ದೀಪಾವಳಿ ಪ್ರಯುಕ್ತ ದಾರವಾಡದಲ್ಲೊಂದು 'ಮೊಬೈಲ್ ಉತ್ಸವ'!

Published : Oct 17, 2022, 03:02 PM ISTUpdated : Oct 17, 2022, 03:03 PM IST
ದೀಪಾವಳಿ ಪ್ರಯುಕ್ತ ದಾರವಾಡದಲ್ಲೊಂದು 'ಮೊಬೈಲ್ ಉತ್ಸವ'!

ಸಾರಾಂಶ

ದೀಪಾವಳಿಗೆ ಕೇವಲ ಒಂದು ವಾರ ಬಾಕಿ ಇರುವ ಹಿನ್ನಲೆ, ಧಾರವಾಡದ ಟಿಕಾರೆ ರಸ್ತೆಯಲ್ಲಿ ಈಗಾಗಲೇ ಹಬ್ಬಕ್ಕೆ ಸಜ್ಜುಗೊಂಡಿದೆ. ದೀಪಾವಳಿ ಪ್ರಯುಕ್ತ ಮೂಬೈಲ್ ಉತ್ಸವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮೂಬೈಲ್(Mobile) ಗಳು ಕಡಿಮೆ‌ ದರದಲ್ಲಿ ರಿಯಾಯಿತಿಯಲ್ಲಿ ಸಿಗುವ ದೃಷ್ಠಿಯಿಂದ ಮೊಬೈಲ್ ಉತ್ಸವ(Mobile Utsav) ಆಚರಣೆಯನ್ನ ಮಾಡಲಾಗುತ್ತಿದೆ. 

 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್  ಸುವರ್ಣ ನ್ಯೂಸ್ ಧಾರವಾಡ 

 ಧಾರವಾಡ (ಅ.17) : ದೀಪಾವಳಿಗೆ ಕೇವಲ ಒಂದು ವಾರ ಬಾಕಿ ಇರುವ ಹಿನ್ನಲೆ, ಧಾರವಾಡದ ಟಿಕಾರೆ ರಸ್ತೆಯಲ್ಲಿ ಧಾರವಾಡ ಮೂಬೈಲ್ ಉತ್ಸವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದೀಪಾವಳಿ(Deepavali) ಹಬ್ಬಕ್ಕೆ ವಿಶೇಷವಾಗಿ ಮೂಬೈಲ್(Mobile) ಗಳು ಕಡಿಮೆ‌ ದರದಲ್ಲಿ ರಿಯಾಯಿತಿಯಲ್ಲಿ ಸಿಗುವ ದೃಷ್ಠಿಯಿಂದ ಮೊಬೈಲ್ ಉತ್ಸವ(Mobile Utsav) ಆಚರಣೆಯನ್ನ ಮಾಡಲಾಗುತ್ತಿದೆ. 

 

ದೀಪಾವಳಿಗೆ ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯಗಳನ್ನು ನೆನಪಿಡಿ

ಇಂದು ಮೊಬೈಲ್ ಉತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ ಅಂಚಟಗೇರಿ(Eresh anchatageri) ಅವರು ಚಾಲನೆ ನೀಡಿದರು. ಅಕ್ಟೋಬರ್ 17 ರಿಂದ ಅಕ್ಟೋಬರ್ 26 ರವರೆಗೆ ಮೂಬೈಲ್ ಉತ್ಸವ ನಡೆಸಲಾಗುತ್ತಿದೆ. ಧಾರವಾಡ(Dharwad)ದಲ್ಲಿ ಮೊಬೈಲ್ ಉತ್ಸವ 2022ರ ಉದ್ದೇಶ ಗ್ರಾಹಕರೊಂದಿಗೆ ನೇರ ಸಂವಾದ ಹೊಂದುವುದು.ಮತ್ತು ಉತ್ಪನ್ನಗಳ ಗುಣಮಟ್ಟ ಮತ್ತು ಮಾರಾಟದ ನಂತರದ ಸೇವೆಗಳನ್ನು ಒಳಗೊಂಡಿರುವ ಮೂಬೈಲ್ ಗಳನ್ನ ಆನ್ ಲೈನ್ ಮತ್ತು ಆಫ್ ಲೈನ್ ಖರೀದಿಯ ನಡುವಿನ ವ್ಯತ್ಯಾಸವನ್ನು ಸಹ ಜನರೊಂದಿಗೆ ನೇರ ಸಂವಾದ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಮೊಬೈಲ್ ಉತ್ಸವ ನಡೆಸಲಾಗುತ್ತಿದೆ.

