ರಾಸಲೀಲೆ ಸಿಡಿ ಪ್ರಸಾರ : ಬೇಸರ ವ್ಯಕ್ತಪಡಿಸಿದ ಶಾಸಕ

Kannadaprabha News   | Asianet News
Published : Mar 07, 2021, 11:15 AM IST
ರಾಸಲೀಲೆ ಸಿಡಿ ಪ್ರಸಾರ : ಬೇಸರ ವ್ಯಕ್ತಪಡಿಸಿದ ಶಾಸಕ

ಸಾರಾಂಶ

ಅಸಹ್ಯ ಹುಟ್ಟಿಸುವ ಸಿಡಿಯಲ್ಲಿರುವ ದೃಶ್ಯವನ್ನು ಬಿತ್ತರಿಸುವ ಮಾಧ್ಯಮ ಕೂಡಾ ಜನರಲ್ಲಿ ಬೇಸರ ತಂದಿರುವುದು ಮತ್ತೊಂದು ವಿಪರ್ಯಾಸ  ಶಾಸಕರೋರ್ವರು ತಮ್ಮ ಅಸಮಾಧಾನ ಹೊರಹಾಕಿದರು. 

 ಗುಬ್ಬಿ (ಮಾ.07):  ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿ​ಗಳಿಗೆ ಸಿಡಿ ಹಗರಣ ಶೋಭೆ ತರುವಂಥದ್ದಲ್ಲ. ಅಸಹ್ಯ ಹುಟ್ಟಿಸುವ ಸಿಡಿಯಲ್ಲಿರುವ ದೃಶ್ಯವನ್ನು ಬಿತ್ತರಿಸುವ ಮಾಧ್ಯಮ ಕೂಡಾ ಜನರಲ್ಲಿ ಬೇಸರ ತಂದಿರುವುದು ಮತ್ತೊಂದು ವಿಪರ್ಯಾಸ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ನಿಟ್ಟೂರು ಹೋಬಳಿ ಪತ್ರೆಮತ್ತಿಘಟ್ಟ ಗ್ರಾಮದಲ್ಲಿ ಕಾವೇರಿ ಜಲಾನಯನ ಯೋಜನೆಯ 25 ಲಕ್ಷ ರು.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಭಾವಿ ಸಚಿವರ ಸಿಡಿ ಹಗರಣದ ಬೆನ್ನಲ್ಲೇ ಕೆಲ ಸಚಿವರು ನ್ಯಾಯಾಲಯದ ಮೊರೆ ಹೋಗಿ ಅಪಪ್ರಚಾರಕ್ಕೆ ತಡೆ ನೀಡಿ ಎನ್ನುತ್ತಿರುವುದು ಮತ್ತೊಂದು ರೀತಿ ಸಂಶಯ ಹುಟ್ಟಿಸುತ್ತದೆ. ಸಾಮಾಜಿಕ ಹೋರಾಟಗಾರನೊಬ್ಬ ನನ್ನ ಬಳಿ ಇನ್ನೂ ಶಾಸಕರ ಸಿಡಿ ಎನ್ನುವುದಾದರೆ ಅದನ್ನು ಈ ಬಿಸಿಯಲ್ಲೇ ಬಿತ್ತರಿಸಲಿ. ಸಲ್ಲದ ಹೇಳಿಕೆ ನೀಡಿ ರಾಜಕಾರಣಿಗಳನ್ನು ಬೆದರಿಸುವ ತಂತ್ರವನ್ನು ಹೋರಾಟಗಾರರು ಬಿಡಬೇಕು ಎಂದರು.

ರಾಸಲೀಲೆ ಕೇಸ್ : ರಾಜಕಾರಣಿಗಳ ಬಗ್ಗೆ ಹೇಸಿಗೆ ಬರುವಂತಾಯ್ತು ..

ಕಾವೇರಿ ಜಲಾನಯನ ಯೋಜನೆಯಲ್ಲಿ 2 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕೆಲಸ ಈಗ ಆರಂಭವಾಗಿದೆ. ಚಿಕ್ಕಕುನ್ನಾಲ, ದೊಡ್ಡಕುನ್ನಾಲ, ಚಾಕೇನಹಳ್ಳಿ, ಕಿಟ್ಟದಕುಪ್ಪೆ ಗ್ರಾಮಗಳಲ್ಲಿ ಕೆಲಸ ಸಾಗಿದೆ. ಈ ಜತೆಗೆ 20 ಕೋಟಿ ರು.ಗಳ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲಿ ಚಾಲನೆ ದೊರೆಯಲಿದೆ. ಭೋಗಸಂದ್ರ, ಅದಲಗೆರೆ, ಬಂಡನಹಳ್ಳಿ, ಕರೇಗೌಡನಹಟ್ಟಿ, ನಲ್ಲೂರು, ದಿಬ್ಬದಹಳ್ಳಿ ಹಟ್ಟಿಗ್ರಾಮಗಳಲ್ಲಿ ಕೆಲಸಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎಂದ ಅವರು ಓವರ್‌ಲೋಡ್‌ ಮಣ್ಣು ತುಂಬಿದ ಟಿಪ್ಪರ್‌ಲಾರಿಗಳ ಚಾಲನೆಯಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಕ್ರಮಕ್ಕೆ ಸಾರಿಗೆ ಇಲಾಖಾಧಿ​ಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ತಾಲೂಕಿನಲ್ಲಿ ಚಾಲನೆ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವು ಮಾತ್ರ ಗ್ರಾಮ ಪಂಚಾಯಿತಿ ನಿರ್ವಹಣೆಗೆ ವಹಿಸಲಾಗಿದೆ. ಘಟಕ ನಿರ್ಮಿಸಿದ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿ ಹೊತ್ತು ಮೂರ್ನಾಲ್ಕು ವರ್ಷ ಕಾಲ ಕಳೆದು ದುರಸ್ತಿಗೆ ತರುತ್ತಿದ್ದಾರೆ. ಅವಧಿ ​ಮುಗಿದ ತಕ್ಷಣ ಪಂಚಾಯಿತಿ ವ್ಯಾಪ್ತಿಗೆ ಜವಾಬ್ದಾರಿ ವಹಿಸಿ ಜನರಿಗೆ ಶುದ್ಧ ನೀರು ಒದಗಿಸಲಾಗುವುದು ಎಂದರು.

ಹಾಗಲವಾಡಿ ಮತ್ತು ಚೇಳೂರು ಭಾಗದಲ್ಲಿ ಕೆಲ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಕಾಣಿಸಿಕೊಂಡಿದೆ. ಈ ಕೂಡಲೇ ಕ್ರಮಕ್ಕೆ ಅಧಿ​ಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಪಿಡಿಒಗಳ ಸಭೆ ಕರೆದು ನೀರಿನ ಅಭಾವ ಇರುವ ಗ್ರಾಮಗಳ ಗುರುತು ಮತ್ತು ತುರ್ತು ಕ್ರಮಕ್ಕೆ ಸೂಚಿಸಲಾಗುವುದು ಎಂದರು.

PREV
click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