ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಮೋದ ಕವಿದ ವಾತವರಣ ನಿರ್ಮಾಣವಾಗಿದೆ.ಮಲೆನಾಡು ತಾಲೂಕುಗಳಾದ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮೂಡಿಗೆರೆ ಭಾಗದ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಗುಡುಗು ಮತ್ತು ಮೋಡ ಕವಿದ ವಾತವರಣ ಅಲ್ಲಲ್ಲಿ ನಿರ್ಮಾಣವಾಗಿದ್ದು, ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.26): ಚಿಕ್ಕಮಗಳೂರು ಜಿಲ್ಲಾದ್ಯಂತ ಅಬ್ಬರಿಸಿದ ಮುಂಗಾರು ಪೂರ್ವ ಮಳೆ ಆರ್ಭಟ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ನಿನ್ನೆ(ಗುರುವಾರ) ಅಲ್ಲಲ್ಲಿ ಮಳೆಯಾಗಿದೆ. ಗುಡುಗು, ಮೋಡ ಕವಿದ ವಾತವರಣ ಮುಂದೂ ವರೆದಿದ್ದು ಮಳೆಯಾಗುವ ಸಾಧ್ಯತೆ ಇದೆ.
undefined
ನಗರದ ಮಧ್ಯಾಹ್ನದ ವೇಳೆಗೆ ಮಳೆಯಾಗಿದೆ. ಮಳೆಗೆ ನಗರದ ರಸ್ತೆಗಳಲ್ಲಿ ಮಳೆಯ ನೀರು ಹರಿದು ಸಂಚಾರಕ್ಕೆ ಕೆಲಹೊತ್ತು ಅಡ್ಡಿ ಉಂಟಾಗಿತ್ತು.ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ದಿಢೀರ್ ಸುರಿದ ಮಳೆಯಿಂದ ಜನರು ಮನೆ ಸೇರಿಕೊಳ್ಳಲಾಗದೆ ಪರದಾಡಿದರು. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು.
CHIKKAMAGALURU RAINS: ವರುಣನ ರುದ್ರ ನರ್ತನಕ್ಕೆ ನಲುಗಿದ ಕಾಫಿನಾಡು: ಅಪಾರ ಬೆಳೆ ನಷ್ಟ!
ಇನ್ನೂ ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಮೋದ ಕವಿದ ವಾತವರಣ ನಿರ್ಮಾಣವಾಗಿದೆ.ಮಲೆನಾಡು ತಾಲೂಕುಗಳಾದ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮೂಡಿಗೆರೆ ಭಾಗದ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಗುಡುಗು ಮತ್ತು ಮೋಡ ಕವಿದ ವಾತವರಣ ಅಲ್ಲಲ್ಲಿ ನಿರ್ಮಾಣವಾಗಿದ್ದು, ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ತರಕಾರಿ ಬೆಳೆಗಾರರ ಮೊಗದಲ್ಲಿ ಮಂದಹಾಸ
ಮುಂಗಾರು ಪೂರ್ವ ಜಿಲ್ಲಾದ್ಯಂತ ಮಳೆಯಾದ ಪರಿಣಾಮ ಕಾಫಿ ಬೆಳೆಗಾರರು, ಕಾಳು ಮೆಣಸು, ಅಡಿಕೆ ಹಾಗೂ ತರಕಾರಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅಬ್ಬರದ ಮಳೆ ಅಲ್ಲಲ್ಲಿ ಅನಾಹುತಗಳನ್ನು ಸೃಷ್ಟಿಸಿದೆ. ಬಾರಿ ಗಾಳಿಗೆ ಮನೆಗಳು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿರುವ ಘಟನೆಗಳು ನಡೆದಿವೆ.ಬಯಲುಸೀಮೆ ಭಾಗದಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲು, ಬಾರೀ ಗಾಳಿಯೊಂದಿಗೆ ಆಲಿ ಕಲ್ಲು ಮಳೆಯಾಗಿದ್ದು, ಸಖರಾಯಪಟ್ಟಣ ಆಗಲೇರಿ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ದೊಡ್ಡ ಪ್ರಮಾಣದ ಆಲಿಕಲ್ಲುಗಳು ಮನೆಯ ಮೇಲೆ ಬಿದ್ದ ಪರಿಣಾಮ ಗ್ರಾಮದ ಮಂಗಳಮ್ಮ, ರತ್ನಮ್ಮ, ರಂಗಣ್ಣ ಎಂಬು ವರ ಮನೆ ಛಾವಣಿಗೆ ಹಾಕಲಾಗಿದ್ದ ಹೆಂಚು ಮತ್ತು ಸಿಮೆಂಟ್ ಸೀಟ್‌ಗಳು ಮುರಿದು ಬಿದ್ದಿದ್ದು, ಮನೆಯಲ್ಲಿ ಆಹಾರ ಸಾಮಾಗ್ರಿಗಳು ಮತ್ತು ಪೀಠೋಪಕರಣಗಳು ಹಾನಿಯಾಗಿವೆ.
