Dakshina kannada News : ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ; ಅರಣ್ಯ ಇಲಾಖೆಯಿಂದ ರಕ್ಷಣೆ

By Kannadaprabha NewsFirst Published Dec 6, 2021, 12:55 PM IST
Highlights
  • ನಿವೃತ್ತ ಯೋಧ ಸದಾಶಿವ ಎಂಬವರ ರಬ್ಬರ್‌ ತೋಟದಲ್ಲಿ ಸುಮಾರು 8 ಅಡಿ ಉದ್ದದ  ಮೊಸಳೆ ಪತ್ತೆ
  • ಅರಣ್ಯ ಇಲಾಖೆಯಿಂದ ಬೃಹತ್ ಗಾತ್ರದ ಮೊಸಳೆ ರಕ್ಷಣೆ

 ಬೆಳ್ತಂಗಡಿ (ಡಿ.06):  ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಿವೃತ್ತ ಯೋಧ (Soldier) ಸದಾಶಿವ ಎಂಬವರ ರಬ್ಬರ್‌ ತೋಟದಲ್ಲಿ ಸುಮಾರು 8 ಅಡಿ ಉದ್ದದ ಐದರಿಂದ ಆರು ವರ್ಷದ ಪ್ರಾಯದ ಮೊಸಳೆ (crocodile) ಭಾನುವಾರ ಬೆಳಗ್ಗೆ ಕಂಡು ಬಂದಿದ್ದು, ಅರಣ್ಯ ಇಲಾಖೆ  (Forest Department) ಮೊಸಳೆಯನ್ನು ರಕ್ಷಿಸಿದೆ.

ಇಲ್ಲಿನ ಸಂತೋಷ್‌ ಎಂಬವರು ರಬ್ಬರ್‌ ತೋಟದಲ್ಲಿ ಕೆಲಸ ನಿರ್ವಹಿಸುವ ವೇಳೆ ಮೊಸಳೆ ಪತ್ತೆಯಾಗಿದೆ. ಈ ವಿಚಾರವನ್ನು ಕಡಿರು ದ್ಯಾವರ ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಅಶೋಕ್‌ ಕುಮಾರ್‌ ಅವರಿಗೆ ತಿಳಿಸಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿಗಳು ತಕ್ಷಣ ಆಗಮಿಸಿ ಸ್ಥಳಿಯರ ಸಹಕಾರದಲ್ಲಿ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ರಕ್ಷಣಾ ಕಾರ್ಯಾಚರಣೆ: ಅರಣ್ಯ ಇಲಾಖೆಯ ಬೆಳ್ತಂಗಡಿ (Belthangadi) ಕಚೇರಿಯಿಂದ ಬಲೆ, ಗೂಡು, ಇತರ ಅಗತ್ಯ ಸಲಕರಣೆ ಹಾಗೂ ಮೊಸಳೆಗೆ ಬೇಕಾದ ಆಹಾರವನ್ನು ತರಿಸಿ, ವೈ ಆಕಾರದ ಮರದ ಬಡಿಗೆಗಳಿಂದ ಮೊಸಳೆಯ ಬಾಯಿ, ಬಾಲ ಹಾಗೂ ಶರೀರದ ಭಾಗವನ್ನು ಒತ್ತಿ ಹಿಡಿದು, ಉಸಿರಾಟಕ್ಕೆ ತೊಂದರೆಯಾಗದಂತೆ ಬಾಯಿಯನ್ನು ಬಿಗಿದು ಮೊಸಳೆಯನ್ನು ಬಲೆಯಲ್ಲಿ ಬಂಧಿಸಲಾಯಿತು. ಪಶುವೈದ್ಯಾಧಿಕಾರಿಗಳಿಂದ ಮೊಸಳೆಯ ಆರೋಗ್ಯ ತಪಾಸಣೆ ನಡೆಸಿ, ರಕ್ಷಿತಾರಣ್ಯದ ಜನವಸತಿಯಿಲ್ಲದ ನೀರು ಹಾಗೂ ದಟ್ಟಅರಣ್ಯ (Forest) ಇರುವ ಭಾಗದಲ್ಲಿ ಬಿಡಲಾಯಿತು. ಜಿಲ್ಲಾ ಅರಣ್ಯಾಧಿಕಾರಿ ಡಾ. ದಿನೇಶ್‌ ಕುಮಾರ್‌ ಅವರ ಮಾರ್ಗದರ್ಶನದೊಂದಿಗೆ, ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌ ನಿರ್ದೇಶನ ನೀಡಿದರು.

ತಾಲೂಕಿನ ನಾನಾ ಶಾಖೆಗಳ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಅಂಕಲಗಿ, ಹರಿಪ್ರಸಾದ್‌, ಭವಾನಿ ಶಂಕರ ಬಿ.ಜಿ., ಅರಣ್ಯ ರಕ್ಷಕರಾದ ಪಾಂಡುರಂಗ ರಾಘವೇಂದ್ರ ಪ್ರಸಾದ್‌, ಗಫರ್‌, ವಾಸು ಇವರ ತಂಡ ಸ್ಥಳೀಯರಾದ ರಮೇಶ,ಬಾಬು, ವಿನಾಯಕ, ನಾರಾಯಣ, ಗುರುರಾಜ, ಜಗದೀಶ್‌ ಮುಂಡಾಜೆ ಸೇರಿದಂತೆ ಅನೇಕರ ಸಹಕಾರದಲ್ಲಿ ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿತು.  

