'BSYದು ತುಘಲಕ್‌ ಸರ್ಕಾ​ರ​, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸ್ತಾರೆ'

By Kannadaprabha News  |  First Published May 25, 2020, 3:26 PM IST

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರ ಸ್ಪಂದಿಸುವಲ್ಲಿ ಸರ್ಕಾರ ವಿಫಲ| ರಂಜಾನ್‌ ಪ್ರಯುಕ್ತ ತರಕಾರಿ ಕಿಟ್‌ ವಿತರಿಸಿದ ಎಚ್‌.ಎಂ.​ರೇ​ವಣ್ಣ| ಕೇಂದ್ರ ಸರ್ಕಾರ ಕೋಟಿ ರೂ. ನೀಡುತ್ತಿದೆ ಎಂದು ಬುರುಡೆ ಬಿಟ್ಟರೆ ಯಾವ ಸಮುದಾಯಕ್ಕೂ ಅನುಕೂಲವಾಗಿಲ್ಲ| 


ಮಾಗಡಿ(ಮೇ.25): ಕೊರೋನಾ ನಿಯಂತ್ರಿಸಲು ಸಾಮಾಜಿಕ ಅಂತರ ಒಂದೇ ಮದ್ದು ಎಂದು ವಿಧಾನಪರಿಷತ್‌ ಸದಸ್ಯ ಎಚ್‌ ಎಂ ರೇವಣ್ಣ ಹೇಳಿ​ದ್ದಾರೆ.

ಮಾಗಡಿ ತೋಟದ ಮನೆಯಲ್ಲಿ ರಂಜಾನ್‌ ಹಬ್ಬದ ಪ್ರಯುಕ್ತ 800 ಮಂದಿಗೆ ತರಕಾರಿ ಕಿಟ್‌ ವಿತರಿಸಿ ಮಾತನಾಡಿ, ಕೊರೋನಾ ವೇಳೆ ಲಾಕ್‌ಡೌನ್‌ನಿಂದಾಗಿ ಕೂಲಿ ಕಾರ್ಮಿಕರು, ಬಡವರು, ನಿರಾಶ್ರಿತರು ತೊಂದರೆ ಪಡುತ್ತಿದ್ದ ವೇಳೆ ವಿವಿಧ ಸಂಘ-ಸಂಸ್ಥೆಗಳು, ಮಾಜಿ, ಹಾಲಿ ಶಾಸಕರುಗಳು ಜವಬ್ದಾರಿಯಿಂದ ಅವರ ನೆರವಿಗೆ ಧಾವಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಸಂಕ​ಷ್ಟ​ದ​ಲ್ಲಿ​ದ್ದ​ವ​ರಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಟೀಕಿ​ಸಿದ್ದಾರೆ.

Tap to resize

Latest Videos

ಕೊರೋನಾ ಭೀತಿ ನಡುವೆ ರಾಜಕೀಯ ಕ್ರಾಂತಿ: ಎಚ್‌ಡಿಕೆ, ಡಿಕೆಶಿ ಹಣಿಯಲು ಗೇಮ್ ಪ್ಲಾನ್

ಸಚಿವರು ಮತ್ತು ಮುಖ್ಯಮಂತ್ರಿ ಹೊಂದಾಣಿಕೆ ಇಲ್ಲದೆ ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಕೋಟಿ ರೂ. ನೀಡುತ್ತಿದೆ ಎಂದು ಬುರುಡೆ ಬಿಟ್ಟರೆ ಯಾವ ಸಮುದಾಯಕ್ಕೂ ಅನುಕೂಲವಾಗಿಲ್ಲ. ಇದೊಂದು ತುಘಲಕ್‌ ಸರ್ಕಾ​ರ​ವಾ​ಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಜನರೆ ತಕ್ಕ ಪಾಠ ಕಲಿಸಲಿದ್ದಾರೆ  ಸರ್ಕಾ​ರ​ವಾ​ಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಜನರೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರ​ದ ವಿರುದ್ಧ ಕಿಡಿಕಾರಿದರು.

ಕಳೆದ 45 ದಿನಗಳಿಂದ ಬಡವರನ್ನು ಗುರುತಿಸಿ ಮುಸ್ಲಿಂ ಸಮುದಾಯ, ಮಡಿವಾಳ ಸಮಾಜ, ಸವಿತಾ ಸಮಾಜ, ಪೋಟೋ ಗ್ರಾಫರ್‌ ಸಂಘ, ವಿಶ್ವಕರ್ಮ ಸಮಾಜ, ಅಂಗವಿಕಲರು, ಕುಶಲ ಕರ್ಮಿಗಳು, ಆಟೋ ಚಾಲಕರು ಸೇರಿದಂತೆ ಪ್ರತಿಯೊಂದು ಸಮಾಜದ ಬಡವರನ್ನು ಗುರುತಿಸಿ ಆಹಾರದ ಕಿಟ್‌ ವಿತರಿಸಲಾಗಿದೆ. ಬೆಂಗಳೂರಿನ ಯಶವಂತಪುರ ವಾರ್ಡ್‌ ತರಕಾರಿ ಸಗಟು ವ್ಯಾಪಾರಿ ಸಂಘದ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಹೂಜೇನಹಳ್ಳಿ ಸ್ವಾಮಿ ಅವರ ಸಹಕಾರದಿಂದ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಹಣ್ಣು, ತರಕಾರಿ ವಿತರಿಸಲಾಗುತ್ತಿದೆ ಎಂದರು.

ವತ್ಸಲಾ ರೇವಣ್ಣ, ಶಶಾಂಕ್‌ ರೇವಣ್ಣ, ಶ್ರೀದೇವಿ ಶಶಾಂಕ್‌, ಪುರಸಭೆ ಸದಸ್ಯರಾದ ಎಚ್‌ ಜೆ ಪುರುಷೋತ್ತಮ ರಿಯಾಜ್‌, ಶಿವಕುಮಾರ್‌, ಶಬ್ಬೀರ್‌ ಪಾಷ, ಮಾಜಿ ಸದಸ್ಯ ನರಸಿಂಹಮೂರ್ತಿ, ಮಾಜಿ ಸದಸ್ಯ ಸುರೇಶ್‌, ತಾ.ಪಂ ಮಾಜಿ ಅಧ್ಯಕ್ಷ ಭೋಜಣ್ಣ, ಕಾರ್ಮಿಕ ಮುಖಂಡ ಬಸವರಾಜು, ಮುಖಂಡರಾದ ತೇಜೇಶ್‌ ಕುಮಾರ್‌, ಎಲ್‌ಐಸಿ ಶಿವಕುಮಾರ್‌, ಟಿ ಎಸ್‌ ಬಾಲರಾಜು, ಮೌಲಾ, ಹಬೀದ್‌, ಇಲಿಯಾಸ್‌, ಅಲ್ಲಾಬಕ್ಷ್ ಜಮ್ಮಿ ಹಾಜ​ರಿ​ದ್ದರು.
 

click me!