ದಸರಾ ಹಬ್ಬದಲ್ಲಿ ಮಾರಾಟಕ್ಕೆ ಸಂಗ್ರಹಿಸಿದ್ದ ಮೊಬೈಲ್‌, ಟಿವಿ ಕದ್ದೊಯ್ದ ಖದೀಮರು

By Sathish Kumar KH  |  First Published Oct 23, 2023, 12:51 PM IST

ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಮಾರಾಟಕ್ಕೆಂದು ಸಂಗ್ರಹಣೆ ಮಾಡಿದ್ದ ಎಲ್‌ಇಡಿ ಟಿವಿ, ಮೊಬೈಲ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. 


ತುಮಕೂರು (ಅ.23): ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಮಾರಾಟಕ್ಕೆಂದು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಸಂಗ್ರಹಣೆ ಮಾಡಿದ್ದ ಮಳಿಗೆಯೊಂದರಿಂದ ಖದೀಮರು ಎಲ್‌ಇಡಿ ಟಿವಿ, ಮೊಬೈಲ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. 

ರಾಜ್ಯದಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಾಇನಿಕ್‌ ವಸ್ತುಗಳ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತದೆ ಎಂದು ಎಲೆಕ್ಟ್ರಾನಿಕ್ಸ್‌ ಮಳಿಗೆಗೆ ಎಲ್‌ಇಡಿ ಟಿವಿ, ಮೊಬೈಲ್‌ಗಳನ್ನು ಹೆಚ್ಚಾಗಿ ಸಂಗ್ರಹಣೆ ಮಾಡಲಾಗಿತ್ತು. ಆದರೆ, ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಖದೀಮರು ಹಬ್ಬಕ್ಕೂ ಮುಂಚಿತವಾಗಿ ಮಳಿಗೆಗಳಲ್ಲಿ ಮೊಬೈಲ್‌ ಹಾಗೂ ಇತರೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಸಂಗ್ರಹ ಮಾಡಿದ್ದನ್ನು ನೋಡಿಕೊಂಡು ರಾತ್ರೋ ರಾತ್ರಿ ಮಳಿಗೆಗೆ ನುಗ್ಗಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

Tap to resize

Latest Videos

undefined

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಮಳಿಗೆ: ತುಮಕೂರು ಜಿಲ್ಲೆಯ ತುರುವೆಕೆರೆ ಪಟ್ಟಣದಲ್ಲಿ ಘಟನೆ ನಡೆದಿದೆ. ರಾತ್ರೋ ರಾತ್ರಿ ಗೃಹೋಪಯೋಗಿ ಎಕ್ಟ್ರಾನಿಕ್ಸ್  ಮಳಿಗೆಗೆ ಕನ್ನ ಹಾಕಲಾಗಿದೆ. ಎಲ್‌ಇಡಿ ಟಿವಿ, ಮೊಬೈಲ್ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು  ಖದೀಮರು ದೋಚಿಕೊಂಡು ಹೋಗಿದ್ದಾರೆ. ಈ ಮಳಿಗೆ ಜಬಿಉಲ್ಲಾ ಎಂಬುವರಿಗೆ ಸೇರಿದ ಗೃಹೋಪಯೋಗಿ ವಸ್ತುಗಳ ಮಳಿಗೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 150 ರಲ್ಲಿದ್ದ ಸಿಟಿ ಎಲೆಕ್ಟ್ರಾನಿಕ್ಸ್ ‌ನಲ್ಲಿ ದರೋಡೆ ನಡೆದಿದ್ದು, ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸೀರೆ ಸೆರಗನ್ನು ಜರುಗಿಸಿ ಎದೆಸೀಳು ತೋರಿಸಿದ ಬಿಂದಾಸ್‌ ಬೆಡಗಿ ಹನ್ಸಿಕಾ ಮೋಟ್ವಾನಿ: ದೊಡ್ಡ ಮನಸ್ಸು ಎಂದ ಫ್ಯಾನ್ಸ್

ಎಲೆಕ್ಟ್ರಾನಿಕ್ಸ್‌ ಮಳಿಗೆ ಹಿಂಭಾಗದ ಸೀಟ್‌ ಮುರಿದು ಕಳ್ಳತನ: ಎಲೆಕ್ಟ್ರಾಇನಿಕ್ಸ್‌ ಮಳಿಗೆಯ ಹಿಂಬದಿಯಲ್ಲಿ ಶೀಟ್ ಮುರಿದು ಒಳ ನುಗ್ಗಿದ ಕಳ್ಳರು, ಸುಮಾರು 8 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಮೊಬೈಲ್ ಹಾಗೂ ಟಿವಿಗಳನ್ನು ಕಳ್ಳತನ ಮಾಡಲಾಗಿದೆ. ಜೊತೆಗೆ, ನಗದು ಕೌಂಟರ್‌ ಟೇಬಲ್‌ನಲ್ಲಿ ಇಡಲಾಗಿದ್ದ 3,000 ರೂ, ನಗದು ಸೇರಿ ಗೃಹೋಪಯೋಗಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಂದು ವಿಜಯದಶಮಿ ಅಂಗವಾಗಿ ಬೆಳಗ್ಗೆ ಬಂದು ಮಳಿಗೆಯನ್ನು ತೆರೆದಾಗ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತುರುವೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!