ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವೂ ಸಾಕಷ್ಟು ಗೊಂದಲ ಮೂಡಿಸಿದ್ದಾಗಿ ನಾಯಕರೋರ್ವರು ಹೇಳಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲು ಆಗ್ರಹಿಸಿದ್ದಾರೆ.
ತುಮಕೂರು (ಮಾ.07): ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ತನಿಖೆಯಾಗಿ ಒಂದು ಹಂತಕ್ಕೆ ಬರಬೇಕಾಗಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ತಿಪಟೂರು ತಾಲೂಕು ನೊಣವಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಈಗಾಗಲೇ ನೀಡಿರುವ ರಾಜಿನಾಮೆಯನ್ನು ಸರ್ಕಾರ ಸ್ವೀಕಾರ ಮಾಡಿದೆ ಎಂದ ಅವರು ಈ ವಿಚಾರವೇ ಸಾಕಷ್ಟುಗೊಂದಲ ಮೂಡಿಸುತ್ತಿದ್ದು ವಿಚಾರಣೆಯಾಗಬೇಕು ಎಂದರು.
ರಾಸಲೀಲೆ ಕೇಸ್ : ರಾಜಕಾರಣಿಗಳ ಬಗ್ಗೆ ಹೇಸಿಗೆ ಬರುವಂತಾಯ್ತು
ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ ವಹಿಸಲು ಹಾಗೂ ಬೆಂಬಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಆರು ಮಂದಿ ಸಚಿವರು ಯಾವ ವಿಚಾರಕ್ಕೆ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ತಿಳಿಯದೇ ಮಾತನಾಡುವುದು ಸೂಕ್ತವಲ್ಲ ಎಂದರು. ನ್ಯಾಯಾಲಯಕ್ಕೆ ಹೋಗಿರುವ ಅವಶ್ಯಕತೆ ಇತ್ತಾ ಎನ್ನುವುದು ಎನ್ನುವುದರ ಬಗ್ಗೆ ನಮಗೂ ಗೊಂದಲವಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಎಚ್ಚರದಿಂದ ಇರಬೇಕು. ಎಲ್ಲರಿಗೂ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ ಎಂದರು.