 ಮೊಬೈಲ್ ಉತ್ಸವಕ್ಕಾಗಿ ಟಿಕಾರೆ ರೋಡ್ ಬಣ್ಣ ಬಣ್ಣದ ಲೈಟುಗಳೊಂದಿಗೆ ಅಲಂಕಾರಗೊಂಡಿದೆ. ವಿಶೇಷವಾಗಿ ಧಾರವಾಡ ಗ್ರಾಮಿಣ ಭಾಗದಿಂದ ಬರುವ ಜನರಿಗೆ ಮೂಬೈಲ್ ಬಗ್ಗೆ ಮಾಹಿತಿ ನೀಡಿ ಸರಿಯಾಗಿ ಕಡಿಮೆ ದರದಲ್ಲಿ ಮೊಬೈಲ್ ಖರೀದಿಸಲು ಸಹಾಯ ಮಾಡಲು ಸುಮಾರು ಮೂವತ್ತು ಮೂಬೈಲ್ ಶಾಪ್ ಗಳು ಮುಂದೆ ಬಂದಿದ್ದಾರೆ.

ಇನ್ನು ಕೇವಲ 8 ದಿನ ದೀಪಾವಳಿ ಇರುವ ಮುನ್ನವೇ ಟಿಕಾರ ರಸ್ತೆ ಅಲಂಕೃತಗೊಂಡಿದೆ. ಗ್ರಾಹಕರನ್ನು ಆಕರ್ಷಿಸುತ್ತದೆ. ಬಡವರ ಕೈಗೆಟುಕುವಂಥ ಬೆಲೆಯಲ್ಲಿ ಮೊಬೈಲ್‌ಗಳು ಇಲ್ಲಿ ಮಾರಾಟವಾಗುತ್ತವೆ. ಹೀಗಾಗಿ ಮೊಬೈಲ್ ಉತ್ಸವಕ್ಕೆ ಜನರು ಕಾತುರದಿಂದ ಕಾಯುವಂತೆ ಮಾಡಿದೆ. ತಮ್ಮ ಬಜೆಟ್‌ಗೆ ಸರಿಹೊಂದುವ ಮೊಬೈಲ್ ಖರೀದಿಸಲು ಜನರು ತುದಿಗಾಲಮೇಲೆ ನಿಂತಿದ್ದಾರೆ.  ಧಾರವಾಡ ಟಿಕಾರೆ ರಸ್ತೆಯಲ್ಲಿ ದೀಪಾವಳಿ ಪ್ರಯುಕ್ತ ಏರ್ಪಡಿಸಲಾಗಿದ್ದ ಧಾರವಾಡ ಮೊಬೈಲ್ ಉತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಉದ್ಘಾಟಿಸಿ ಚಾಲನೆ ನೀಡಿದ್ದಾರೆ.

27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯಗ್ರಹಣ… ಪರಿಣಾಮವೇನು?

ದೀಪಾವಳಿ ಪ್ರಯುಕ್ತ ಅವಳಿನಗರಗಳ ನಾಗರಿಕರು ವಿಶೇಷ ರಿಯಾಯಿತಿ ದರಗಳಲ್ಲಿ ಮೊಬೈಲ್ ಫೋನ್ ಗಳನ್ನು ಖರೀದಿಸಲು. ಮೊಬೈಲ್ ಉತ್ಸವ ಸದುಪಯೋಗವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ಶಂಭು ಸಾಲಿಮನಿ ರವರು, ಶ್ರೀ ಸುದೀಪ ಸಾಂಗ್ಲಿಕರ ರವರು, ಮೊಬೈಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