ವಿದೇಶದಿಂದ ಮರಳಿದ ಶಾಸಕ ತನ್ವೀರ್ ಸೇಠ್‌, ಈಗ ಹೇಗಿದ್ದಾರೆ..?

By Kannadaprabha News  |  First Published Jan 9, 2020, 8:54 AM IST

ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾಗ ಮಚ್ಚೇಟಿನಿಂದ ಗಾಯಗೊಂಡಿದ್ದ ಶಾಸಕ ತನ್ವೀರ್ ಸೇಠ್ ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು ಬುಧವಾರ
ಮೈಸೂರಿಗೆ ಮರಳಿದ್ದಾರೆ.


ಮೈಸೂರು(ಜ.09): ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾಗ ಮಚ್ಚೇಟಿನಿಂದ ಗಾಯಗೊಂಡಿದ್ದ ಶಾಸಕ ತನ್ವೀರ್ ಸೇಠ್ ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು ಬುಧವಾರ ಮೈಸೂರಿಗೆ ಮರಳಿದ್ದಾರೆ.

ಕಳೆದ ನ.18ರಂದು ಬನ್ನಿಮಂಟಪದಲ್ಲಿ ಯುವಕನೊಬ್ಬ ಶಾಸಕರ ಮೇಲೆ ಹಲ್ಲೆ ನಡೆಸಿದ್ದ. ತಕ್ಷಣ ಅವರನ್ನು ಕೊಲಂಬಿಯ ಏಷಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಬೆಂಗಳೂರಿನ ತಮ್ಮ ನಿವಾಸಕ್ಕೆ ತೆರಳಿದ್ದ ಶಾಸಕ ತನ್ವೀರ್, ಹೆಚ್ಚಿನ ಚಿಕಿತ್ಸೆಗೆ ದುಬೈಗೆ ತೆರಳಿದ್ದರು. ಇದೀಗ ಚಿಕಿತ್ಸೆ ಪಡೆದು ತವರಿಗೆ ಮರಳಿದ್ದಾರೆ.

Tap to resize

Latest Videos

ಜಿಟಿಡಿ ಬೆಂಬಲಿಸೋ ವ್ಯಕ್ತಿಗೆ ನನ್ನ ವೋಟ್: ಸಾರಾ ಮಹೇಶ್

ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಯುವಕನೊಬ್ಬ ಮಟನ್ ಕತ್ತರಿಸುವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ತನ್ವೀರ್ ಸೇಠ್ ಅವರು ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರು ನಗರದ ಬನ್ನಿಮಂಟಪ ಸಮೀಪದ ಪಾರ್ಟಿ ಹಾಲ್‌ಗೆ ತೆರಳಿದ್ದರು. ಸುಮಾರು ರಾತ್ರಿ 11.30ರ ವೇಳೆಗೆ ಫರಾನ್ ಪಾಶಾ (25) ಎಂಬ ವ್ಯಕ್ತಿ ಏಕಾಏಕಿ ತನ್ವೀರ್ ಸೇಠ್ ಅವರ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

'ಪ್ರಧಾನಿ ಮೋದಿ ಕಾರ್ಪೋರೇಟ್ ಕಂಪನಿಗಳ ಸಿಎಒ'..!

click me!