ಇತಿಹಾಸದಲ್ಲಿಯೇ ರಂಜಾನ್ ಹಬ್ಬದ ಪ್ರಾರ್ಥನೆ ಮನೆಯಲ್ಲಿಯೇ ಆಚರಿಸುತ್ತಿರುವುದು ಮೊದಲನೇ ಬಾರಿ| ಮನೆಯಲ್ಲಿಯೇ ಪ್ರಾರ್ಥನೆ ಮತ್ತು ಈದ್ಗಾ ಮಸೀದಿಗಳಲ್ಲಿ ಸಲ್ಲಿಸುವ ಪ್ರಾರ್ಥನೆಯ ವಿಧಾನಗಳು ಬೇರೆ ಇರುತ್ತವೆ| 1500 ವರ್ಷಗಳಿಂದ ಗುರುಗಳಾಗಿದ್ದ ಮಹಮ್ಮದ್ ಪೈಗಂಬರ್ ಅವರ ಮಾರ್ಗದರ್ಶನ ಮತ್ತು ಪ್ರಾರ್ಥನೆಯ ವಿಧಿ ವಿಧಾನಗಳಂತೆ ಪ್ರಾರ್ಥನೆ ಸಲ್ಲಿಸುತ್ತಾ ಬದಲಾಗಿದೆ|
ಗಂಗಾವತಿ(ಮೇ.25): ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಾರಕ ರೋಗ ದೂರವಾಗಲಿ, ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಇಂದು(ಸೋಮವಾರ) ನಗರದ ತಮ್ಮ ನಿವಾದಲ್ಲಿ ರಂಜಾನ್ ಹಬ್ಬದ ನಿಮಿತ್ತ ಕುಟಂಬದವರೊಂದಿಗೆ ಪ್ರಾರ್ಥನೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿ ಅವರು, ಇತಿಹಾಸದಲ್ಲಿಯೇ ರಂಜಾನ್ ಹಬ್ಬದ ಪ್ರಾರ್ಥನೆ ಮನೆಯಲ್ಲಿಯೇ ಆಚರಿಸುತ್ತಿರುವುದು ಮೊದಲನೇ ಬಾರಿಯಾಗಿದೆ. ಮನೆಯಲ್ಲಿಯೇ ಪ್ರಾರ್ಥನೆ ಮತ್ತು ಈದ್ಗಾ ಮಸೀದಿಗಳಲ್ಲಿ ಸಲ್ಲಿಸುವ ಪ್ರಾರ್ಥನೆಯ ವಿಧಾನಗಳು ಬೇರೆ ಇರುತ್ತವೆ ಎಂದು ತಿಳಿಸಿದ್ದಾರೆ.
ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್ ಆರಂಭ?
1500 ವರ್ಷಗಳಿಂದ ಗುರುಗಳಾಗಿದ್ದ ಮಹಮ್ಮದ್ ಪೈಗಂಬರ್ ಅವರ ಮಾರ್ಗದರ್ಶನ ಮತ್ತು ಪ್ರಾರ್ಥನೆಯ ವಿಧಿ ವಿಧಾನಗಳಂತೆ ಪ್ರಾರ್ಥನೆ ಸಲ್ಲಿಸುತ್ತಾ ಬದಲಾಗಿದೆ ಎಂದರು. ಕೊರೋನಾ ವೈರಸ್ ಹಬ್ಬುತ್ತಿರುವುದರಿಂದ ಇಡಿ ದೇಶ ತಲ್ಲಣಗೊಂಡಿದೆ. ಜನರು ಭಗವಂತನ ಪ್ರಾರ್ಥನೆ, ಮತ್ತು ಕೊರೋನಾ ಹೋಗಾಲಾಡಿಸುವುದಕ್ಕೆ ಜಾಗೃತಿ ವಹಿಸಿಕೊಳ್ಳಬೇಕು. ದೇಶದಲ್ಲಿ ಮಾನವೀಯ ಮೌಲ್ಯಗಳು ಬೆಳಸಿಕೊಳ್ಳಬೇಕು,ದ್ವೇಷ ಭಾವನೆ ಬಿಡಬೇಕು ಎದು ಹೇಳಿದ್ದಾರೆ.
ಬಿಗಿ ಭದ್ರತೆ:
ರಂಜಾನ್ ಹಬ್ಬದ ನಿಮಿತ್ಯ ನಗರದ ಈದ್ಗಾ, ಮಸೀದಿಗಳ ಮುಂದೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು. ಸಾಮೂಹಿಕವಾಗಿ ಪ್ರಾರ್ಥನೆಗೆ ಕಡಿವಾಣ ಹಾಕಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರನ್ನು ನಿಯೋಜಿಸಲಾಗಿತ್ತು.