ಮಾವು ಆನ್‌ಲೈನ್‌ ಬುಕಿಂಗ್‌, ಹೋಂ ಡೆಲಿವರಿ

By Kannadaprabha NewsFirst Published May 25, 2020, 3:00 PM IST
Highlights

ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ಹೇಳಿದ್ದಾರೆ.

ತುಮಕೂರು(ಮೇ 25): ಕೊರೋನಾ ಎಫೆಕ್ಟನಿಂದಾಗಿ ಮಾವಿನ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರಕಟ್ಟೆಗೆ ಮುಕ್ತ ಅವಕಾಶ ದೊರಕದ ಕಾರಣ ಮಾವು ಬೆಳೆದ ರೈತ ಅಕ್ಷರ ಸಹ ಕಂಗಾಲಾಗಿದ್ದಾನೆ.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೊಬಳಿ ದೊಡ್ಡಮಾಲೂರು ನಿವಾಸಿ ರೈತ ಕೆ.ಅಂಜಿನಪ್ಪ 40 ಎಕರೆಯಲ್ಲಿ ಹಲವು ಬಗೆಯ ಮಾವು ಬೆಳೆದಿದ್ದು, ಗುಣಮಟ್ಟಹಾಗೂ ಆನ್‌ಲೈನ್‌ ಸೇವೆಯಿಂದ ಇಲ್ಲಿನ ಮಾವು ರಾಜಧಾನಿ ಬೆಂಗಳೂರಿಗೂ ಹೆಸರು ಮಾಡಿದ್ದು ಈ ಮಾವಿಗೆ ಬೇಡಿಕೆ ಹೆಚ್ಚಿದೆ.

ಮಹಾಮಾರಿ ಕೊರೋನಾ ನಾಶವಾಗಿ ದೇಶದಲ್ಲಿ ಶಾಂತಿ ನೆಲೆಸಲಿ: ಇಕ್ಬಾಲ್ ಅನ್ಸಾರಿ

ತೋಟಗಾರಿಕೆ ಯೋಜನೆಯಡಿ 12 ಲಕ್ಷ ರು. ವೆಚ್ಚದ 53 ಮೀ. ಉದ್ದ 53 ಮೀ. ಅಗಲ ವಿಸ್ತೀರ್ಣದ ಒಂದು ಕೋಟಿ ಲೀ. ನೀರು ಶೇಖರಣೆಗೆ ಸಮುದಾಯ ಕೃಷಿ ಹೊಂಡ ನಿರ್ಮಿಸಿ ಸುಮಾರು 4000 ಸಾವಿರ ಮಾವಿನ ಗಿಡಗಳನ್ನು ಪೋಷಿಸುತ್ತಿದ್ದು ಮ್ಯಾಂಗೋ ಟೋರ್‌ ಮೂಲಕ ಬರುವ ಗ್ರಾಹಕರಿಗೆ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷ ಮಾವಿನ ಸೀಸನ್‌ಲ್ಲಿ ಮಾವು ಮಂಡಳಿ ದರ ನಿಗದಿಪಡಿಸಿ ಚೌಕಾಸಿ ಮಾಡದೆ ಕನಿಷ್ಠ 6ಕೆಜಿ ಮಾವು ಖರೀದಿಸಬೇಕೆಂಬ ಷರತ್ತಿನೊಂದಿಗೆ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆಮಂಡಳಿಯು ಮ್ಯಾಂಗೋ ಪಿಕ್ಕಿಂಗ್‌ ಆಯೋಜಿಸುತ್ತಾ ಬಂದಿದ್ದು, ಸುಮಾರು 300 ಗ್ರಾಹಕರು ಕುಟುಂಬ ಸದಸ್ಯರು ಸಮೇತ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಕೊರೋನಾ ಎಫೆಕ್ಟ್ನಿಂದಾಗಿ ಮಾವು ಮಂಡಳಿ ಮ್ಯಾಂಗೋ ಟೂರ್‌ ಘೋಷಣೆ ಮಾಡದ ಕಾರಣ ಗ್ರಾಹಕರು ಮ್ಯಾಂಗೋ ಪಿಕ್ಕಿಂಗ್‌ ಮಾಡಲು ಕಾತುರರಾಗಿದ್ದಾರೆ. ಬರುವ ಮಾವು ಪ್ರಿಯರಿಗೆ ಇಲ್ಲಿನ ಹೊಟ್ಟೆತುಂಬಾ ಊಟ ನೀಡಿ ತೋಟದಲ್ಲಿರುವ ಮಾವಿನ ವಿವಿಧ ತಳಿಯ ಬಗ್ಗೆ ಮಾಹಿತಿ ನೀಡುತ್ತಾರೆ. ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ತಿಳಿಸಿದರು.

