ಯಾರ ಅನುಮತಿ ಪಡೆದು ಊರತುಂಬ ದೀಪಾಲಂಕಾರ ಹಾಕಿದ್ದೀರಾ? ಆರೋಗ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ? ಕೊರೋನಾ ಮಹಾಸ್ಫೋಟವಾದರೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದ ವಿಶ್ವನಾಥ್| ಯಾವುದೇ ಕಾರಣಕ್ಕೂ ದಸರಾಗೆ ಹೆಚ್ಚಿನ ಜನಸಂದಣಿ ಬೇಡ. ಏನಾದರೂ ಆದಲ್ಲಿ ದಸರಾಗೂ ಕಳಂಕ ಬರಲಿದೆ, ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ವಿಶ್ವನಾಥ್|
ಮೈಸೂರು(ಅ.08): ಮೈಸೂರು ದಸರಾ ಆಚರಿಸಿ ಕೊರೋನಾ ಹೆಚ್ಚಾದರೆ ಜನರೇ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಚ್ಚರಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಅನುಮತಿ ಪಡೆದು ಊರತುಂಬ ಲೈಟ್ (ದೀಪಾಲಂಕಾರ) ಹಾಕಿದ್ದೀರಾ? ಆರೋಗ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ? ಕೊರೋನಾ ಮಹಾಸ್ಫೋಟವಾದರೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದರು. ಯಾವುದೇ ಕಾರಣಕ್ಕೂ ದಸರಾಗೆ ಹೆಚ್ಚಿನ ಜನಸಂದಣಿ ಬೇಡ. ಏನಾದರೂ ಆದಲ್ಲಿ ದಸರಾಗೂ ಕಳಂಕ ಬರಲಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
undefined
'ಬಂಬೂ' ಸವಾರಿ ಮಾಡಲು ಹೊರಟ್ಟಿದ್ದೀರಾ: ವಿಶ್ವನಾಥ್ ಆಕ್ರೋಶ
ಶಾಲೆಯ ಆರಂಭಕ್ಕೆ ಆತುರ ಬೇಡ:
ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಆತುರ ಬೇಡ, ಈ ವಿಚಾರದಲ್ಲಿ ಅಧಿಕಾರಿಗಳು, ಜನಪ್ರನಿಧಿಗಳ ಸಲಹೆ ಮುಖ್ಯ ಅಲ್ಲ. ಪೋಷಕರ ಸಲಹೆ ಮುಖ್ಯ. ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ನಂತರ ನಿರ್ಧರಿಸಿ ಎಂದರು.