ಕಾಡಲ್ಲಿ ಎಮ್ಮೆ ಮೇಯಿಸುತ್ತಿದ್ದ ಮಹಿಳೆ ಕೊಲೆ : ಬಂಧಿತರಿಂದ ಬಯಲಾಯ್ತು ರಹಸ್ಯ

By Kannadaprabha NewsFirst Published Oct 8, 2020, 11:14 AM IST
Highlights

ಕಾಡಲ್ಲಿ ಎಮ್ಮೆ ಮೇಯಿಸುತ್ತಿದ್ದ ಮಹಿಳೆ ಕೊಲೆ ಆದಳು.  ಬಂಧಿತರಿಂದ ಕೊಲೆ ರಹಸ್ಯ ಬಯಲಾಗಿದೆ 

 ಟಿ. ನರಸೀಪುರ (ಅ.08):  ಎಮ್ಮೆ ಮೇಯಿಸುತ್ತಿದ್ದ ಮಹಿಳೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳನ್ನು ಬನ್ನೂರು ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ ಅ. ಮದನ್‌ (20), ನಾಗೇಂದ್ರ ಅ. ಅಪ್ಪು (20) ಬಂಧಿತ ಆರೋಪಿಗಳು.

ಬನ್ನೂರು ಹೋಬಳಿ ನುಗ್ಗೇಹಳ್ಳಿಯ ಮಹದೇವಿ ಕೋಂ ಪುಟ್ಟಸ್ವಾಮಿ (50) ಎಂಬವರು ಆ. 18 ರಂದು ಗ್ರಾಮದ ಹೊರವಲಯದ ತೋಪಿನಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ವೇಳೆ ಆರೋಪಿಗಳು ಆಕೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕಿವಿ ಓಲೆ, ಮಾಂಗಲ್ಯ ಹಾಗೂ ಕರಿಮಣಿ ಸರವನ್ನು ಕಸಿದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಯಾಂಡಲ್‌ವುಡ್‌ ನಟರ 3 ಮಕ್ಕಳ ಡ್ರಗ್ಸ್‌ ನಂಟು: ಸಂಬ​ರಗಿ ಹೊಸ ‘ಬಾಂಬ್‌​’ .

ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಎಸ್ಪಿ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಎಸ್ಪಿ ಶಿವಕುಮಾರ್‌, ನಂಜನಗೂಡು ವಿಭಾಗದ ಡಿವೈಎಸ್ಪಿ ಪ್ರಭಾಕರ್‌ರಾವ್‌ ಸಿಂಧೆ ಮಾರ್ಗದರ್ಶನದಲ್ಲಿ ಟಿ. ನರಸೀಪುರ ಸಿಪಿಐ ಎಂ.ಆರ್‌. ಲವ ಮತ್ತು ಬನ್ನೂರು ಎಸ್‌ಐ ಬಿ.ಎನ್‌. ಪುನೀತ್‌ ಹಾಗೂ ಸಿಬ್ಬಂದಿ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡವು ವೈಜ್ಞಾನಿಕ ರೀತಿಯ ಪತ್ತೆ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಯಲಹಂಕ ಸಮೀಪ ಆರೋಪಿಗಳನ್ನು ಬಂಧಿಸಿ. ಓಲೆ, ಕರಿ ಮಣಿ, ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.

ಮೃತ ಮಹದೇವಿ ಎಮ್ಮೆಗಳನ್ನು ಮೇಯಿಸಲು ತೋಪಿನ ಹತ್ತಿರ ಒಬ್ಬಂಟಿಯಾಗಿ ಬರುವುದನ್ನು ಗಮನಿಸಿ ಹೊಂಚು ಹಾಕಿ ಚಿನ್ನಾಭರಣಕ್ಕಾಗಿಯೇ ಕೊಲೆ ಮಾಡಿದ್ದರೆಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ಮುಖ್ಯಪೇದೆಗಳಾದ ಪ್ರಭಾಕರ್‌, ಸತೀಶ್‌, ರಮೇಶ್‌, ಭಾಸ್ಕರ್‌, ನಾರಾಯಣ , ಮಂಜುನಾಥ್‌, ಸೋಮಶೇಖರ್‌, ಪೇದೆಗಳಾದ ಇಸ್ಮಾಯಿಲ…, ಜಿ.ಕೆ. ಮಂಜು, ಬಿ.ಎನ್‌. ಬೈರಪ್ಪ, ಅಲ್ಲಾವುದ್ದೀನ್‌, ಗಿರೀಶ್‌, ಗೋಪಾಲಸ್ವಾಮಿ, ಮಹಳಾ ಪೇದೆ ಧನಲಕ್ಷ್ಮೇ, ಡಿಪಿಒ ತಾಂತ್ರಿಕ ವಿಭಾಗದ ಮುಖ್ಯಪೇದೆ ವಸಂತ, ಮಹಿಳಾ ಪೊಲೀಸ್‌ ಸುನೀತಾ ಹಾಗೂ ಚಾಲಕರಾದ ಮಹದೇವ್‌, ಪುಟ್ಟಸ್ವಾಮಿ, ಮಹಿಳಾ ಪೊಲೀಸ್‌ ರೇಖಾ ಅವರು ಭಾಗವಹಿಸಿದ್ದರು.

ಎಸ್ಪಿ ರಿಷ್ಯಂತ್‌ ಅವರು ಕಾರ್ಯಾಚರಣೆ ಪ್ರಶಂಶಿಸಿ ನಗದು ಬಹುಮಾನ ಘೋಷಿಸಿದ್ದಾರೆ.

click me!