ಮಾವು ಸಾಗಿಸಲು ಯಾವುದೆ ಅಡ್ಡಿ ಇಲ್ಲ, ಮಾರಾಟ ಮಾಡಲು ತುಮಕೂರು ಸಿಟಿಯ ಜನತೆ ಅನುಕೂಲವಾಗುವಂತೆ ಮಾವು ಮೇಳೆ ಆರಂಭಿಸಿದ್ದು, ವಾರ್ಡ್‌ ವೈಸ್‌ 15 ಸ್ಟಾಲ್‌ ತೆರೆಯಲು ತೋಟಗಾರಿಕೆ ಇಲಾಖೆ ಸಿದ್ಧತೆಯಲ್ಲಿದ್ದು ಮಾವು ಬೆಳೆಗಾರರು ಡೆಪ್ಯೂಟಿ ಡೈರೆಕ್ಟರ್‌ ಕಚೇರಿಗೆ ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಬಹುದು.

ಹೇಗೆ ಆನ್‌ಲೈನ್‌ ಬುಕ್ಕಿಂಗ್‌?

ಮಾವು ಮಂಡಳಿ ಹಾಗೂ ಅಂಚೆ ಇಲಾಖೆಯ ಸಹಕಾರದೊಂದಿಗೆ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣನ್ನು ತಲುಪಿಸಲು ಪೋಸ್ಟ್‌ ಡೆಲಿವೆರಿ ಸೌಲಭ್ಯ ಕಲ್ಪಿಸಿದ್ದು ನೊಂದಣಿಗಾಗಿ ಕೆಎಸ್‌ಎಂಡಿಎಂಡಿಒಆರ್‌ಜಿ ಇದರಲ್ಲಿ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಅಪ್ಡೇಟ್‌ ಮಾಡಿ ಬೇಕಾದ ಬ್ರ್ಯಾಂಡ್‌ ಹಣ್ಣನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8453062389, 9141945046 ಗೆ ಸಂಪರ್ಕಿಸಬಹುದು.

ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್‌ ಆರಂಭ?

ಕೋವಿಡ್‌ 19 ಕಾರಣದಿಂದ ಮ್ಯಾಂಗೋ ಪಿಕ್ಕಿಂಗ್‌ ವಿಳಂಬವಾಗಿದೆ. ಸಾಮಾಜಿಕ ಅಂತರದೊಂದಿಗೆ ಟೋರ್‌ ಆಯೋಜಿಸಲು ಮಾವು ಮಂಡಳಿ ಸರಕಾರಕ್ಕೆ ಮನವಿ ನೀಡಿದ್ದು ಅನುಮತಿ ಸಿಕ್ಕ ತಕ್ಷಣ 2-3 ದಿನದಲ್ಲಿ ಆಯೋಜಿಸಲಾಗುವುದು ಎಂದು ಮಧುಗಿರಿ ತೋಟಗಾರಿಕೆ ಸಹಾಯಕ ನಿರ್ದೇಶಕ ವಿಶ್ವನಾಥಗೌಡ ಹೇಳಿದ್ದಾರೆ.

ಮಳೆಯಾಶ್ರಿತ ಪ್ರದೇಶದಲ್ಲೂ ಉತ್ತಮ ಮಾವು ಬೆಳೆದಿದ್ದು ಮಾವು ಮಂಡಳಿಯ ಮಾಂಗೋ ಪಿಕ್ಕಿಂಗ್‌ನಿಂದ ಖರೀದಿಯಲ್ಲಿ ಯಾವುದೆ ಮೋಸವಿಲ್ಲಾ ಬೆಳೆಗಾರರು ಹಾಗೂ ರೈತರ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಮಾವುಪ್ರಿಯ ಜಾಫರ್‌ ತಿಳಿಸಿದ್ದಾರೆ.

click me!