ಯಡಿಯೂರಪ್ಪ ಉಪಚುನಾವಣೆಯ ನಂತರ ಜಿಲ್ಲೆ ವಿಭಜನೆ ಮಾಡುವ ವಿಚಾರದ ಬಗ್ಗೆ ಮಾತನಾಡೋಣ ಅಂತ ಹೇಳಿದ್ದಾರೆ| ನನ್ನ ನಿಲುವು ಅಷ್ಟೇ ಜಿಲ್ಲೆ ಅಖಂಡವಾಗಿಬೇಕು ಅನ್ನೋದಾಗಿದೆ ಎಂದ ಸೋಮಶೇಖರ ರೆಡ್ಡಿ|ಆನಂದ್ ಸಿಂಗ್ ಮತ್ತು ಇನ್ನೊಬ್ಬ ಎಂಎಲ್‌ಸಿ ಇಬ್ಬರೇ ವಿಜಯನಗರ ಜಿಲ್ಲೆ ಬೇಕು ಅಂತ ಹೇಳಿದ್ದಾರೆ|
ಬಳ್ಳಾರಿ(ಡಿ.16): ಸಚಿವ ಶ್ರೀರಾಮುಲುಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ವಿಚಾರ ಈ ಭಾಗದ ಜನರ ಬೇಡಿಕೆಯಾಗಿದೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕನಾಗಿ ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಈ ಕುರಿತು ಹೈಕಮಾಂಡ್ ಸೂಕ್ತ ತಿರ್ಮಾನ ತೆಗೆದುಕೊಳ್ಳುತ್ತದೆ ಎಂದು ಸೋಮಶೇಖರ್ ರೆಡ್ಡಿ ಅವರು ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಇದ್ದಿದ್ರೆ ಶ್ರೀ ರಾಮುಲುಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ಜನಾರ್ದನ ರೆಡ್ಡಿ ಇದ್ದಿದ್ರೇ ಶ್ರೀರಾಮುಲು ಇನ್ನೂ ಬೇಗ ಉಪಮುಖ್ಯಮಂತ್ರಿ ಆಗುತ್ತಿದ್ದರು. ಯಾವ ಹಿನ್ನಡೆ ಏನೂ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಲ ಚಕ್ರ ಹೀಗೆ ಇರೋಲ್ಲ, ಬದಲಾಗುತ್ತಿರುತ್ತದೆ. ಕೆಳಗಿದ್ದೋರು ಮೇಲೆ ಬರಲೇಬೇಕು, ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಬಿದ್ದಿಲ್ಲ, ಕೆಲವೊಮ್ಮೆ ಕೆಲ ಜಿಲ್ಲೆಗಳು ಹೆಚ್ಚಾಗಿ ಪ್ರಭಾವ ಬೀರುತ್ತವೆ. ರಾಜಕೀಯ ಅಂದ್ರೆ ಹೀಗೆನೇ, 2008 ರಲ್ಲಿ ಪ್ರಬಲರಾಗಿದ್ವಿ, ಈಗಲೂ ನಾವು ಸ್ಟ್ರಾಂಗ್ ಆಗಿನೇ ಇದ್ದೇವೆ. ಭಗವಂತ ವೀಕ್ ಮಾಡಬೇಕೆ ಹೊರತು ಬೇರೆಯವರಲ್ಲ ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಉಪಚುನಾವಣೆಯ ನಂತರ ಜಿಲ್ಲೆ ವಿಭಜನೆ ಮಾಡುವ ವಿಚಾರದ ಬಗ್ಗೆ ಮಾತನಾಡೋಣ ಅಂತ ಹೇಳಿದ್ದಾರೆ. ನನ್ನ ನಿಲುವು ಅಷ್ಟೇ ಜಿಲ್ಲೆ ಅಖಂಡವಾಗಿಬೇಕು ಅನ್ನೋದಾಗಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಆನಂದ್ ಸಿಂಗ್ ಅವರಿಗೆ ಮನವಿ ಮಾಡುವೆ ಜಿಲ್ಲೆಯನ್ನು ಒಡೆಯೋದು ಬೇಡ ಅಂತ. ಶಾಸಕರಾದ ಕರುಣಾಕರ್ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಕೂಡ ಜಿಲ್ಲೆ ಅಖಂಡವಾಗಿರಲಿ ಎಂದಿದ್ದೇವೆ. ಅಂದಿನ ಸಭೆಗೆ ಬಂದವರಲ್ಲಿ ಶೇ.90 ರಷ್ಟು ಜಿಲ್ಲೆ ವಿಭಜನೆ ಬೇಡ ಅಂದಿದ್ದೇವೆ. ಆನಂದ್ ಸಿಂಗ್ ಮತ್ತು ಇನ್ನೊಬ್ಬ ಎಂಎಲ್‌ಸಿ ಇಬ್ಬರೇ ವಿಜಯನಗರ ಜಿಲ್ಲೆ ಬೇಕು ಅಂತ ಹೇಳಿದ್ದಾರೆ. ನೋಡೋಣ ಮುಂದೆ ಏನಾಗುತ್ತೆ ಅಂತ ಹೇಳಿದ್ದಾರೆ.