ಇಬ್ಬರು ಯುವಕರು ಮೊಬೈಲ್ ಹಿಡಿದುಕೊಂಡು ನೋಡುತ್ತಿದ್ದಾಗ ಕೈಯಲ್ಲಿಯೇ ಬ್ಲಾಸ್ಟ್ ಆಗಿರುವ ಘಟನೆ ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ನಡೆದಿದೆ.
ಹಾವೇರಿ (ಆ.01): ಇಬ್ಬರು ಯುವಕರು ಮೊಬೈಲ್ ಹಿಡಿದುಕೊಂಡು ನೋಡುತ್ತಿದ್ದಾಗ ಕೈಯಲ್ಲಿಯೇ ಬ್ಲಾಸ್ಟ್ ಆಗಿರುವ ಘಟನೆ ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ನಡೆದಿದೆ. ಸದ್ಯ ಸ್ವಲ್ಪದರಲ್ಲೇ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಮೊಬೈಲ್ ರಿಪೇರಿ ಸಂದರ್ಭದಲ್ಲಿ ಕೈಯಲ್ಲೇ ಮೊಬೈಲ್ ಬ್ಲಾಸ್ಟ್ ಆಗಿದೆ. ಮೊಬೈಲ್ ಪರಿಶೀಲಿಸುತ್ತಿದ್ದ ವೇಳೆಯೇ ಕೈಯಲ್ಲಿ ಮೊಬೈಲ್ ಪಟಾಕಿಯಂತೆ ಸಿಡಿದಿದೆ. ಇನ್ನು ಸ್ವಲ್ಪ ಬೆಂಕಿ ಹೊತ್ತಿಕೊಂಡಿದ್ರೂ ಯುವಕರ ಮುಖಗಳೇ ಸುಟ್ಟು ಕರಕಲಾಗ್ತಿದ್ದವು. ಮೊಬೈಲ್ ಬ್ಲಾಸ್ಟ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ಮಿಕರ ಮೊಬೈಲ್ ಕದಿಯುತ್ತಿದ್ದ ಕಿಡಿಗೇಡಿಯ ಬಂಧನ: ಶೆಡ್‌ಗಳಲ್ಲಿ ಆಯಾಸಗೊಂಡು ನಿದ್ರೆಗೆ ಜಾರುವ ಕಾರ್ಮಿಕರಿಂದ ಮೊಬೈಲ್ ದೋಚುತ್ತಿದ್ದ ಕಿಡಿಗೇಡಿಯೊಬ್ಬನನ್ನು ವೈಟ್ ಫೀಲ್ಠ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಸಮೀಪದ ನಿವಾಸಿ ಅಬ್ದುಲ್ ರಜಾಕ್ ಬಂಧಿತನಾಗಿದ್ದು, ಆರೋಪಿಯಿಂದ ₹4.5 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವೈಟ್‌ಫೀಲ್ಡ್ ಹತ್ತಿರದ ವಿಜಯನಗರ ಮುಖ್ಯರಸ್ತೆಯಲ್ಲಿ ಕಾರ್ ವಾಶ್ ಅಂಗಡಿಯಲ್ಲಿ ಮಲಗಿದ್ದ ಕೆಲಸಗಾರನ ಮೊಬೈಲ್ ಕಳ್ಳತನ ಬಗ್ಗೆ ತನಿಖೆ ನಡೆಸಿದಾಗ ರಜಾಕ್ ಖಾಕಿ ಬಲೆಗೆ ಬಿದ್ದಿದ್ದಾನೆ.
Gadag: ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಯತ್ನಿಸಿದ್ದ 'ನಕಲಿ ಪೊಲೀಸ್' ಮೇಲೆ ಫೈರಿಂಗ್!
ರಜಾಕ್ ಮೂಲತಃ ಬಿಹಾರ ರಾಜ್ಯದವನಾಗಿದ್ದು, ಹಲವು ವರ್ಷಗಳ ಹಿಂದೆಯೇ ಕೂಲಿ ಅರಸಿ ನಗರಕ್ಕೆ ಆತನ ಕುಟುಂಬ ವಲಸೆ ಬಂದಿತ್ತು. ಕಾಡುಗೋಡಿ ಸಮೀಪದ ತನ್ನ ಕುಟುಂಬದ ಜತೆ ನೆಲೆಸಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಮೊಬೈಲ್ ಕಳ್ಳತನಕ್ಕಿಳಿದಿದ್ದ. ಕೂಲಿ ಕಾರ್ಮಿಕರೇ ರಜಾಕ್ ಗುರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಸ್ತೆ ಕಾಮಗಾರಿ ಬಳಿ ಶೆಡ್‌ಗಳಲ್ಲಿ ಮೈ ಹಣ್ಣಾಗುವಂತೆ ದುಡಿದು ಆಯಾಸಗೊಂಡು ವಿಶ್ರಾಂತಿ ಪಡೆಯುತ್ತಿದ್ದಾಗ ಕಾರ್ಮಿಕರ ಮೊಬೈಲ್‌ಗಳನ್ನು ಆರೋಪಿ ಕಳವು ಮಾಡುತ್ತಿದ್ದ. ಹೀಗೆ ಕದ್ದ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಆತ ಮಾರುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.