ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಟ್ಟು ಸರ್ಕಾರ ಚುನಾವಣೆಗೆ ಹೋಗುತ್ತೆ ಎನ್ನುವ ಮೂಲಕ ಸರ್ಕಾರ ಇದೇ ಅವಧಿಯಲ್ಲಿ ಸಮಾಜಕ್ಕೆ 2A ಮೀಸಲಾತಿ ಕೊಡಲಿದೆ ಅಂತಾ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗ (ಅ.17) : ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಟ್ಟು ಸರ್ಕಾರ ಚುನಾವಣೆಗೆ ಹೋಗುತ್ತೆ ಎನ್ನುವ ಮೂಲಕ ಸರ್ಕಾರ ಇದೇ ಅವಧಿಯಲ್ಲಿ ಸಮಾಜಕ್ಕೆ 2A ಮೀಸಲಾತಿ ಕೊಡಲಿದೆ ಅಂತಾ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಬಾಲಚಂದ್ರ ಬೆಂಬಲ
undefined
ಗದಗ(Gadag) ನಗರದಲ್ಲಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮಾಜಕ್ಕೆ ಮೀಸಲಾತಿ ನೀಡುವ ವಾತಾವರಣ ನಿರ್ಮಾಣವಾಗಿದೆ.. ಪಂಚಮಸಾಲಿ(Panchamasali) ಸಮುದಾಯಕ್ಕೆ ನೂರಕ್ಕೆ ನೂರು ಮೀಸಲಾತಿ ಸಿಗಲಿದೆ. ಚುನಾವಣೆ ಮಾರ್ಚ್ ತಿಂಗಳಲ್ಲಿ ಆಗುತ್ತದೆ. ಚುನಾವಣೆ ಪೂರ್ವದಲ್ಲೇ ಸರ್ಕಾರ ಮೀಸಲಾತಿ ಕೊಟ್ಟೆ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಹೋರಾಟ ಮಾಡಿದ್ರೆ ದೂರದೃಷ್ಟಿ ಇಟ್ಟುಕೊಂಡೇ ಹೋರಾಟ ಮಾಡಬೇಕಾಗುತ್ತದೆ.. ಕುಲಶಾಸ್ತ್ರ ಅಧ್ಯಯನ ವರದಿ ಇಲ್ದೆ ಘೋಷಣೆ ಮಾಡಿದ್ರೆ ಕಾನೂನು ತೊಡಕು ಆಗುತ್ತವೆ. ಮೀಸಲಾತಿ ಘೋಷಣೆ ಮಾಡಲೇಬೇಕು ವರದಿಯನ್ನು ತಗೆದುಕೊಂಡು ಘೋಷಣೆ ಮಾಡಬೇಕೆಂಬುದು ನಮ್ಮ ಒತ್ತಾಯ.ಈ ಸರ್ಕಾರ ಇರುತ್ತೆ, ಇನ್ನೊಂದು ಸರ್ಕಾರ ಬರುತ್ತೆ. ಸರಿಯಾದ ಕ್ರಮದಲ್ಲಿ ಮೀಸಲಾತಿ ಘೋಷಣೆಯಾಗ್ಬೇಕು ಎಂದರು.
ನಮ್ಮ ಹೋರಾಟಕ್ಕೆ 28 ವರ್ಷಗಳ ಕಳೆದಿದೆ. ಸರ್ಕಾರ ಮತ್ತೆ ಜಾರಿಕೊಳ್ಳುವ ಪ್ರಯತ್ನ ಮಾಡಬಾರದು. ಮುಖ್ಯಮಂತ್ರಿಗಳು ನಮ್ಮವರೇ ಇದ್ದಾರೆ. ಕ್ಲಿಷ್ಟಕರ ವಾತಾವರಣದಲ್ಲೇ SC-ST ಮೀಸಲಾತಿ ಘೋಷಣೆ ಮಾಡಲಾಗಿದೆ.
ಈಗಾಗಲೇ SC STಗೆ ಪರ್ಸೆಂಟೇಜ್ ಹೆಚ್ಚಿಗೆ ಮಾಡಿದ್ದರು. ನಾಗಮೋಹನದಾಸ್(Nagmohandas report) ವರದಿವಕೊಟ್ಟು ಎರಡು ವರ್ಷ ಆದ ಮೇಲೆ ಸತತವಾಗಿ ಹೋರಾಟ ಮಾಡಿದ ಮೇಲೆ ಮೀಸಲಾತಿ ಹೆಚ್ಚಳ ಆಗಿದೆ. ನಮ್ಮದೂ ವರದಿ ಬರಬೇಕಿದೆ ಆ ವರದಿ ತಡ ಮಾಡಬೇಡಿ ಅಂತಾ ಜಯಪ್ರಕಾಶ ಹೆಗಡೆ(Jayaprakash hegde) ಹೇಳಿದ್ದೇನೆ. ಆದಷ್ಟು ಬೇಗ ವರದಿ ತರಸಿ ಮೀಸಲಾತಿ ಘೋಷಣೆ ಮಾಡಿ ಅಂತಾ ಸರ್ಕಾರಕ್ಕೆ ಹೇಳುತ್ತಿದೇವೆ..