ಮೊಸಳೆ ಹೊಟ್ಟೆಯಲ್ಲಿ ಹಳೆ ಖಜಾನೆ :  

ಅಮೆರಿಕದ ಬೇಟೆಗಾರ 13 ಅಡಿ ಉದ್ದದ ಮೊಸಳೆಯನ್ನು ಬೇಟೆಯಾಡಿದ್ದಾರೆ. ಆದರೆ ನೀರಿನಲ್ಲಿರುವ ಈ ಅತ್ಯಂತ ಅಪಾಯಕಾರಿ ಪ್ರಾಣಿಯ ಹೊಟ್ಟೆಯನ್ನು ಸೀಳಿದಾಗ ಒಳಗಿರುವುದನ್ನು ಕಂಡು ಒಂದು ಕ್ಷಣ ದಿಗ್ಭ್ರಾಂತನಾಗಿದ್ದಾನರ. ಇವರ ಸಹ ಬೇಟೆಗಾರ ಜಾನ್ ಹ್ಯಾಮಿಲ್ಟನ್ ದೈತ್ಯ ಮೊಸಳೆಯ ಹೊಟ್ಟೆ ಸೀಳಲು ಅಮೆರಿಕನ್ ಬೇಟೆಗಾರ ಶೇನ್ ಸ್ಮಿತ್ ಅವರ ಬಳಿ ತಂದಿದ್ದಾರೆ. ಇಬ್ಬರು ಮೊಸಳೆಯನ್ನು ಕತ್ತರಿಸಿದಾಗ, ಹೊಟ್ಟೆಯೊಳಗೆ ಅತ್ಯಂತ ಪುರಾತನ ಬಾಣ ಹಾಗೂ Plummet ಪತ್ತೆಯಾಗಿದೆ.

5,000 ರಿಂದ 6,000 ವರ್ಷ ಹಳೆಯ ಉಪಕರಣಗಳು

ತನಗೆ ಹೂಡಿದ ಬಾಣವನ್ನು ಮೊಸಳೆ ತಿಂದಿರಬಹುದು/ನುಂಗಿರಬಹುದು ಎಂಬುವುದು ಶೇನ್ ಊಹೆ. AL ವರದಿಯ ಪ್ರಕಾರ, ಮಿಸ್ಸಿಸ್ಸಿಪ್ಪಿ ರಾಜ್ಯದ ಭೂವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಈ ವಸ್ತುಗಳು ಸುಮಾರು 5000 ರಿಂದ 6000 ವರ್ಷಗಳಷ್ಟು ಹಳೆಯದು ಮತ್ತು ಬಹುಶಃ ನೆಲದ ಮೇಲೆ ಬಿದ್ದಿರಬಹುದೆಂದು ಅಂದಾಜಿಸಿದ್ದಾರೆ. ಶೇನ್‌ನ ಪ್ಲಾಂಟ್ ರೆಡ್ ಆಂಟ್ಲರ್ ಪ್ರೊಸೆಸಿಂಗ್ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿದ್ದು 'ನಾವು ಅವುಗಳ ಹೊಟ್ಟೆಯಲ್ಲಿ ಏನಿದೆ ಎಂದು ನೋಡಲು ಕೆಲವು ದೊಡ್ಡ ಮೊಸಳೆಗಳನ್ನು ಕತ್ತರಿಸುತ್ತಿದ್ದೇವೆ ಎಂದಿದೆ.

ಮೀನುಗಾರಿಕೆಗೆ ಬಳಸುವ ಉಪಕರಣಗಳು

ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಇಲ್ಲಿಯವರೆಗೆ ಎಲ್ಲರಿಂದಲೂ ಆಸಕ್ತಿದಾಯಕ ಸಂಗತಿಗಳು ಮಾತ್ರ ಹೊರಬಂದಿವೆ. ಜಾನ್ ಹ್ಯಾಮಿಲ್ಟನ್ ಇಂದು 13 ಅಡಿ ಐದು ಇಂಚು ಉದ್ದದ ಮೊಸಳೆಯನ್ನು ತಂದಿದ್ದಾರೆ, ಇದು ತುಂಬಾ ಆಘಾತಕಾರಿಯಾಗಿತ್ತು. ಇತಿಹಾಸಕಾರರು ಹೇಳುವಂತೆ ಮುರಿದ ಬಾಣದ ತುದಿ ಮತ್ತು Plummet  ಪ್ರಾಚೀನ ಕಾಲದಲ್ಲಿ ಸ್ಥಳೀಯ ಅಮೆರಿಕನ್ನರು ಬಳಸುತ್ತಿದ್ದ ಮೀನುಗಾರಿಕಾ ಸಾಧನಗಳಾಗಿವೆ. ಮೊಸಳೆಯ ಹೊಟ್ಟೆಯಲ್ಲಿ ಮೀನಿನ ಮೂಳೆಗಳು, ರೆಕ್ಕೆಗಳು, ಕೂದಲು ಮತ್ತು ದುರ್ವಾಸನೆ ಬೀರುವ ದ್ರವದ ಜೊತೆಗೆ ಕೆಲವು ಪುರಾತನ ವಾದ್ಯಗಳಿದ್ದವು ಎಂದಿದ್ದಾರೆ.

click me!