ದೇಶದ ಸಂವಿಧಾನ ಬದಲಾವಣೆ ವಿಚಾರವನ್ನು ಸಂಸದ ಅನಂತ್ ಕುಮಾರ್ ಹೆಗಡೆ ಬಾಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೇಳಿಸಿದ್ದಾರೆ.
ಕೊಡಗು (ಏ.14): ದೇಶದ ಸಂವಿಧಾನವನ್ನು ಬದಲಾವಣೆ ಮಾಡುವ ವಿಚಾರವನ್ನು ಸಂಸದ ಅನಂತ್ ಕುಮಾರ್ ಹೆಗಡೆ ಅವರ ಬಾಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದರು.
ಮಡಿಕೇರಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ರಚಿಸಿರುವ ಜಗತ್ತಿನ ಸರ್ವ ಶ್ರೇಷ್ಠ ಸಂವಿಧಾನಕ್ಕೆ ಆರ್‌ಎಸ್‌ಎಸ್ & ಬಿಜೆಪಿ ಗೌರವ ಕೊಡುವುದಿಲ್ಲ. ಸಂವಿಧಾನ ಜಾರಿ ಆದಾಗ ಸಾವರ್ಕರ್ ಅಭಿಪ್ರಾಯ ಏನಿತ್ತು? ಸಂವಿಧಾನ ಬದಲಾವಣೆಯೇ ಬಿಜೆಪಿಯ ಹಿಡೆನ್ ಅಜೆಂಡಾ ಆಗಿದೆ. ಸಂವಿಧಾನ ಬದಲಾವಣೆ ವಿಚಾರವನ್ನ ಸಂಸದ ಅನಂತ್ ಕುಮಾರ್ ಹೆಗಡೆ ಬಾಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೇ ಹೇಳಿಸಿದ್ದಾರೆ. ಈ ದೇಶದ ಪ್ರಜಾತಂತ್ರ್ಯ ಅಪಾಯದಲ್ಲಿದೆ. ಜನತಂತ್ರದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಐದು ವರ್ಷಗಳ ನಂತರದ ಚಿತ್ರಣ ಅದೇ ಊರು, ಅದೇ ಮೈದಾನ, ಸ್ನೇಹಿತರು ಮಾತ್ರ ಬದಲು!
ಜಾಗತಿಕ ಮಟ್ಟದ ಸರ್ವಾಧಿಕಾರಿಗಳಾದ ಜರ್ಮನಿಯ ಹಿಟ್ಲರ್, ಮುಸಲ್ಲೋನಿ ತತ್ವದ ಬಗ್ಗೆ ಮಾತ್ರ ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ನಂಬಿಕೆಯಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಆರ್‌ಎಸ್‌ಎಸ್ ಕೊಡುಗೆ ಏನು? ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಬಿಜೆಪಿ, ಆರ್‌ಎಸ್‌ಎಸ್‌ನ ಬಡವರಿಗೂ ನಮ್ಮ 5 ಗ್ಯಾರಂಟಿ ಸಿಗುತ್ತಿದೆ. ಕೊಡಗಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು ಹೇಳಿ? ಶಾಸಕರಾದ ಪೊನ್ನಣ್ಣ & ಮಂಥರ್ ಏನ್ ಹೇಳ್ತಾರೆ ಅದೆಲ್ಲ ಮಾಡಿ ಕೊಡ್ತೀನಿ. ಸೋಲ್ತೀವಿ ಅಂತ ಪ್ರತಾಪ್ ಸಿಂಹನನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮ 5 ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇದನ್ನು ಕುಮಾರಸ್ವಾಮಿ ಅವರಿಂದ ನಾನು ಬಯಸಿರಲಿಲ್ಲ. ಬದಲಾಗಿ ಎನ್ ಡಿಎ ಅಭ್ಯರ್ಥಿಯಾಗಿರುವುದರಿಂದ ಪ್ರಧಾನಿ ಮೋದಿ ಇದಕ್ಕೆ ಉತ್ತರ ಕೊಡಬೇಕು. ನಿರ್ಮಲ ಸೀತಾರಾಮನ್, ಸ್ಮೃತಿ ಇರಾನಿ ಅವರು ಇದಕ್ಕೆ ಉತ್ತರ ಕೊಡಬೇಕು. ಇಂಥವರನ್ನು ಎನ್ ಡಿಗೆ ಸೇರಿಕೊಂಡು ನನ್ನ ಅಕ್ಕ, ತಂಗಿ, ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ಇದನ್ನು ಯಾರು ಕ್ಷಮಿಸುವುದಕ್ಕೆ ಸಾಧ್ಯವಿಲ್ಲ. ನಾವು ಗ್ಯಾರಂಟಿ ಕಾರ್ಡುಗಳನ್ನು ತಾಯಿ ಚಾಮುಂಡಿ ಬಳಿ ಇಟ್ಟು ಪೂಜೆ ಮಾಡಿ ವಿತರಣೆ ಮಾಡಿದ್ದೇವೆ. ಅಣ್ಣ ತಮ್ಮಂದಿರ ಮನೆಗೆ, ತವರು ಮನೆಗೆ, ತೀರ್ಥಯಾತ್ರೆಗೆ ಮಹಿಳೆಯರು ಹೋಗಿದ್ದಾರೆ. ಇದನ್ನು ನೀವು ದಾರಿ ತಪ್ಪುತಿದ್ದಾರೆ ಅಂಥ ಹೇಳುತ್ತೀರಿ ಕುಮಾರಸ್ವಾಮಿಯವರೇಎಂದು ಟೀಕೆ ಮಾಡಿದರು.
ರಾಜ್ಯಕ್ಕೆ ನೆರೆ, ಬರ ಬಂದಾಗ ಬಾರದ ಪ್ರಧಾನಿ ಮೋದಿಗೆ ಚುನಾವಣಾ ಪ್ರಚಾರಕ್ಕೆ ಸ್ವಾಗತ; ಸಿಎಂ ಸಿದ್ದರಾಮಯ್ಯ ಟೀಕೆ
ನಾವು ಕೊಟ್ಟ ಎರಡು ಸಾವಿರದಿಂದ ತಾಯಂದಿರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡುತ್ತಿದ್ದಾರೆ. ಪ್ರತೀ ತಿಂಗಳು ಒಂದು ಕುಟುಂಬಕ್ಕೆ 5-6 ಸಾವಿರ ರೂ. ಉಳಿತಾಯವಾಗುತ್ತಿದೆ. ಇದನ್ನು ದಾರಿ ತಪ್ಪುತಿದ್ದಾರೆ ಅಂತ ಹೇಳುತ್ತಿದ್ದಾರೆ. ಇವರ ಮಾತಿನಿಂದ ನನಗೆ ದುಃಖ ತಡೆದುಕೊಳ್ಳಲಾಗುತ್ತಿಲ್ಲ. ಮಹಿಳೆಯ ಹೋರಾಟಕ್ಕೆ ನಾನು ಅಡ್ಡ ಬರುವುದಿಲ್ಲ. ಇದು ಬರೀ ಹೆಣ್ಣುಮಕ್ಕಳಿಗೆ ಆದ ಅವಮಾನವಲ್ಲ. ಇಡೀ ಮಾನವ ಕುಲಕ್ಕೆ ಆದ ಅವಮಾನ. ಇದಕ್ಕೆ ದೇಶದ ಪ್ರಧಾನಿ ಮೋದಿಯವರೇ ಉತ್ತರ ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.