ರಾಯಚೂರಲ್ಲಿ ಸುರಿದ ಅಕಾಲಿಕ ಮಳೆ; ಸಿಡಿಲು ಬಡಿದು ಯುವಕ ಸಾವು

By Ravi JanekalFirst Published Apr 14, 2024, 3:27 PM IST
Highlights

ರಣ ಬಿಸಿಲಿಗೆ ಕಂಗೆಟ್ಟಿದ್ದ ರಾಯಚೂರು ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಮೊದಲ ಮಳೆಗೆ ಸುಡುವ ನೆಲ ತಂಪಾಗಿ ಜನರು ಸಂತಸಗೊಂಡಿದ್ದಾರೆ. ಕೆಲವೆಡೆ  ಕೆಲವೆಡೆ ಭೀಕರ ಬಿರುಗಾಳಿ ಗುಡುಗು ಮಿಂಚು ಸಿಡಿಲು ಸಹಿತ ಮಳೆಯಾಗಿದ್ದು, ಸಾವು ನೋವು ಸಂಭವಿಸುವಂತೆ ಮಾಡಿದೆ.

ರಾಯಚೂರು (ಏ.14): ರಣ ಬಿಸಿಲಿಗೆ ಕಂಗೆಟ್ಟಿದ್ದ ರಾಯಚೂರು ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಮೊದಲ ಮಳೆಗೆ ಸುಡುವ ನೆಲ ತಂಪಾಗಿ ಜನರು ಸಂತಸಗೊಂಡಿದ್ದಾರೆ. ಕೆಲವೆಡೆ  ಕೆಲವೆಡೆ ಭೀಕರ ಬಿರುಗಾಳಿ ಗುಡುಗು ಮಿಂಚು ಸಿಡಿಲು ಸಹಿತ ಮಳೆಯಾಗಿದ್ದು, ಸಾವು ನೋವು ಸಂಭವಿಸುವಂತೆ ಮಾಡಿದೆ.

ಸಿಂಧನೂರು ತಾಲೂಕಿನ ಮಲ್ಲಾಪುರ ಕ್ಯಾಂಪ್‌ನಲ್ಲಿ ಸುರಿದಿರುವ ಅಕಾಲಿಕ ಮಳೆ. ಮಳೆಯಲ್ಲಿ ಜಮೀನಿಗೆ ಹೋಗಿದ್ದ ವೇಳೆ ಸಿಡಿಲು ಬಡಿದು ಅಮರಾಪುರ ಗ್ರಾಮದ ಶಾಂತಪ್ಪ(18) ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

ಘಟನೆ ಮಾಹಿತಿ ತಿಳಿದು ಮೃತ ಯುವಕನ ಮನೆಗೆ ಭೇಟಿ ನೀಡಿದ ಸಿಂಧನೂರು ತಹಸೀಲ್ದಾರ್ ಅರುಣ್ ಕುಮಾರ್ ದೇಸಾಯಿ ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ

ಕರ್ನಾಟಕದ 15 ಜಿಲ್ಲೆಯಲ್ಲಿ ಬೇಸಿಗೆ ಮಳೆ: ಐವರು ಬಲಿ

click me!