District In-Charge: ಸಚಿವ ಕೆ.ಸಿ.ನಾರಾಯಣ ಗೌಡ ಬದಲಾವಣೆಗೆ MLC ಚುನಾವಣೆ ಕಾರಣವಾಯ್ತ?

By Suvarna News  |  First Published Jan 25, 2022, 1:20 PM IST

ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದು, 2ನೇ ಬಾರಿಗೆ ಸಂಪುಟ ದರ್ಜ ಸಚಿವರಾಗಿ ಆಯ್ಕೆಯಾದ ಕೆ.ಸಿ. ನಾರಾಯಣ ಗೌಡ ಅವರ ಜಿಲ್ಲಾ ಉಸ್ತುವಾರಿ ಬದಲಾವಣೆಗೆ ವಿಧಾನ ಪರಿಷತ್ ಚುನಾವಣೆಯ ಹೀನಾಯ ಸೋಲೆ ಕಾರಣವಾಯ್ತ ಎಂಬ ಪ್ರಶ್ನೆ ಇದೀಗ ಮೂಡಿದೆ. 


ಮಂಡ್ಯ (ಜ.25): ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ (BJP) ಖಾತೆ ತೆರೆದು, 2ನೇ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಆಯ್ಕೆಯಾದ ಕೆ.ಸಿ. ನಾರಾಯಣ ಗೌಡ (KC Narayana Gowda) ಅವರ ಜಿಲ್ಲಾ ಉಸ್ತುವಾರಿ ಬದಲಾವಣೆಗೆ ವಿಧಾನ ಪರಿಷತ್ ಚುನಾವಣೆಯ ಹೀನಾಯ ಸೋಲೆ ಕಾರಣವಾಯ್ತ ಎಂಬ ಪ್ರಶ್ನೆ ಇದೀಗ ಮೂಡಿದೆ. ಎಮ್‌ಎಲ್‌ಸಿ ಚುನಾವಣೆ (MLC Election) ಬಳಿಕ ತವರು ಜಿಲ್ಲಾ ಉಸ್ತುವಾರಿ ಉಳಿಸಿಕೊಳ್ಳಲು ಕೆ.ಸಿ.ನಾರಾಯಣ ಗೌಡ ವಿಫಲರಾಗಿದ್ದಾರೆ. ಮಂಡ್ಯ ಉಸ್ತುವಾರಿಯಾಗಿದ್ದ ನಾರಾಯಣಗೌಡ ಶಿವಮೊಗ್ಗಕ್ಕೆ ನೆಪ ಮಾತ್ರಕ್ಕೆ ಉಸ್ತುವಾರಿಯಾಗಿದ್ದು, ಬಿಜೆಪಿಯಲ್ಲಿ ದುರ್ಬಲ ಸಚಿವರ ಪಟ್ಟಿಗೆ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ.

ಮಂಡ್ಯ ಎಮ್‌ಎಲ್‌ಸಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ಬಿಜೆಪಿ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಹಿಂದೆ ನಾರಾಯಣಗೌಡ ಕೈವಾಡವಿದ್ದು, ನಾರಾಯಣಗೌಡ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಬಗ್ಗೆ  ಆರೋಪ ಕೇಳಿಬಂದಿತ್ತು. ಮಾತ್ರವಲ್ಲದೇ ಪಕ್ಷ ವಿರೋಧಿ ಚಟುವಟಿಕೆಯಿಂದ ಬಿಜೆಪಿ ವರಿಷ್ಠ ಕೆಂಗಣ್ಣಿಗೆ ನಾರಾಯಣಗೌಡ ಗುರಿಯಾಗಿದ್ದರು. ಎಮ್‌ಎಲ್‌ಸಿ ಚುನಾವಣೆ ಬಳಿಕ ಬಿಜೆಪಿಯು ಮೂಡಾ ಅಧ್ಯಕ್ಷರಾಗಿದ್ದ ನಾರಾಯಣಗೌಡ ಆಪ್ತ ಕೆ.ಶ್ರೀನಿವಾಸ್‌ಗೂ (K Srinivas) ಕೊಕ್ ನೀಡಿದೆ. ಇದೀಗ ನಾರಾಯಣಗೌಡ ಅವರಿಗೆ ತವರು ಜಿಲ್ಲಾ ಉಸ್ತುವಾರಿ ಕೈ ತಪ್ಪಿದ್ದು, ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ.

Tap to resize

Latest Videos

BJP Politics: ಬೆಳಗಾವಿ ರಹಸ್ಯ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಅಸಮಾಧಾನ

ಉಸ್ತುವಾರಿ ಬೇಡ: ಉಸ್ತುವಾರಿ ಅದಲು ಬದಲು ವಿಚಾರವಾಗಿ ಕೆಲ ಸಚಿವರು ಸೋಮವಾರ ತಡ ರಾತ್ರಿ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ (MTB Nagaraj) ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಬೇಕೆಂದು ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ.

ಆನಂದ್ ಸಿಂಗ್, ಅಶೋಕ್‌ಗೆ ಬಿಗ್ ಶಾಕ್: ಬಿಜೆಪಿ ಸರ್ಕಾರದ ಪ್ರಮುಖ ಸಚಿವರಲ್ಲಿ ಅಶೋಕ್ ಸಹ ಒಬ್ಬರು. ಯಡಿಯೂರಪ್ಪನವರ ಆಪ್ತ ಗುಂಪಿನಲ್ಲಿ ಗುರುತಿಸಿಕೊಂಡವರು. ಆದ್ರೆ, ಬೊಮ್ಮಾಯಿ ಸರ್ಕಾರ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆನಂದ್‌ ಸಿಂಗ್ ತಮ್ಮ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ. ಅವರಿಗೆ ಕೊಪ್ಪಳ ನೀಡಲಾಗಿದೆ. ಇನ್ನು ವಿಜಯನಗರ ಜಿಲ್ಲಾ ಉಸ್ತುವರಿಯನ್ನಾಗಿ ಶಶಿಕಲಾ ಜೊಲ್ಲೆ ಅವರನ್ನ ನೇಮಿಸಲಾಗಿದೆ.

BJP Politics: ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಹೊರಗಿಟ್ಟು ಸಭೆ..!

ರಾಮುಲುಗೆ ಒಲಿದ ಬಳ್ಳಾರಿ: ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬಂದಾಗಿನಿಂದಲೂ ತಮಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಶ್ರೀರಾಮುಲು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಬಗ್ಗೆ ಈ ಹಿಂದೆ ಸಿಎಂ ಆಗಿದ್ದ ಬಿಎಸ್‌ವೈ ಬಳಿ ಅಸಮಾಧಾನ ಹೊರಹಾಕಿದ್ರು. ಇದೀಗ ಕೊನೆಗೂ ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ಶ್ರೀ ರಾಮುಲು ಯಶಸ್ವಿಯಾಗಿದ್ದಾರೆ. 

ಬೆಂಗಳೂರು ನಗರ ಸಿಎಂ ಬಳಿ: ಬೆಂಗಳೂರು ನಗರ ಉಸ್ತುವಾರಿ ಯಾರಿಗೂ ನೀಡದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಗೆ ಭಾರಿ ಪೈಪೋಟಿಯಿತ್ತು. ಅಶ್ವತ್ಥ್ ನಾರಾಯಣ, ವಿ. ಸೋಮಣ್ಣ, ಅಶೋಕ್ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಆದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮಲ್ಲಿಯೇ ಉಳಿಸಕೊಂಡಿದ್ದಾರೆ.

click me!