Dakshina Kannada; 15 ಸಾವಿರ ಕಿ.ಮೀ. ಸೈಕಲ್‌ ಯಾತ್ರೆಗೆ ಸಿದ್ಧರಾದ ಕನ್ಯಾನದ ಯುವಕ

By Kannadaprabha News  |  First Published Oct 17, 2022, 2:12 PM IST

15 ಸಾವಿರ ಕಿ.ಮೀ. ಸೈಕಲ್‌ ಯಾತ್ರೆಗೆ ಸಿದ್ಧರಾದ ವಿಟ್ಲದ ಕನ್ಯಾನದ ಯುವಕ. ಅ. 20ರಂದು ಕೇರಳದಿಂದ ಯಾತ್ರೆ ಆರಂಭ, 200 ದಿನಗಳಲ್ಲಿ 10 ದೇಶಗಳನ್ನು ದಾಟಿ ಈಜಿಪ್ಟ್‌ಗೆ ತೆರಳಲಿರುವ ಹಾಫಿಲ್‌ ಅಹ್ಮದ್‌.


ಮಂಗಳೂರು (ಅ.17): ಬರೋಬ್ಬರಿ 10 ದೇಶಗಳ ಮೂಲಕ ಸುಮಾರು 15 ಸಾವಿರ ಕಿ.ಮೀ.ಗೂ ಅಧಿಕ ದೂರವನ್ನು ಸೈಕಲ್‌ನಲ್ಲೇ ಕ್ರಮಿಸಿ ಹೊಸ ದಾಖಲೆ ಸೃಷ್ಟಿಸಲು ಬಂಟ್ವಾಳದ ಕನ್ಯಾನ ಗ್ರಾಮದ ಬೈರಿಕಟ್ಟೆಯ 21ರ ಹರೆಯದ ಯುವಕ ಹಾಫಿಲ್‌ ಅಹ್ಮದ್‌ ಸಾಬಿತ್‌ ಸಿದ್ಧರಾಗಿದ್ದಾರೆ. ಸುಮಾರು 200 ದಿನಗಳ ಈ ಸೈಕಲ್‌ ಯಾತ್ರೆಯನ್ನು ಅ.20ರಂದು ತಿರುವನಂತಪುರಂನಿಂದ ಆರಂಭಿಸಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಫಿಲ್‌ ಅಹ್ಮದ್‌, ಉನ್ನತ ಶಿಕ್ಷಣಕ್ಕಾಗಿ ಈಜಿಪ್ಟ್‌ನ ಅಲ್‌ ಅಝ್ಹರ್‌ ಯೂನಿವರ್ಸಿಟಿಗೆ ತೆರಳುವುದು ಹಾಗೂ ತನ್ನ ತಾಯಿಯ ಕನಸಾದ ಮದೀನಾದಲ್ಲಿರುವ ಪ್ರವಾದಿಯವರ ಪುಣ್ಯ ಸಮಾಧಿಯನ್ನು ಸಂದರ್ಶಿಸುವುದು ಈ ಸೈಕಲ್‌ ಯಾತ್ರೆಯ ಮುಖ್ಯ ಉದ್ದೇಶ. ಇದರೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು. ಪ್ರಪಂಚದ 2 ಖಂಡಗಳು, 10 ದೇಶಗಳನ್ನು ದಾಟಿ ಈ ಸೈಕಲ್‌ ಯಾತ್ರೆ ನಡೆಯಲಿದೆ. ಭಾರತ, ಪಾಕಿಸ್ತಾನ, ಇರಾನ್‌, ಇರಾಕ್‌, ಕುವೈತ್‌, ಸೌದಿ ಅರೇಬಿಯಾ, ಯುಎಇ, ಒಮಾನ್‌, ಜೋರ್ಡನ್‌, ಇಸ್ರೇಲ್‌ ಹಾಗೂ ಈಜಿಪ್ಟ್‌ ದೇಶಗಳಲ್ಲಿ ಸಂಚರಿಸಲಿದ್ದೇನೆ. ಭಾರತದಲ್ಲಿ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಹರ್ಯಾಣ, ಪಂಜಾಬ್‌, ಜಮ್ಮು ಕಾಶ್ಮೀರ, ಲಡಾಖ್‌ ಮಾರ್ಗವಾಗಿ ಸಾಗಲಿದ್ದೇನೆ ಎಂದರು.

ಬ್ಯಾಟರಿ ಚಾಲಿತ ಬೈಸಿಕಲ್‌ ತಯಾರಿಸಿದ ವಿದ್ಯಾರ್ಥಿಗಳು

Tap to resize

Latest Videos

ಹಾಫಿಲ್‌ ಅಹ್ಮದ್‌ ಸಾಬಿತ್‌ ಅವರು ದೇಲಂತಬೆಟ್ಟುವಿನ ದ.ಕ. ಜಿಲ್ಲಾ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಮೂರನೇ ತರಗತಿ ಕಲಿತ ಬಳಿಕ ಧಾರ್ಮಿಕ ಶಿಕ್ಷಣ ಮುಂದುವರಿಸಿದ್ದರು. 9ನೇ ವಯಸ್ಸಿನಲ್ಲಿ ಮಂಜೇಶ್ವರ ದಾರುಲ್‌ ಕುರ್‌ಆನ್‌ ಹಿಫ್‌್ಲ ಕಾಲೇಜಿನಲ್ಲಿ ಕುರಾನ್‌ ಕಂಠಪಾಠ ಆರಂಭಿಸಿದ್ದರು. ಬಳಿಕ ಕುಂಬಳೆ ಇಮಾಂ ಶಾಫಿ ಅಕಾಡೆಮಿಯಲ್ಲಿ ಹಿಫ್‌್ಲ ಹಾಗೂ ಧಾರ್ಮಿಕ ಶಿಕ್ಷಣ ಮುಂದುವರಿಸಿದ್ದ ಅವರು, ಕುರ್‌ಆನ್‌ ಕಂಠಪಾಠ ಪೂರ್ತಿಗೊಳಿಸಿ ಹಾಫಿಲ್‌ ಆಗಿ ಹೊರಹೊಮ್ಮಿದ್ದಾರೆ.

ಸೈಕಲ್‌ನಲ್ಲಿ ಜೊಮ್ಯಾಟೋ ಆಹಾರ ಡೆಲಿವರಿ ಮಾಡುವ 7 ವರ್ಷದ ಬಾಲಕ: ರಾತ್ರಿ 11 ಗಂಟೆವರೆಗೆ ಕೆಲಸ..!

ಮುಂದೆ ಈಜಿಪ್ಟ್‌ನಲ್ಲಿ ಹದೀಸ್‌ ಧಾರ್ಮಿಕ ಶಿಕ್ಷಣಕ್ಕೆ ಈಗಾಗಲೇ ಸೀಟ್‌ ಪಡೆದುಕೊಂಡಿದ್ದಾರೆ. ಸೈಕಲ್‌ ಯಾತ್ರೆಯ ಮೂಲಕ ಈಜಿಪ್ಟ್‌ ತಲುಪಿದ ಬಳಿಕ ತಮ್ಮ ಶಿಕ್ಷಣ ಮುಂದುವರಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ ಫ್ರೆಂಡ್‌್ಸ ಪ್ರಧಾನ ಕಾರ್ಯದರ್ಶಿ ರಶೀಗ್‌ ವಿಟ್ಲ, ಪ್ರಮುಖರಾದ ಅಬೂಬಕ್ಕರ್‌ ಉಪ್ಪಿನಂಗಡಿ, ಉಬೈದ್‌ ವಿಟ್ಲ ಇದ್ದರು.

click me!