Religious Conversion| ಬ್ಲ್ಯಾಕ್‌ ಮ್ಯಾಜಿಕ್‌ ಮೂಲಕ ಮತಾಂತರ: ಪ್ರಮೋದ್‌ ಮುತಾಲಿಕ್‌

By Kannadaprabha News  |  First Published Nov 21, 2021, 1:41 PM IST

*  ರೂಪಾಂತರವೋ, ಮತಾಂತರವೋ.. ಒಟ್ನಲ್ಲಿ ದೇಶಕ್ಕೆ ಇದು ಗಂಡಾಂತರ
*  ಕೃಷಿ ಕಾಯ್ದೆಗಳ ವಾಪಸ್‌, ಕೇಂದ್ರ ಸರ್ಕಾರಕ್ಕೆ ಇದು ಹಿನ್ನೆಡೆ
*  ಪ್ರಾರ್ಥನೆ ಅಂದ್ರೆ ಸಮಾಧಾನ ಇರಬೇಕು ಅದು ಕಿರಿಕಿರಿ ಆಗಬಾರದು


ಯಾದಗಿರಿ(ನ.21): ಬ್ಯ್ಲಾಕ್‌ ಮ್ಯಾಜಿಕ್‌(Black Magic)  ಮೂಲಕ ಮುಗ್ಧರ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಿ ಮತಾಂತರ(Conversion) ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌(Pramod Mutalik), ಕ್ರಿಶ್ಚಿಯನ್‌ ಧರ್ಮದ(Christianity) ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಯಾದಗಿರಿಯಲ್ಲಿ(Yadgir) ಶನಿವಾರ ನಡೆದ ಶ್ರೀರಾಮ ಸೇನಾ ಜಿಲ್ಲಾ ಬೈಠಕ್‌ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಇದಕ್ಕೂ ಮುನ್ನ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Tap to resize

Latest Videos

undefined

ಡಿಸೆಂಬರ್‌ ಅಧಿವೇಶನದಲ್ಲಿ(Session) ಸರ್ಕಾರ ಮತಾಂತರ ನಿಷೇದ ಕಾಯ್ದೆ(Conversion Prohibition Act) ಜಾರಿಗೆ ಮಾಡಲೇಬೇಕು, ಮತಾಂತರಕ್ಕೆ ತಡೆಯೊಡ್ಡಬೇಕಾಗಿದೆ, ಕಾಂಗ್ರೆಸ್‌ನವರ(Congress) ಕುಮ್ಮಕ್ಕಿನಿಂದ ಮತಾಂತರ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಓಟ್‌ ಬ್ಯಾಂಕ್‌ಗೋಸ್ಕರ್‌(Vote Bank) ಕಾಂಗ್ರೆಸ್‌ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ ಅವರು, ಇಲ್ಲಿಯವರೆಗೆ ಬಡವರಿಗೆ ಮಾತ್ರ ಸೀಮಿತವಾಗಿದಂತಿದ್ದ ಮತಾಂತರ ಈಗ ಎಲ್ಲಾ ವರ್ಗಕ್ಕೂ ಆವರಿಸುತ್ತಿದೆ, ದಾವಣಗೆರೆಯಲ್ಲಿ(Davangere) ವೀರಶೈವ ಜನಾಗದವರನ್ನೂ ಸಹ ಮತಾಂತರ ಮಾಡಲಾಗಿದೆ, ಬೆಳಗಾವಿ ಅ​ಧಿವೇಶದಲ್ಲಿ(Belagavi Session) ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದ ಅವರು, ಮತಾಂತರ ನಿಷೇಧ ಕಾಯಿದೆ ಜಾರಿಗೆ ಬರದಿದ್ದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

'ರಾಜ್ಯ ಬಿಜೆಪಿ SC ಮೋರ್ಚಾ ಅಧ್ಯಕ್ಷರೇ ಕುಟಂಬ ಸಮೇತ ಹಿಂದೂ ಧರ್ಮದಿಂದ ಮತಾಂತರ'

