ಹಾಸನ: ಬದುಕಿರುವಾಗಲೇ ವೃದ್ಧೆಯ ಮರಣ ಪತ್ರ ಪಡೆದು ಆಸ್ತಿ ಕಬಳಿಕೆ ಯತ್ನ..!

By Girish GoudarFirst Published May 26, 2023, 2:00 AM IST
Highlights

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುದಿಗೆರೆಯಲ್ಲಿ ನಡೆದ ಘಟನೆ, ಪಾರ್ವತಮ್ಮ ಮೃತ ರಾಗಿದ್ದಾರೆಂದು ಮರಣ ಪತ್ರ, ತಾಲ್ಲೂಕು ಕಚೇರಿಯಿಂದಲೇ ಮರಣ ಪತ್ರ ವಿತರಣೆ. 

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ(ಮೇ.26): ಬದುಕಿರುವ ವೃದ್ಧೆಯ ಹೆಸರಿನಲ್ಲಿ ಮರಣ ಪತ್ರ ಪಡೆದು ಸಂಬಂಧಿಕರು ಆಸ್ತಿ ಕಬಳಿಸುವ ಹುನ್ನಾರ ಮಾಡಿದ್ದಾರೆ. ಈ ವಿಚಿತ್ರ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುದಿಗೆರೆಯಲ್ಲಿ ನಡೆದಿದೆ. ಆಸ್ತಿ ಕಬಳಿಸುವ ಉದ್ದೇಶದಿಂದ ವೃದ್ದೆ ಬದುಕಿದ್ದರೂ ಮರಣ ಪತ್ರ ವನ್ನು ಸಂಬಂಧಿಕರು ಪಡೆದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೇಲೂರು ತಹಸಿಲ್ದಾರ್ ಕಚೇರಿಯಿಂದಲೇ ಮರಣ ಪತ್ರ ವಿತರಿಸಿದ್ದಾರೆ.

ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬ ಪತ್ನಿ ಪಾರ್ವತಮ್ಮ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ವಿತರಣೆ ಮಾಡಿದ್ದರು. ಪಾರ್ವತಮ್ಮ ಬಳಿ ಇರೋ 32 ಗುಂಟೆ ಜಮೀನು ಕಬಳಿಸೋದಕ್ಕೆ ಈ ಹುನ್ನಾರ ಮಾಡಿದ್ದಾನೆ. ಪಾರ್ವತಮ್ಮ ಅವರ ಹತ್ತಿರದ ಸಂಬಂಧಿಕರೊಬ್ಬರ ಮಗನಿಂದ ಕೃತ್ಯ ಎಸಗಿದ್ದಾನೆ. 2020 ಏಪ್ರಿಲ್ 10 ರಂದು ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಏಪ್ರಿಲ್ 20 ನೋಂದಣಿ ಮಾಡಿಸಿದ್ದಾರೆ. ಅಕ್ಟೋಬರ್ 14 ರಂದು ಪಾರ್ವತಮ್ಮ ಹೆಸರಿನಲ್ಲಿ ಮರಣ ದೃಢೀಕರಣ ಪತ್ರವನ್ನ ನೀಡಿದ್ದಾರೆ.

ಪಿತ್ರಾರ್ಜಿತ ಆಸ್ತಿಗಾಗಿ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ!

ಪಾರ್ವತಮ್ಮ ತಮ್ಮ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿ ವಿಭಾಗ ಮಾಡಿದ್ದರು. ತಮ್ಮ ಜೀವನಾಂಶಕ್ಕೆ 32 ಗುಂಟೆ ಜಮೀನನ್ನ ಇಟ್ಕೊಂಡಿದ್ದರು. ಪಾರ್ವತಮ್ಮ ಬೇರೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಫೇಕ್ ಸರ್ಟಿಫಿಕೇಟ್ ಬಗ್ಗೆ ಪಾರ್ವತಮ್ಮ ಕುಟುಂಬದವರಿಗೆ ಗೊತ್ತಾಗಿದೆ. ಬೇಲೂರು ತಹಸಿಲ್ದಾರ್ ಕಚೇರಿಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಈ ಸಂಬಂಧ ಪಾರ್ವತಮ್ಮ ಪುತ್ರ ಮಲ್ಲೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಬಗ್ಗೆ ಮಾತನಾಡಿದ ಪಾರ್ವತಮ್ಮ, ಆಸ್ತಿಗಾಗಿ ಮರಣಪತ್ರ ಮಾಡಿಸಿರುವ ವಂಚಕ ಸಂಬಂಧಿ ವಿರುದ್ದ ಕಿಡಿಕಾರಿದ್ದಾರೆ. ಇಂತಹ ಪಾಪಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಾ ಬದುಕಿರುವಾಗಲೇ ಸಾಯಿಸಿರುವ ಸಂಬಂಧಿ ವಿರುದ್ದ ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದು ಪಾರ್ವತಮ್ಮ ಬಹಳ ನೋವಿನಿಂದ ಮಾತಾಡಿದ್ದಾರೆ.

click me!