ಪ್ರಕರಣದ ತನಿಖೆ ಪ್ರಗತಿಯಲ್ಲಿದೆ| ನಾನು ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ| ನ್ಯಾಯಾಂಗವನ್ನ ನಾನು ಗೌರವಿಸುವೆ| ಭಟ್ಕಳದಲ್ಲಿ ಮದರಸಾಕ್ಕೆ ಬೆದರಿಕೆ ಪತ್ರ ಕಳುಹಿಸಿದವರು ಕಿಡಿಗೇಡಿಗಳು|
ಬಳ್ಳಾರಿ(ಜ.15): ದೇಶ ಪ್ರೀತಿಸುವವರಿಗೆ ಪ್ರಾಣವನ್ನೇ ಕೊಡುತ್ತೇನೆ. ವಿರೋಧ ಮಾಡುವವರನ್ನ ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಸಿಎಎಗೆ ಬೆಂಬಲ ನೀಡದವರು ದೇಶದ್ರೋಹಿಗಳು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ತಮ್ಮ ಹೇಳಕೆಯನ್ನ ಪುನರುಚ್ಚರಿಸಿದ್ದಾರೆ.
‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’
ಪ್ರಚೋದನಾಕಾರಿ ಭಾಷಣದ ಹಿನ್ನಲೆಯಲ್ಲಿ ದಾಖಲಾದ ದೂರಿನ ಬಗ್ಗೆ ಬುಧವಾರ ನಗರದಲ್ಲಿ ಮಾಧ್ಯದಮವರ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ನಾನು ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ. ನ್ಯಾಯಾಂಗವನ್ನ ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
'ಎಲ್ರೀ ಖಡ್ಗ, ತಗೊಂಡ್ ಬನ್ರಿ, ಉಫ್ ಎಂದು ಊದಿ ಬಿಡಿ' ರೆಡ್ಡಿನಾಡಿನಲ್ಲಿ ಖಾನ್ ಘರ್ಜನೆ!
ಇನ್ನು ಭಟ್ಕಳದಲ್ಲಿ ಮದರಸಾಕ್ಕೆ ಬೆದರಿಕೆ ಪತ್ರ ಕಳುಹಿಸಿದವರು ಕಿಡಿಗೇಡಿಗಳಾಗಿದ್ದಾರೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸುತ್ತಾರೆ. ಜಿಲ್ಲೆಯ ವಿಜಯನಗರದ ಕ್ಷೇತ್ರದ ಶಾಸಕ ಆನಂದ ಸಿಂಗ್ ಲೇಟರ್ ಹೆಡ್‌ನಲ್ಲಿ ಸೋಮಶೇಖರ ರೆಡ್ಡಿ ಹೆಸರಿರುವ ಬಗ್ಗೆ ಆನಂದ ಸಿಂಗ್ ಅವರೇ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದಾರೆ.