಾಹಿತೆ ಗುಪ್ತಾಂಗಕ್ಕೆ ‘ಲವರ್’ ಆ್ಯಸಿಡ್ ದಾಳಿ!
ಸಂಘಟಿತ ವಲಯ ಮಾತ್ರವಲ್ಲದೇ, ಅಸಂಘಟಿತ ವಲಯದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗುತ್ತಿಗೆದಾರರು, ಟೆಕ್ಸ್‌ಟೈಲ್ ಕಾರ್ಮಿಕರು ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ಬಂದ 70 ವರ್ಷದ ಬಳಿಕವೂ ಕಾರ್ಮಿಕರು ಹೋರಾಟ ಮಾಡಲು ಅನುಮತಿ ಪಡೆಯಲು ಅಲೆಯಬೇಕು. ಸರ್ಕಾರ ಬೇರೆ ಬೇರೆ ಇಲಾಖೆ ಮೂಲಕ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಿದೆ. ನಾವು ಯಾವುದೇ ಬಂದ್‌ಗೆ ಕರೆ ನೀಡಿಲ್ಲ. ಆದ್ದರಿಂದ ಬಂದ್ ವಿಫಲ. ಅದರ ಬಗ್ಗೆ ವ್ಯಾಖ್ಯಾನ ಮಾಡುವುದೂ ಸರಿಯಲ್ಲ. ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ ಕೊಟ್ಟ ಮೇಲೆ ಇಡೀ ದೇಶದಾದ್ಯಂತ ದುಡಿಯುವ ವರ್ಗದವರು ತಮ್ಮ ಕೆಲಸ ನಿಲ್ಲಿಸಿ ಪ್ರತಿಭಟಿಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ಕೊಡುವುದು ನಮ್ಮ ಮುಖ್ಯ ಉದ್ದೇಶ ಎಂದಿದ್ದಾರೆ.
'ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ'
ದೇಶದಲ್ಲಿ ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿರುವಂತೆ ಕನಿಷ್ಠ 21 ಸಾವಿರ ವೇತನ ನೀಡಬೇಕು. ಆಯೋಗದ ವರದಿಯು ಬರೀ ನೌಕರರಿಗೆ ಮಾತ್ರ ಸೀಮಿತವಲ್ಲ. ನೌಕರರು ಮನುಷ್ಯರು, ಬೇರೆಯವರು ಮನುಷ್ಯರಲ್ಲವೇ?, ಕನಿಷ್ಠ ಕೂಲಿ ಕೇಳಬೇಕಲ್ಲವೇ? ಕೇಂದ್ರ ಅಥವಾ ರಾಜ್ಯ ಸರ್ಕಾರ ಸಮಸ್ಯೆ ಕೇಳುತ್ತಿಲ್ಲ. ಅದರ ಬದಲಿಗೆ ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿ, ತಮ್ಮ ವೈಫಲ್ಯ ಮುಚ್ಚುವ ಪ್ರಯತ್ನ ಮಾಡುತ್ತಿವೆ. ಈ ಮುಷ್ಕರದ ಬಗ್ಗೆ ಸರ್ಕಾರ ಮೌನವಾಗಿದೆ. ಸರ್ಕಾರ ಕಣ್ಣು ಬಿಡಬೇಕು. ಇಲ್ಲದಿದ್ದರೆ ಜನರೇ ನಿಮ್ಮ ಕಣ್ಣು ತೆರೆಸುವ ಕೆಲಸ ಮಾಡುವರು. ಬದಲಾದ ಕಾಲಕ್ಕೆ ತಕ್ಕಂತೆ ಬೋನಸ್ ಆಕ್ಟ್ ಬದಲಾಗಬೇಕು. ಗ್ರಾಚ್ಯುಯಿಟಿ ಕಾಯಿದೆ ಬದಲಾಗಬೇಕು. ಕಾರ್ಮಿಕರಿಗೆ ಮುಂದೆ ಇಎಸ್‌ಐ ತೆಗೆದರೂ ಅಚ್ಚರಿ ಇಲ್ಲ. ಪಿಂಚಣಿ 1 ಸಾವಿರದ ಬದಲಿಗೆ 5 ಸಾವಿರ ಹೆಚ್ಚಿಸಬೇಕು. ಕಾರ್ಮಿಕರಿಗೆ ಕೊಡುತ್ತಿರುವ ಪಿಂಚಣಿ ಒಂದು ಸಾವಿರದ ಬದಲಿಗೆ ಐದು ಸಾವಿರ ಹೆಚ್ಚಿಸಬೇಕು. ಯಾವುದೇ ರೀತಿಯಲ್ಲೂ ಕಾರ್ಮಿಕರಿಗೆ ಪರಿಹಾರ ಕೊಡುವ ನೀತಿ ರೂಪಿಸುವ ಬದಲಿಗೆ ಕಾರ್ಪೋರೇಟ್ ಪರವಾದ ನೀತಿ ತರುತ್ತಿರುವುದರಿಂದ ಕೈಗಾರಿಕೆ ಬೆಳವಣಿಗೆ ಕುಂಠಿತಗೊಂಡು ಜಿಡಿಪಿ ಕುಸಿತವಾಗಿದೆ ಎಂದು ದೂರಿದ್ದಾರೆ.
ಚೌಕೀದಾರ್ ಮೋದಿಗೆ ಮಮತಾ ಪೆಹ್ರೇದಾರ್!...
ಉದಾರೀಕರಣ ಜಾಗತೀಕರಣ ಬಂದ ಮೇಲೆ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ 20 ರಿಂದ 22 ಸಾವಿರ ಗುತ್ತಿಗೆ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈಗ ಕಾರ್ಮಿಕರು ಅತ್ಯಂತ ಶೋಷಣೆಯ ಸ್ಥಿತಿಯಲ್ಲಿದ್ದಾರೆ ಎಂದರು.