ಕ್ರಿಶ್ಚಿಯನ್‌ ಧರ್ಮದವರು ಹಳ್ಳಿಗಳಲ್ಲಿ ತಿರುಗಾಡು ಮುಗ್ಧ ಜನರನ್ನು ಮತಾಂತರ ಮಾಡುತ್ತಿದ್ದಾರೆ, ರೂಪಾಂತರವೋ ಅಥವಾ ಮತಾಂತರವೋ ಒಟ್ನಲ್ಲಿ ಇದು ದೇಶಕ್ಕೆ(India) ಗಂಡಾಂತರ ಎಂದು ಟೀಕಿಸಿದ ಮುತಾಲಿಕ್‌, ಬೈಬಲ್‌ನಲ್ಲಿ(Bible) ಕ್ರೌರ್ಯ ತುಂಬಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಇನ್ನು, ಮಸೀದಿಯಲ್ಲಿನ(Masjid) ಅಜಾನ್‌ ವಿರುದ್ಧವೂ ಗುಡುಗಿದ ಪ್ರಮೋದ್‌ ಮುತಾಲಿಕ್‌, ಧ್ವನಿವರ್ಧಕಗಳ ಕುರಿತು ಸುಪ್ರಿಂಕೋರ್ಟ್‌(Supremecourt) ಆದೇಶ ಉಲ್ಲಂಘನೆ ಮಾಡಲಾಗುತ್ತಿದೆ, ಪ್ರಾರ್ಥನೆ ಅಂದ್ರೆ ಸಮಾಧಾನ ಇರಬೇಕು ಅದು ಕಿರಿಕಿರಿ ಆಗಬಾರದು. ಮುಸ್ಲಿಂರ(Muslim) ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ, ಆದರೆ, ಅಜಾನ್‌ ಶಬ್ದದಿಂದ ಬಹಳಷ್ಟುಜನರಿಗೆ ಕಿರಿ ಕಿರಿ ಉಂಟಾಗುತ್ತದೆ, ಸರ್ಕಾರ ಸುಪ್ರೀಂಕೋರ್ಟಿನ ಆದೇಶ ಪಾಲಿಸುತ್ತಿಲ್ಲ ಎಂದು ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆದೇಶ ಪಾಲನೆ ಮಾಡೋಕೆ ಆಗಿಲ್ಲ ಅಂದರೆ ಕೋರ್ಟ್‌ ಮುಚ್ಚಿ ಬಿಡಿ, ಆದೇಶ ಪಾಲಿಸಿದರೆ ಕೋಮುಗಲಭೆ ಆಗುತ್ತದೆ ಅಂದರೆ ಅಂದ್ರೆ ಮುಚ್ಚಿ ಬಿಡಿ. ಒಂದುವೇಳೆ ಸರ್ಕಾರಕ್ಕೆ ಆಗದಿದ್ದರೆ ನಾವು ಇದನ್ನು ಹೇಗೆ ಮಾಡಬೇಕು ಅನ್ನೋದನ್ನು ತೋರಿಸುತ್ತೇವೆ ಎಂದು ಮುತಾಲ್ಕಿ ಗುಡುಗಿದರು.

ಕೃಷಿ ಕಾಯ್ದೆ ವಾಪಸ್‌: ಕೇಂದ್ರ ಸರ್ಕಾರಕ್ಕೆ ಸೆಟ್‌ಬ್ಯಾಕ್‌

ಯಾದಗಿರಿ: ಕೃಷಿ ಕಾಯ್ದೆ(Farm Laws) ವಿಚಾರದಲ್ಲಿ ಕೇಂದ್ರ ಬಿಜೆಪಿ(BJP) ಶರಣಾಗಿದೆ, ಇದೊಂದು ರೀತಿಯಲ್ಲಿ ಕೇಂದ್ರಕ್ಕೆ ಸೆಟ್‌ಬ್ಯಾಕ್‌ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅಭಿಮತ ವ್ಯಕ್ತಪಡಿಸಿದ್ದಾರೆ. ನಾನು ಕೃಷಿ ಕಾಯ್ದೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿಲ್ಲ, ಆದರೂ ಒಂದಿಷ್ಟು ಅಂಶಗಳ ಮೇಲೆ ನೋಡಿದರೆ ರೈತರ(Farmers) ಹೋರಾಟದೆದುರು ಸರ್ಕಾರ ಸೋತಿದೆ ಎಂದರು.

ಕೋಲಾರ ಬಂದ್‌ಗೆ ಕರೆ, ಪ್ರಮೋದ್ ಮುತಾಲಿಕ್ ಜಿಲ್ಲೆ ಪ್ರವೇಶಕ್ಕೆ ನಿಷೇಧ

ಪಂಜಾಬ್‌(Punjab) ಮತ್ತು ಹರಿಯಾಣದಲ್ಲಿ(Haryana) ಕಾಯ್ದೆ ವಿರೋ​ಧಿಸಿ ದೊಡ್ಡ ಮಟ್ಟದಲ್ಲಿ ಹೋರಾಟಗಳಾದವು, ಕೃಷಿ ಕಾಯ್ದೆ ವಾಪಸ್‌ ತೆಗೆದುಕೊಂಡಿದ್ದು ಕೇಂದ್ರ ಸರ್ಕಾರಕ್ಕೆ ಹೊಡೆತ ಬಿದ್ದಂತಿದೆ. ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ, ದೊಡ್ಡ ಹೊಡೆತ ಬಿದ್ದಿದೆ ಎಂದ ಮುತಾಲಿಕ್‌ ತಿಳಿಸಿದರು.

ಇನ್ನು, ಹಿಂದೂಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್‌ ಪಡೆಯಬೇಕಿದೆ. ಚುನಾವಣೆಗಳಲ್ಲಿ ಹಿಂದುತ್ವದ ಹೆಸರೇಳುವ ಸರ್ಕಾರ ಇದಕ್ಕೆ ಬದ್ಧರಾಗಬೇಕು, ಅನೇಕ ಅಮಾಯಕರ ಮೇಲೆ ವಿನಾಕಾರಣ ಪ್ರಕರಣಗಳು ದಾಖಲಾಗಿದ್ದು, ಇದನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಚುನಾವಣೆಗಳಲ್ಲಿ ಪಾಠ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
 

click me!