ಮೀಸಲಾತಿ ಪಡೆದುಕೊಳ್ಳುವ ದೃಷ್ಟಿಯಿಂದ ಜನ ಜಾಗೃತಿ ಅಭಿಯಾನ ಆರಂಭ:
ಈಗಾಗಲೇ ಕುಲಶಾಸ್ತ್ರ ಅಧ್ಯಯನ (genealogy Study) ನಡೆಯುತ್ತಿದೆ. 18 ಜಿಲ್ಲೆಯಲ್ಲಿ ಮುಗಿದಿದೆ, ಕುಲಶಾಸ್ತ್ರ ಅಧ್ಯಯನ ವರದಿ ತರಿಸಿಕೊಂಡು ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಲಿ. ಕೇಂದ್ರದಲ್ಲಿ ಓಬಿಸಿ ರಾಜ್ಯದಲ್ಲಿ 2 ಎ ಮೀಸಲಾತಿ ಘೋಷಣೆ ಮಾಡಬೇಕು. ಸರ್ಕಾರಕ್ಕೆ ಜನ ಜಾಗೃತಿ ಮೂಲಕ ಒತ್ತಾಯ ತರುವ ಕಾರ್ಯಕ್ರಮ ಮಾಡುತ್ತಿದೇವೆ ಅಂತಾ ಶ್ರೀಗಳು ತಿಳಿಸಿದ್ರು..
ಸರ್ಕಾರಕ್ಕೆ ಇದೂವರೆಗೆ ಗಡುವು ಕೊಟ್ಟಿರಲಿಲ್ಲ. ಕಾನೂನಾತ್ಮಕ, ಸಂವಿಧಾನಾತ್ಮಕ ತೊಡಕುಗಳು ಆಗಬಾರದೆಂಬ ಕಾರಣಕ್ಕೆ ಸರ್ಕಾರಕ್ಕೆ ಸಮಯ ಕೊಟ್ಟಿದೇವೆ. ಈಗಾಗಲೇ ಸಿಎಂ ಜೊತೆಗೆ ಮಾತಾಡಿದ್ದೇವೆ. ಸಿಎಂ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕುಲಶಾಸ್ತ್ರದ ವರದಿ ಬಂದ ತಕ್ಷಣ ಕೊಡುತ್ತೇವೆ ಅಂದಿದ್ದಾರೆ ಅಂತಾ ಹೇಳಿದರು.
ಮೀಸಲಾತಿ ಘೋಷಣೆ ಮಾಡದೇ ಹೋದ್ರೆ ವಿಧಾನಸೌಧ(Vidhanasoudha)ಕ್ಕೆ ಮುತ್ತಿಗೆ ಹಾಕುತ್ತೇವೆ ಜಯ ಮೃತ್ಯುಂಜಯ ಶ್ರೀ(Jayamrityunjaya shree)ಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜೀ, ನಾವು ಮುತ್ತಿಗೆ ಹಾಕೋ ಹೋರಾಟ ಮಾಡುವವರಲ್ಲ. ನಮ್ಮದು ಸಾತ್ವಿಕ ಮತ್ತು ಸಂವಿಧಾನಾತ್ಮಕ ಹೋರಾಟ. ಕಾನೂನಾತ್ಮಕ ಹೋರಾಟದಲ್ಲಿ ನಾವು ಬಹಳ ಗಟ್ಟಿಯಾಗಿದ್ದೇವೆ. ಯಾವುದೇ ಹೋರಾಟ ಮಾಡುವಾಗ ಮತ್ತೊಬ್ಬರನ್ನ ಟೀಕೆ ಮಾಡೋದು, ಸರ್ಕಾರವನ್ನ ಬೈಯೋ ಆಸಕ್ತಿ ನನಗಿಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವ ವಿಚಾರದಲ್ಲಿ ಬದ್ಧವಾಗಿದೇವೆ.. ಸ್ಟ್ರಾಂಗ್ ಆಗಿ ಸರ್ಕಾರದ ಮೇಲೆ ಪ್ರೆಷರ್ ತರುವ ಕೆಲಸ ಮಾಡುತ್ತಿದೇವೆ. ಆತಂರಿಕವಾಗಿ ಶಾಸಕರು ಸಚಿವರು ಕೆಲಸ ಮಾಡುತ್ತಿದ್ದಾರೆ.. ಬಾಹ್ಯವಾಗಿ ನಾವು ಹೋರಾಟ ಮಾಡುತ್ತಿದೇವೆ. 1994 ರಿಂದ ಆರಂಭವಾದಂತಹ ಹೋರಾಟ, ಇದು ಇವತ್ತು ನಿನ್ನೆದು ಅಲ್ಲ ಎಂದರು.
ಪಂಚಮಸಾಲಿ ಮೀಸಲಿಗೆ ಪ್ರಾಮಾಣಿಕ ಯತ್ನ: ಯಡಿಯೂರಪ್ಪ
ಹರಿಹರ ಪಂಚಮಸಾಲಿ ಪೀಠದ ಹೋರಾಟದಿಂದಲೇ ಸಮುದಾಯಕ್ಕೆ 3 ಬಿ ಮೀಸಲಾತಿ ಸಿಕ್ಕಿದೆ. ಆವಾಗಲೇ 2 ಎ ಮೀಸಲಾತಿ ಸಿಗಬೇಕಿತ್ತು.. ಕಾರಣಾಂತರಗಳಿಂದ ಸಿಗಲಿಲ್ಲ. ಯಾರನ್ನು ಟೀಕೆ ಮಾಡದೆ ಪ್ರೀತಿಯಿಂದ ಅವರ ಹೃದಯವನ್ನು ಗೆದ್ದುಕೊಂಡು ಮೀಸಲಾತಿ ಪಡೆಯುತ್ತೇವೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ರು..