ಜಿಲ್ಲೆ ಉಸ್ತುವಾರಿ ಬದಲಾವಣೆ ವಿಚಾರವಾಗಿ ಜಿಲ್ಲೆಯ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಗೆ ಪದೇ ಪದೇ ಉಸ್ತುವಾರಿಗಳ ಬದಲಾವಣೆ ಮಾಡಬೇಡಿ.
ರಾಯಚೂರು (ಜ.25): ಜಿಲ್ಲೆ ಉಸ್ತುವಾರಿ ಬದಲಾವಣೆ ವಿಚಾರವಾಗಿ ಜಿಲ್ಲೆಯ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ (Basanagouda Daddal) ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಯಚೂರು (Raichur) ಜಿಲ್ಲೆಗೆ ಪದೇ ಪದೇ ಉಸ್ತುವಾರಿಗಳ ಬದಲಾವಣೆ ಮಾಡಬೇಡಿ. ಬಿಜೆಪಿ (BJP) ಸರ್ಕಾರ ಬಂದ ಬಳಿಕ ರಾಯಚೂರಿಗೆ ಸಚಿವ ಶಂಕರ್. ಬಿ.ಪಾಟೀಲ್ (Shankar B.Patil) ಐದನೇಯವರಾಗಿದ್ದು, ಪದೇ ಪದೇ ಸಚಿವರ ಬದಲಾವಣೆಯಿಂದ ಜಿಲ್ಲೆಯ ಅಭಿವೃದ್ಧಿ ಭಾರೀ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಕೆಡಿಪಿ ಸಭೆಗಳು ನಡೆದಿಲ್ಲ. ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಬಹುದಾಗಿತ್ತು ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ಮತ್ತೊಂದು ಕಡೆ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಉಸ್ತುವಾರಿ ಸಚಿವರ ನೇಮಕದಲ್ಲಿ ರಾಯಚೂರು ಚೂರು ಚೂರಾಗಿದೆ. ಬಿಜೆಪಿ ಸರ್ಕಾರ ರಾಯಚೂರು ಜಿಲ್ಲೆಯನ್ನು ಕಡೆಗಣಿಸಿದೆ. ಸರ್ಕಾರ ಬಂದು ನಾಲ್ಕು ವರ್ಷ ಕಳೆದಿಲ್ಲ. ಜಿಲ್ಲೆಗೆ ಐದು ಜನ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಶ್ರೀರಾಮುಲು, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಹಾಲಪ್ಪ ಆಚಾರ ಬಂದು ಹೋದ್ರು. ಇದೀಗ ಶಂಕರ್.ಬಿ.ಪಾಟೀಲ್ ಅವರನ್ನು ನೇಮಕ ಮಾಡಿದೆ. ಹಾಗಾಗಿ ಶಂಕರ್ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
undefined
Karnataka BJP: ಇದೀಗ ಬಂದ ಸುದ್ದಿ, ಬೊಮ್ಮಾಯಿ ನಾಯಕತ್ವ ಬದಲಾವಣೆ ಬಗ್ಗೆ ಉಸ್ತುವಾರಿ ಸ್ಪಷ್ಟನೆ
ಉಸ್ತುವಾರಿ ಬೇಡ: ಉಸ್ತುವಾರಿ ಅದಲು ಬದಲು ವಿಚಾರವಾಗಿ ಕೆಲ ಸಚಿವರು ಸೋಮವಾರ ತಡ ರಾತ್ರಿ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ (MTB Nagaraj) ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಬೇಕೆಂದು ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ.
ಬೆಂಗಳೂರು ನಗರ ಸಿಎಂ ಬಳಿ: ಬೆಂಗಳೂರು ನಗರ ಉಸ್ತುವಾರಿ ಯಾರಿಗೂ ನೀಡದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಗೆ ಭಾರಿ ಪೈಪೋಟಿಯಿತ್ತು. ಅಶ್ವತ್ಥ್ ನಾರಾಯಣ, ವಿ. ಸೋಮಣ್ಣ, ಅಶೋಕ್ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಆದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮಲ್ಲಿಯೇ ಉಳಿಸಕೊಂಡಿದ್ದಾರೆ.
ರಾಮುಲುಗೆ ಒಲಿದ ಬಳ್ಳಾರಿ: ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬಂದಾಗಿನಿಂದಲೂ ತಮಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಶ್ರೀರಾಮುಲು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಬಗ್ಗೆ ಈ ಹಿಂದೆ ಸಿಎಂ ಆಗಿದ್ದ ಬಿಎಸ್‌ವೈ ಬಳಿ ಅಸಮಾಧಾನ ಹೊರಹಾಕಿದ್ರು. ಇದೀಗ ಕೊನೆಗೂ ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ಶ್ರೀ ರಾಮುಲು ಯಶಸ್ವಿಯಾಗಿದ್ದಾರೆ.
District Incharge Ministers: 5 ತಿಂಗಳು ಕಳೆದರೂ ಉಸ್ತುವಾರಿ ಸಚಿವರ ನೇಮಕಕ್ಕೆ ಮುಂದಾಗದ ಸಿಎಂ
ಆನಂದ್ ಸಿಂಗ್, ಅಶೋಕ್‌ಗೆ ಬಿಗ್ ಶಾಕ್: ಬಿಜೆಪಿ ಸರ್ಕಾರದ ಪ್ರಮುಖ ಸಚಿವರಲ್ಲಿ ಅಶೋಕ್ ಸಹ ಒಬ್ಬರು. ಯಡಿಯೂರಪ್ಪನವರ ಆಪ್ತ ಗುಂಪಿನಲ್ಲಿ ಗುರುತಿಸಿಕೊಂಡವರು. ಆದ್ರೆ, ಬೊಮ್ಮಾಯಿ ಸರ್ಕಾರ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆನಂದ್ ಸಿಂಗ್ ತಮ್ಮ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ. ಅವರಿಗೆ ಕೊಪ್ಪಳ ನೀಡಲಾಗಿದೆ. ಇನ್ನು ವಿಜಯನಗರ ಜಿಲ್ಲಾ ಉಸ್ತುವರಿಯನ್ನಾಗಿ ಶಶಿಕಲಾ ಜೊಲ್ಲೆ ಅವರನ್ನ ನೇಮಿಸಲಾಗಿದೆ.