ವಿಧಾನಸಭೆ ಚುನಾವಣೆ ವೇಳೆ ಚಿಕ್ಕಮಗಳೂರಿನಲ್ಲಿ ಶತಕೋಟಿ ದಾಟಿದ ಮದ್ಯ ಮಾರಾಟ!
ಮಳೆ ಹಾನಿ ಪ್ರದೇಶಕ್ಕೆ ಶಾಸಕ ತಮ್ಮಯ್ಯ ಭೇಟಿ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹೆಚ್.ಡಿ.ತಮ್ಮಯ್ಯ ಭೇಟಿ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದಾರೆ. ಸಖರಾಯಪಟ್ಟಣದಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿತ್ತು. ಆಲಿಕಲ್ಲು ಮಳೆಗೆ ಮನೆಯ ಮೇಲ್ಛಾ ವಣಿಯ ಶೀಟ್‌ಗಳು ಹಾರಿ ಹೋಗಿದ್ದವು. ಆಗಲೇರಿ ಗ್ರಾಮದ ಮಂಗಳಮ್ಮ, ರತ್ನಮ್ಮ, ರಂಗಣ್ಣ ಎಂಬುವರ ಮನೆಗೆ ಹಾನಿಯಾಗಿತ್ತು. ಮಳೆಯಿಂದ ಹಾನಿಯಾದ ಕುಟುಂಬಕ್ಕೆ ಗ್ರಾಮಸ್ಥರು ಸಹಾಯ ಮಾಡಿದ್ದರು. ಮನೆಯಲ್ಲಿದ್ದ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣಗಳಿಗೂ ಹಾನಿಯಾಗಿತ್ತು. ಸೂಕ್ತ ಪರಿಹಾರ ನೀಡುವಂತೆ ತಹಶೀಲ್ದಾರ್ ಹಾಗೂ ರೆವೆನ್ಯೂ ಇನ್ಸ್ಪೆಕ್ಟರ್‌ಗೆ ಸೂಚನೆ ನೀಡಿ ಮನೆಗಳಿಗೆ ತುರ್ತಾಗಿ ಟಾರ್ಪಲ್ ವ್ಯವಸ್ಥೆ ಮಾಡಲು ಪಿಡಿಓಗೆ ಆದೇಶಿಸಿದರು.
ಈ ನಡುವೆ ಇಂದು ಚಿಕ್ಕಮ ಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು ನಗರ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು ಅರ್ಧ ಗಂಟೆಯಿಂದ ಸುರಿದ ಭಾರೀ ಮಳೆ ಯಿಂದರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿತ್ತು. ಮನೆಗಳಿಗೆ ವಾಪಸ್ ಹೋಗಲಾಗದೆ ಜನ ಪರದಾಡಿದರು.